ಮುಂಬೈ : ಟಾಟಾ ಸನ್ಸ್ ಒಡೆತನದ ಏರ್ ಇಂಡಿಯಾ 500 ವಿಮಾನಗಳನ್ನು ಆರ್ಡರ್ ಮಾಡುವ ಮೂಲಕ ವಾಯುಯಾನ ಕ್ಷೇತ್ರದಲ್ಲಿ ದಾಖಲೆ ಬರೆದಿದೆ.
ಇದು ಆಧುನಿಕ ವಿಮಾನಯಾನ ಕ್ಷೇತ್ರದಲ್ಲಿ ಏರ್ಲೈನ್ಸ್ ಕಂಪನಿಯೊಂದು ಮಾಡಿದ ಅತಿದೊಡ್ಡ ಆರ್ಡರ್ಗಳಲ್ಲಿ ಒಂದಾಗಿದೆ.
430 ಸಣ್ಣ ಮತ್ತು 30 ದೊಡ್ಡ ಗಾತ್ರದ ವಿಮಾನಗಳನ್ನು ಖರೀದಿಸಲು ಏರ್ ಇಂಡಿಯಾ ಮುಂದಾಗಿದ್ದು, ಮುಂದಿನ ಏಳರಿಂದ ಎಂಟು ವರ್ಷಗಳಲ್ಲಿ ವಿಮಾನಗಳು ಏರ್ ಇಂಡಿಯಾವನ್ನು ಸೇರಲಿದೆ.
ಕೋವಿಡ್ ಬಳಿಕ ವಿಮಾನಯಾನ ಕ್ಷೇತ್ರ ನಿರೀಕ್ಷೆಗಿಂತಲೂ ವೇಗವಾಗಿ ಬೆಳೆಯುತ್ತಿದೆ. ಈ ಕಾರಣಕ್ಕೆ ಏರ್ ಇಂಡಿಯಾ ಮೊದಲೇ ಆರ್ಡರ್ ಬುಕ್ಕಿಂಗ್ ಮಾಡಿದೆ.
ಮುಂದಿನ ಐದು ವರ್ಷಗಳಲ್ಲಿ ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರ್ಗಗಳಲ್ಲಿ ತನ್ನ ಮಾರುಕಟ್ಟೆ ಪಾಲನ್ನು 30% ಗೆ ಹೆಚ್ಚಿಸುವ ಗುರಿಯನ್ನು ಏರ್ ಇಂಡಿಯಾ ಹಾಕಿಕೊಂಡಿದೆ. 2024ರ ಅಂತ್ಯದ ವೇಳೆಗೆ ಏರ್ ಇಂಡಿಯಾಗೆ 50 ಹೊಸ ವಿಮಾನಗಳು ಸೇರ್ಪಡೆಯಾಗುವ ಸಾಧ್ಯತೆಯಿದೆ.