Webdunia - Bharat's app for daily news and videos

Install App

ಪತ್ನಿಯನ್ನ ಕೂಡಿ ಹಾಕಿ ಅಸ್ವಾಭಾವಿಕ ಸೆಕ್ಸ್ ನಡೆಸುತ್ತಿದ್ದ ಪತಿ ಬಂಧನ

Webdunia
ಸೋಮವಾರ, 31 ಜುಲೈ 2017 (11:55 IST)
ಪಾಪಿ ಪತಿಯೊಬ್ಬ ಮಹಿಳೆಯನ್ನ ಕಬ್ಬಿಣದ ಸರಳಿನಲ್ಲಿ ಬಂಧಿಸಿ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಪ್ರಕರಣ ಉತ್ತರ ಪ್ರದೇಶದ ಶಾಮ್ಲಿಯಲ್ಲಿ ನಡೆದಿದೆ. ನೆರೆಹೊರೆಯ ಮಾಹಿತಿ ಮೇರೆಗೆ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು ಮಹಿಳೆಯನ್ನ ರಕ್ಷಿಸಿದ್ದು, 18 ವರ್ಷಗಳ  ಕರ್ಮಕಾಂಡವನ್ನ ಮಹಿಳೆ ಬಿಚ್ಚಿಟ್ಟಿದ್ದಾಳೆ.
 

ವೈದ್ಯನೆಂದು ಹೇಳಿಕೊಂಡಿದ್ದ ಪತಿ 18 ವರ್ಷಗಳ ಹಿಂದೆ ವಿವಾಹವಾಗಿದ್ದ. ನಿರಂತರವಾಗಿ ಮಹಿಳೆ ಜೊತೆ ಬಲವಂತವಾಗಿ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸುತ್ತಿದ್ದ. ಪ್ರತೀ ಸಾರಿ ಮಹಿಳೆ ವಿರೋಧಿಸಿದಾಗ ಅಮಾನುಷವಾಗಿ ದಂಡಿಸುತ್ತಿದ್ದ. ಇತ್ತೀಚೆಗೆ ಅವನ ಕ್ರೂರತನ ಮಿತಿಮೀರಿದ್ದು, ಮನೆಯ ಕೊಠಡಿಯಲ್ಲಿ ಕಬ್ಬಿಣದ ಸರಳಿನಿಂದ ಕಟ್ಟಿ ಕೂಡಿ ಹಾಕಿದ್ದ. ಉಪವಾಸ ಹಾಕಿ ಹಿಂಸಿಸುತ್ತಿದ್ದ.

3 ತಿಂಗಳಿಂದ ಮಹಿಳೆ ಕಾಣದ್ದಕ್ಕೆ ಅನುಮಾನಗೊಂಡ ನೆರೆಮನೆಯವರು ಮಹಿಳೆಯ ತವರು ಮನೆಗೆ ಮಾಹಿತಿ ನೀಡಿದ್ದಾರೆ. ಮಗಳ ಸುರಕ್ಷತೆ ಬಗ್ಗೆ ಆತಂಕಗೊಂಡ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಮನೆ ಮೇಲೆ ದಾಳಿ ನಡೆಸಿದ ಪೊಲೀಸರು ಗೃಹಬಂಧನದಲ್ಲಿದ್ದ ಮಹಿಳೆಯನ್ನ ಬಂಧಿಸಿದ್ದಾರೆ. ಬಿಡುಗಡೆ ಬಳಿಕ ಗಂಡನ ಹೀನ ಕೃತ್ಯವನ್ನ ನೊಂದ ಮಹಿಳೆ ಬಯಲಿ ಮಾಡಿದ್ಧಾರೆ. ಮದರಸಾದಲ್ಲಿ ಓದುತ್ತಿರುವ ಹೆಣ್ಣು ಮಕ್ಕಳು ಮನೆ ಬಂದಾಗ ಅವರ ಮೇಲೂ ಹಲ್ಲೆ ನಡೆಸಿದ್ಧಾನೆ ಎಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪಾಪಿ ಪತಿಯನ್ನ ಬಂಧಿಸಿ ಜೈಲಿಗಟ್ಟಿದ್ಧಾರೆ.

ಇದನ್ನೂ ಓದಿ.. ನಟಿ ಚಾರ್ಮಿಗೆ ಮುಟ್ಟಬಾರದ ಜಾಗದಲ್ಲಿ ಮುಟ್ಟಿದ ಪೊಲೀಸ್ ಪೇದೆ..!

ಇದನ್ನೂ ಓದಿ.. ಟ್ಯೂಶನ್`ಗೆ ಬಂದ ವಿದ್ಯಾರ್ಥಿಗಳಿಗೆ ಸೆಕ್ಸ್ ಸುಖ ನೀಡುವಂತೆ ಒತ್ತಾಯಿಸಿದ್ದ ಶಿಕ್ಷಕಿ ಬಂಧನ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ