ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ ಅತಿ ಜನಪ್ರಿಯ ಹಿಂದಿ ಚಿತ್ರನಟಿ ಅಲ್ಲದಿರಬಹುದು, ಆದರೆ ಅವರು ಇಂದು ಯುನೆಸ್ಕೋದಲ್ಲಿ ನಡೆಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಭಾಷಣವನ್ನು ಕೇಳಲು ಆಹ್ವಾನಿತರಾಗಿ ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನ ಪಡೆದ ಏಕೈಕ ಬಾಲಿವುಡ್ ನಟಿ ಎಂಬ ಹೆಗ್ಗಳಿಕೆ ಅವರದು.
ಈ ಸುದ್ದಿಯನ್ನು ಟ್ವಿಟರ್ ಮೂಲಕ ಅಭಿಮಾನಿಗಳಲ್ಲಿ ಹೇಳಿಕೊಂಡಿದ್ದಾರೆ ಮಲ್ಲಿಕಾ. "ಈ ಆಹ್ವಾನ ನನಗೆ ಸಿಕ್ಕ ಗೌರವ ಎಂದು ಭಾವಿಸುತ್ತೇನೆ. ಪ್ರಧಾನಿಯವರ ಭಾಷಣವನ್ನು ಕೇಳಲು ಕಾತರಳಾಗಿದ್ದೇನೆ", ಎಂದು ಅವರು ಟ್ವಿಟ್ ಮಾಡಿದ್ದಾರೆ.
ಮಲ್ಲಿಕಾ ಅವರನ್ನು ಆಹ್ವಾನಿಸಿದ್ದಕ್ಕೆ ಖುಷಿ ಪಡೋಣ. ಆದರೆ ಅವರನ್ನುಳಿದು ಬೇರೆ ಯಾವ ನಟಿ, ನಟಿಯರನ್ನು ಈ ಪ್ರತಿಷ್ಠಿತ ಸಂದರ್ಭಕ್ಕೆ ಆಹ್ವಾನಿಸಿಲ್ಲ ಎಂಬುದು ಮಾತ್ರ ಅರ್ಥವಾಗದ ಪ್ರಶ್ನೆ.