Select Your Language

Notifications

webdunia
webdunia
webdunia
webdunia

ಹಸಿ ಬಾಣಂತಿ ಮೇಲೆ ಬಸ್‌ನಲ್ಲಿ ಅತ್ಯಾಚಾರ; ಮಡಿಲಲ್ಲಿದ್ದ ಮಗು ಸಾವು

ಹಸಿ ಬಾಣಂತಿ ಮೇಲೆ ಬಸ್‌ನಲ್ಲಿ ಅತ್ಯಾಚಾರ; ಮಡಿಲಲ್ಲಿದ್ದ ಮಗು ಸಾವು
ರಾಂಪುರ , ಗುರುವಾರ, 10 ಮಾರ್ಚ್ 2016 (09:15 IST)
ಉತ್ತರ ಪ್ರದೇಶದಲ್ಲಿ ಘೋರಾತಿಘೋರ ಅಪರಾಧಗಳಿಗೆ ಕೊನೆ ಇಲ್ಲದಂತಾಗಿದೆ. ಇದಕ್ಕೆ ನಿದರ್ಶನವಾಗಿ 14 ದಿನಗಳ ಪುಟ್ಟ ಮಗುವಿನ ಜತೆ ಬಸ್ಸನ್ನೇರಿದ್ದ ಹಸಿ ಬಾಣಂತಿಯ ಮೇಲೆ ಕಾಮುಕರಿಬ್ಬರು ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ರಾಜ್ಯದ ರಾಂಪುರದಲ್ಲಿ ನಡೆದಿದೆ. 
 
ಮಂಗಳವಾರ ರಾತ್ರಿ ತನ್ನ ಹಸುಗೂಸು ಮತ್ತು ಮತ್ತೊಬ್ಬ ಮಗುವಿನ ಜತೆ ತನ್ನ ಊರಿಗೆ ಹೊರಟಿದ್ದ ಮಹಿಳೆಯ ಮೇಲೆ ಆಕೆ ಏರಿದ್ದ ಬಸ್ ಚಾಲಕ ಮತ್ತು ನಿರ್ವಾಹಕರಿಬ್ಬರು ಮುಗಿ ಬಿದ್ದಿದ್ದಾರೆ. ಎಲ್ಲ ಪ್ರಯಾಣಿಕರು ಇಳಿದು ಹೋಗುವುದನ್ನೇ ಕಾಯುತ್ತಿದ್ದ ದುರುಳರು 28 ವರ್ಷದ ಮಹಿಳೆ ಮತ್ತು ಇಬ್ಬರು ಮಕ್ಕಳು ನಿದ್ದೆಗೆ ಜಾರುತ್ತಿದ್ದಂತೆ ಆಕೆಯ ಮೇಲೆ ಅತ್ಯಾಚಾರಕ್ಕೆ ಮುಂದಾಗಿದ್ದಾರೆ.
 
ಆಕೆ ಅವರಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆಕೆಯ ಮಡಿಲಲ್ಲಿದ್ದ 14 ದಿನದ ಹಸುಗೂಸು ಕೆಳಕ್ಕೆ ಬಿದ್ದು ಮೃತಪಟ್ಟಿದೆ. ಅದ್ಯಾವುದೂ ಕಾಮುಕರ ಮೇಲೆ ಯಾವುದೇ ಪರಿಣಾಮವನ್ನುಂಟು ಮಾಡಿಲ್ಲ. ತಮ್ಮ ಕೃತ್ಯವನ್ನು ಮುಂದುವರೆಸಿದ್ದಾರೆ. 
 
ಪೀಡಿತೆ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. 

Share this Story:

Follow Webdunia kannada