Webdunia - Bharat's app for daily news and videos

Install App

ಅತ್ತೆ ಮಾವನ ಮೇಲೆ ಸೊಸೆಯಿಂದ ಪೈಶಾಚಿಕ ದೌರ್ಜನ್ಯ

Webdunia
ಮಂಗಳವಾರ, 31 ಮಾರ್ಚ್ 2015 (11:15 IST)
ಅತ್ತೆ, ಮಾವ, ಗಂಡ, ಮೈದುನ, ನಾದಿನಿ ಎಲ್ಲ ಸೇರಿ ಸೊಸೆಗೆ ಕಿರುಕುಳ ನೀಡುವ ಸುದ್ದಿಯನ್ನಂತೂ ಸಾಮಾನ್ಯವಾಗಿ ಕೇಳೇ ಇರುತ್ತೀರಾ. ಆದರೆ ಸೊಸೆಯೊಬ್ಬರು ತನ್ನ ಅತ್ತೆ- ಮಾವನ ಮೇಲೆ ಅಮಾನುಷವಾಗಿ ದೌರ್ಜನ್ಯ ನಡೆಸಿದ ಘಟನೆ ಇಂದೋರ್‌ನಲ್ಲಿ ನಡೆದಿದೆ

ತಾನು ದೈವ ಶಕ್ತಿಯುಳ್ಳವಳು ಎಂದು ಹೇಳಿ ತನ್ನ ಗಂಡನ ಮನೆಯವರನ್ನು ಬೆದರಿಸಿದ ಮಹಿಳೆ ಅವರ ಮೇಲೆ ತನ್ನ ಪೈಶಾಚಿಕತನವನ್ನು ಮೆರೆದಿದ್ದಾಳೆ. ತನ್ನ ಪತಿಯನ್ನು ಅಂಧವಿಶ್ವಾಸದಲ್ಲಿ ಸಿಲುಕಿಸುವಂತೆ ಮಾಡಿದ ಆಕೆ ಆತನಿಂದ ತನ್ನ ಕೈ ಕಾಲು ಒತ್ತಿಸಿಕೊಳ್ಳುವುದು, ಅಡುಗೆ ಮಾಡಿಸುವುದು, ಪಾತ್ರೆ ತೊಳೆಸುವುದು ಹೀಗೆ ಮನೆಗೆಲಸವನ್ನೆಲ್ಲಾ ಮಾಡಿಸಿಕೊಂಡು ಗುಲಾಮನನ್ನಾಗಿಸಿಕೊಂಡಿದ್ದಳು. ಆಕೆ ಎಸಗಿದ ಮತ್ತೂ ಹೇಯ ಕೃತ್ಯವೇನೆಂದರೆ ತನ್ನ ಅತ್ತೆ ಮಾವನಿಗೆ ಚಹಾದಲ್ಲಿ ಮೂತ್ರವನ್ನು ಸೇರಿಸಿ ಕುಡಿಸಿದ್ದು. 
 
ಆಕೆಯಲ್ಲಿ ದೇವರ ಶಕ್ತಿಯಿಲ್ಲ. ನಾಟಕವಾಡುತ್ತಿದ್ದಾಳೆ ಎಂದು ಬಹಿರಂಗವಾದಾಗ ಆಕೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ತಕ್ಷಣ ಆಕೆಯ ಗಂಡನ ಮನೆಯವರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು. ಆರೋಪಿ ಮತ್ತು ಆಕೆಗೆ ಸಾಥ್ ನೀಡಿದ್ದ ಸಹೋದರನ ಮೇಲೆ ಕೌಟುಂಬಿಕ ಹಿಂಸೆ ಕಾಯಿದೆಯಡಿ ಪ್ರಕರಣ ದಾಖಲಾಗಿದೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments