Select Your Language

Notifications

webdunia
webdunia
webdunia
webdunia

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭಾರತ ಭೇಟಿ: 10 ಆದ್ಯತೆಗಳು ಕೆಳಗಿವೆ

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭಾರತ ಭೇಟಿ: 10 ಆದ್ಯತೆಗಳು ಕೆಳಗಿವೆ
ನವದೆಹಲಿ , ಬುಧವಾರ, 17 ಸೆಪ್ಟಂಬರ್ 2014 (14:36 IST)
ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭಾರತಕ್ಕೆ ಮೂರು ದಿನಗಳ ಭೇಟಿಗಾಗಿ ಆಗಮಿಸಲಿದ್ದು, ಭಾರತದಲ್ಲಿ ವ್ಯಾಪಾರ ಮತ್ತು ಹೂಡಿಕೆಗೆ ಗಮನಾರ್ಹ ಉತ್ತೇಜನ ನೀಡಲು ಗಮನ ಹರಿಸಲಿದ್ದಾರೆ. ಇದಲ್ಲದೇ ಉಭಯ ರಾಷ್ಟ್ರಗಳ ನಡುವೆ ಆಗಾಗ್ಗೆ ಉದ್ವಿಗ್ನತೆ ಮೂಡಿಸುವ ವಿವಾದಾತ್ಮಕ ಗಡಿ ವಿಷಯದ  ಇತ್ಯರ್ಥಕ್ಕೆ ಗಮನಹರಿಸಲಿದ್ದಾರೆ. 
 
ಭಾರತ ಮತ್ತು ಚೀನಾದ 10 ಆದ್ಯತೆಗಳು
 
.1.ಚೀನಾ ಭಾರತದಲ್ಲಿ ಬುಲೆಟ್ ರೈಲು ಮತ್ತು ಇತರೆ ಅತಿ ವೇಗದ ರೈಲುಗಳ ಮೇಲೆ ಹೂಡಿಕೆಗೆ ಯೋಜಿಸಿದೆ ಮತ್ತು ದೇಶದ 50 ನಗರಗಳಲ್ಲಿ ಮೆಟ್ರೋ ರೈಲು ವ್ಯವಸ್ಥೆಗೆ ಸಹಕರಿಸಲಿದೆ.
2.ಚೀನಾದ ಬಂಡವಾಳ ಹೂಡಿಕೆ 400 ದಶಲಕ್ಷ ಡಾಲರ್‌ಗಳಾಗಿದ್ದು, ಗುಜರಾತಿಗೆ ಹೆಚ್ಚು ಬಂಡವಾಳ ಹರಿದುಬರಲಿದೆ.
3.ಕಳೆದ ವರ್ಷ ಭಾರತ -ಚೀನಾ ವ್ಯಾಪಾರ ಪ್ರಮಾಣ 66.4 ಶತಕೋಟಿ ಡಾಲರ್‌ಗಳಾಗಿತ್ತು.
4. ಭಾರತದ ರೈಲ್ವೆ ಮೇಲ್ದರ್ಜೆಯಲ್ಲಿ ಚೀನಾದ ಒತ್ತು ನೀಡುವ ನಿರೀಕ್ಷೆ
 
5.ಸಾಮೂಹಿಕ ಕೈಗೆಟಕುವ ದರದ ಗೃಹನಿರ್ಮಾಣದಲ್ಲಿ ಚೀನಾದ ಕೌಶಲ್ಯ ಮತ್ತು ಸಾಧನೆಗಳನ್ನು ಭಾರತ ಅಭ್ಯಸಿಸಲಿದೆ.
6. ಚೀನಾದ ಎಲೆಕ್ಟ್ರಾನಿಕ್ಸ್ ಮ್ತತು ಮೊಬೈಲ್ ಕಂಪೆನಿಗಳು ಗುಜರಾತಿನ ಕಾರ್ಜನ್ ಮತ್ತು ಸಾನಂದ್ ಪಾರ್ಕ್‌ಗಳಲ್ಲಿ ಬಂಡವಾಳ ಹೂಡಿಕೆ.
7.ಗುಜರಾತ್ ಮುಂತಾದ ರಾಜ್ಯಗಳ ಅನೇಕ ಶೈಕ್ಷಣಿಕ ಸಂಸ್ಥೆಗಳು ಚೀನಾದ ಸಂಸ್ಥೆಗಳ ಜೊತೆ ಸಹಯೋಗ.
 
8.ಸಾಂಸ್ಕೃತಿಕ ವಿನಿಮಯಗಳ ಉತ್ತೇಜನಕ್ಕೆ ಚೀನಾ ಮತ್ತು ಭಾರತದಿಂದ ಸಮಾನ ವೇದಿಕೆಗಳು.
9.ಬೀಜಿಂಗ್‌ನಿಂದ ಭಾರತದಲ್ಲಿ ಅನೇಕ ಕೈಗಾರಿಕೆ ಪಾರ್ಕ್‌ಗಳ ನಿರ್ಮಾಣ
10.ಚೀನಾ 100 ಶತಕೋಟಿ ಡಾಲರ್ ಬಂಡವಾಳ ಹೂಡಿಕೆಗಳ ಭರವಸೆ ನೀಡಿದೆ.

Share this Story:

Follow Webdunia kannada