Select Your Language

Notifications

webdunia
webdunia
webdunia
webdunia

ಇಂದು ನನ್ನ ಜತೆ ಮಲಗುತ್ತೀಯಾ: ವರದಿಗಾರ್ತಿಗೆ ಕೇಳಿದ ಪಾನಮತ್ತ ಯುವಕ

ಇಂದು ನನ್ನ ಜತೆ ಮಲಗುತ್ತೀಯಾ: ವರದಿಗಾರ್ತಿಗೆ ಕೇಳಿದ ಪಾನಮತ್ತ ಯುವಕ
ಕಲೋನ್ , ಸೋಮವಾರ, 8 ಫೆಬ್ರವರಿ 2016 (17:47 IST)
ನೇರ ಪ್ರಸಾರವಾಗುತ್ತಿದ್ದ ದೂರದರ್ಶನ ಕಾರ್ಯಕ್ರಮವೊಂದರಲ್ಲಿ ಮೂವರು ಯುವಕರು ಕುಡಿದ ಮತ್ತಿನಲ್ಲಿ ಬೆಲ್ಜಿಯನ್ ಪತ್ರಕರ್ತೆಯ ಮೇಲೆ ಲೈಂಗಿಕ ಶೋಷಣೆ ನಡೆಸಿದ ಆಘಾತಕಾರಿ ಘಟನೆ ಜರ್ಮನಿಯಲ್ಲಿ ನಡೆದಿದೆ.  

ಹೊಸ ವರ್ಷದ ಸಂಜೆ ತಮ್ಮ ಮೇಲೆ ಲೈಂಗಿಕ ಆಕ್ರಮಣ ನಡೆದಿತ್ತು ಎಂದು ವಲಸಿಗರು ಆರೋಪಿದ ಮರುದಿನವೇ ಈ ಘಟನೆ ನಡೆದಿದೆ. ನೀವು ನನ್ನ ಜತೆ ಇಂದು ರಾತ್ರಿ ಮಲಗುತ್ತೀರಾ ಎಂದು ಯುವಕನೊಬ್ಬ ತನ್ನ ಕಿವಿಯಲ್ಲಿ ಪಿಸುಗುಟ್ಟಿದ ಎಂದು ಕಲೋನ್ ಕಾರ್ನಿವಾಲ್‌ನಿಂದ ವರದಿ ಮಾಡುತ್ತಿದ್ದ ಪತ್ರಕರ್ತೆ ಎಸ್ಮಿರಾಲ್ಡಾ ದೂರಿದ್ದಾಳೆ.
 
ನಾನು ಮಧ್ಯಾಹ್ನ 1.14 ರ ಸುಮಾರಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿದಾಗ ನನ್ನ ಹಿಂದೆ ಮೂರು ಜನ ಪಾನಮತ್ತರಾಗಿದ್ದ ಮೂವರು ನಿಂತಿದ್ದರು. ನಾನದನ್ನು ಗಮನಿಸಿರಲಿಲ್ಲ. ನನ್ನ ಕುತ್ತಿಗೆ ಹಿಂಬದಿಯಲ್ಲಿ ಒಬ್ಬಾತ ಚುಂಬಿಸಿದ. ಕಲೋನ್‌ನಲ್ಲಿ ಅಂದು ಮಹಿಳಾ ದಿನವಾಗಿದ್ದರಿಂದ ಚುಂಬನ ಪ್ರಕ್ರಿಯೆ ಸಾಮಾನ್ಯವಾಗಿತ್ತು. ಹೀಗಾಗಿ ನನ್ನನ್ನು ಚುಂಬಿಸಿದವರು ಯಾರು ಎಂದು ಪರಿಶೀಲಿಸದೆ ನಾನು ನನ್ನ ವರದಿಯನ್ನು ಮುಂದುವರೆಸಿದೆ. 
 
ಅಷ್ಟರಲ್ಲಿ ಇನ್ನೊಬ್ಬಾತ ಇಂದು ರಾತ್ರಿ ನನ್ನ ಕಿವಿಯಲ್ಲಿ ನನ್ನ ಜತೆ ಮಲಗುತ್ತೀಯಾ ಎಂದು ಹಾಡಿದ. ಜತೆಗೆ ನನ್ನ ಹೆಗಲ ಮೇಲೆ ಕೈ ಹಾಕಿದ. ಆ ಬಳಿಕ ನಾನು ಎಲ್ಲಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ನನ್ನ ಹಿಂಬದಿಯಲ್ಲಿ ನಿಂತಾತ ಅತ್ಯಂತ ಆಕ್ಷೇಪಾರ್ಹ ಭಂಗಿಗಳನ್ನು ಮಾಡುತ್ತಿದ್ದುದು ಕಂಡುಬಂತು ಎಂದು ಪತ್ರಕರ್ತೆ ಆರೋಪಿಸಿದ್ದಾಳೆ. 
 
ತಾಳ್ಮೆ ಕಳೆದುಕೊಂಡ ಪತ್ರಕರ್ತೆ ಆತನಿಗೆ ಅಲ್ಲಿಂದ ಜಾಗ ಖಾಲಿ ಮಾಡುವಂತೆ ಗದರಿಸಿದ್ದಾಳೆ. 
 
ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದಷ್ಟೇ ಅಲ್ಲದೆ ಸಿಟಿಯಲ್ಲಿ ನಡೆದ ಮಹಾ ಮಹೋತ್ಸವದಲ್ಲಿ ಒಟ್ಟು 22 ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ.

Share this Story:

Follow Webdunia kannada