Select Your Language

Notifications

webdunia
webdunia
webdunia
webdunia

ಅಮಾನುಷ ಹತ್ಯೆ: ನಾಲ್ಕು ಮಕ್ಕಳ ಸಮೇತ ತಾಯಿ ಬಲಿ

ಅಮಾನುಷ ಹತ್ಯೆ: ನಾಲ್ಕು ಮಕ್ಕಳ ಸಮೇತ ತಾಯಿ ಬಲಿ
ಮೀರತ್ , ಮಂಗಳವಾರ, 27 ಜನವರಿ 2015 (11:36 IST)
ಮಹಿಳೆ ಮತ್ತು ಆಕೆಯ ನಾಲ್ಕು ಜನ ಮಕ್ಕಳು ಸೇರಿದಂತೆ 6 ಜನರನ್ನು ಭೀಕರವಾಗಿ ಕೊಲೆ ಮಾಡಿದ ಘಟನೆ ಮೀರತ್‌ನಲ್ಲಿ ನಡೆದಿದೆ.
 
ಸುಹೈಲ್ ಗಾರ್ಡನ್‌ನಲ್ಲಿ ಸೋಮವಾರ ಆ ಘಟನೆ ನಡೆದಿದ್ದು, ಸಾವನ್ನಪ್ಪಿದ ದುರ್ದೈವಿಗಳನ್ನು ರುಕ್ಸಾನಾ ಮತ್ತು ಆಕೆಯ ಮಕ್ಕಳಾದ ರಿನ್ಸಾ (20), ಜೂಲಿ 8, ಗೂಂಗಿ 6, ಸುಹೈಲ್ ಎಂದು ಗುರುತಿಸಲಾಗಿದೆ. ಇವರ ಜತೆ ಅಪರಿಚಿತ ವ್ಯಕ್ತಿಯೊಬ್ಬ ಕೂಡ ಕೊಲೆಗೀಡಾಗಿದ್ದು, ನಾಲ್ವರ ದೇಹಗಳು ಅವರ ಮನೆಯೊಳಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. 
 
ಎಲ್ಲ 6 ಜನರನ್ನು ಹರಿತವಾದ ಆಯುಧದಿಂದ ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
 
ಮೊದಲು ಪೊಲೀಸರಿಗೆ ರುಕ್ಸಾನಾ ಮತ್ತು ಒಬ್ಬ ಅಪರಿಚಿತ ದೇಹ ಗುಜ್ಜರ್ ಚೌಕ್‌ನಲ್ಲಿ ಪತ್ತೆಯಾಗಿತ್ತು. ನಂತರ ಆಕೆಯ ಮನೆಗೆ ಹೋಗಿ ನೋಡಲಾಗಿ ರುಕ್ಸಾನಾ ಮಕ್ಕಳು ಕೂಡ ಕೊಲೆಗೀಡಾಗಿದ್ದುದು ಕಂಡುಬಂತು. 
 
ಭೂವಿವಾದದ ಹಿನ್ನೆಲೆಯಲ್ಲಿ ಅವರನ್ನು ಕೊಲೆ ಮಾಡಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. 
 
ಮೃತಳ ಪತಿ ತನ್ನ ಸಹೋದರನ ಜತೆಗಿನ ಭೂವಿವಾದದ ಪ್ರಕರಣದಲ್ಲಿ ಜೈಲುವಾಸವನ್ನು ಅನುಭವಿಸುತ್ತಿದ್ದಾನೆ ಎಂದು ತಿಳಿದು ಬಂದಿದೆ. 

Share this Story:

Follow Webdunia kannada