Webdunia - Bharat's app for daily news and videos

Install App

ರಸ್ತೆಯಲ್ಲೇ ಪೊಲೀಸಪ್ಪನಿಗೆ ಮಹಿಳೆಯ ಕಿಸ್ಸಿಂಗ್..!

Webdunia
ಶುಕ್ರವಾರ, 28 ಜುಲೈ 2017 (08:44 IST)
ಕೋಲ್ಕೊತ್ತಾ: ಒಳಗೆ ಸೇರಿದರೆ ಗುಂಡು ಎಂದು ಮಾಲಾಶ್ರೀ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದನ್ನು ನಾವು ನೋಡಿದ್ದೇವೆ. ಅಂತಹದ್ದೇ ಸಿನಿಮೀಯ ಘಟನೆ ಕೋಲ್ಕೋತ್ತಾದಲ್ಲಿ ನಡೆದಿದ್ದು, ಅದು ಅತಿರೇಕಕ್ಕೆ ಹೋಗಿದೆ.


ಕಂಠಪೂರ್ತಿ ಕುಡಿದಿದ್ದ ಮಹಿಳೆ ರಾತ್ರಿ ವೇಳೆ ಕಾರು ಚಲಾಯಿಸಿಕೊಂಡು ಹೋಗಿ ಟ್ಯಾಕ್ಸಿಯೊಂದಕ್ಕೆ ಡಿಕ್ಕಿ ಹೊಡೆದಿದ್ದಳು. ಆಗ ಟ್ಯಾಕ್ಸಿ ಡ್ರೈವರ್ ಮತ್ತು ಮಹಿಳೆ ನಡುವೆ ಜೋರಾಗಿ ವಾಗ್ವಾದ ನಡೆದಿದೆ. ಮದ್ಯದ ಅಮಲಿನಲ್ಲಿದ್ದ ಮಹಿಳೆ ಟ್ಯಾಕ್ಸಿ ಡ್ರೈವರ್ ಗೆ ಚೆನ್ನಾಗಿ ಹೊಡೆಯಲು ಪ್ರಾರಂಭಿಸಿಯೇ ಬಿಟ್ಟಳು. ಆಕೆ ಜತೆ ಕಾರಿನಲ್ಲಿ ಇನ್ನೊಬ್ಬ ಮಹಿಳೆ ಮತ್ತು ಪುರುಷನೂ ಇದ್ದರು.

ಕೊನೆಗೂ ಅಲ್ಲಿಗೆ ಬಂದ ಪೊಲೀಸ್ ಕಾನ್ಸ್ ಟೇಬಲ್ ಇವರ ಫೈಟಿಂಗ್ ಗೆ ಕೊನೆ ಹಾಡಿದ. ಆಗ ಮದ್ಯದ ಮತ್ತಿನಲ್ಲಿದ್ದ ಮಹಿಳೆಗೆ ಏನನಿಸಿತೋ, ಇದ್ದಕ್ಕಿದ್ದಂತೆ ಆ ಪೊಲೀಸ್ ಕಾನ್ಸ್ ಟೇಬಲ್ ನ್ನು ಹಿಡಿದು ಯದ್ವಾ ತದ್ವಾ ನಡು ರಸ್ತೆಯಲ್ಲೇ ಕಿಸ್ ಮಾಡಲು ಶುರುವಿಟ್ಟುಕೊಂಡಿದ್ದಾಳೆ! ಪೊಲೀಸ್ ಪೇದೆ ಗಾಬರಿಯಾಗಿ ಸ್ಥಳೀಯ ಮಹಿಳೆಯೊಬ್ಬರನ್ನು ಕರೆದು ಹೇಗಾದರೂ ಈ ಕಿಸ್ಸಿಂಗ್ ನಾರಿಯಿಂದ ಬಿಡಿಸಿಕೊಂಡು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾನೆ. ಇದೀಗ ಕುಡಿದು ಕಾರು ಚಲಾಯಿಸಿದ ಪ್ರಕರಣ ಮಹಿಳೆ ಮೇಲೆ ದಾಖಲಾಗಿದೆ.

ಇದನ್ನೂ ಓದಿ..  ರಾಕಿಂಗ್ ಸ್ಟಾರ್ ಗೆ ಜೋಡಿಯಾಗ್ತಾರಾ ರಕ್ಷಿತ್ ಶೆಟ್ಟಿ ಮುದ್ದಿನ ಹುಡುಗಿ?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ: ಎಸ್‌ಐಟಿಯಿಂದ ನಿಷ್ಪಕ್ಷಪಾತ ತನಿಖೆ ಎಂದ ಸಿಎಂ ಸಿದ್ದರಾಮಯ್ಯ

ಮಗನ ಮದುವೆ ಮುರಿಯಲು ಕಾರಣ ಬಿಚ್ಚಿಟ್ಟ ಶಾಸಕ ಪ್ರಭು ಚವಾಣ್, ಇದೆಲ್ಲ ಆ ಮಾಜಿ ಸಚಿವನ ಹುನ್ನಾರ

ಎಚ್‌ಆರ್‌ ಜತೆ ಸರಸವಾಡಿ ಫಜೀತಿಗೆ ಸಿಲುಕಿದ್ದ ಯುಎಸ್‌ ಟೆಕ್‌ ಕಂಪನಿ ಸಿಇಒ ರಾಜೀನಾಮೆ, ಎಚ್‌ಆರ್‌ ಅನ್ನು ರಜೆಯಲ್ಲಿ ಕಳುಹಿಸಿದ ಕಂಪನಿ

ಕಬಿನಿ ಜಲಾಶಯ ಭರ್ತಿ: ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್‌ ಜೊತೆಯಾಗಿ ಬಾಗಿನ ಅರ್ಪಣೆ

ಪೆಸಿಫಿಕ್ ಸಮುದ್ರದ ಬಳಿ ಪ್ರಬಲ ಭೂಕಂಪನ: ರಷ್ಯಾದ ಪೆನಿನ್ಸುಲಾಗೆ ಸುನಾಮಿ ಎಚ್ಚರಿಕೆ

ಮುಂದಿನ ಸುದ್ದಿ
Show comments