Select Your Language

Notifications

webdunia
webdunia
webdunia
webdunia

ಮಾವನ ಲೈಂಗಿಕ ಬಯಕೆಗೆ ನಿರಾಕರಣೆ; ಪತ್ನಿಯನ್ನು ಮನೆಯಿಂದ ಹೊರ ಹಾಕಿದ ಪತಿ

ಮಾವನ ಲೈಂಗಿಕ ಬಯಕೆಗೆ ನಿರಾಕರಣೆ; ಪತ್ನಿಯನ್ನು ಮನೆಯಿಂದ ಹೊರ ಹಾಕಿದ ಪತಿ
ಜೈಪುರ್ , ಮಂಗಳವಾರ, 4 ಆಗಸ್ಟ್ 2015 (16:54 IST)
ಮಾವನ (ಪತಿಯ ತಂದೆ) ಲೈಂಗಿಕ ಬಯಕೆಗೆ ಸ್ಪಂದಿಸಲು ನಿರಾಕರಿಸಿದರೆ ಮನೆಯಿಂದ ಹೊರಕ್ಕೆ ಹಾಕುತ್ತೇನೆ ಎಂದು ಪತಿಯೇ ಪತ್ನಿಗೆ ತಾಕೀತು ಮಾಡಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ. 
7 ವರ್ಷಗಳ ಹಿಂದೆ ಹರಿದಾಸ್ ಎನ್ನುವವರ ಮಗನ ಜತೆ ಆಕೆಯ ವಿವಾಹವಾಗಿತ್ತು. ಆರಂಭದ ದಿನಗಳಲ್ಲಿ ಎಲ್ಲವೂ ಚೆನ್ನಾಗಿತ್ತು. ದಂಪತಿಗಳಿಗೊಂದು ಮಗಳು ಹುಟ್ಟಿದ್ದಳು. 
 
ನಂತರ ಆಕೆಯ ಪತಿ ಉದ್ಯೋಗದ ನಿಮಿತ್ತ ಬಹಳ ದಿನಗಳ ಕಾಲ ಆಕೆಯಿಂದ ದೂರ ಉಳಿಯತೊಡಗಿದ. ಆ ಸಂದರ್ಭದಲ್ಲಿ ಆಕೆಯ ಮಾವ ಸೊಸೆಯ ಜತೆ ಅಸಭ್ಯವಾಗಿ ನಡೆದುಕೊಳ್ಳಲು ಪ್ರಾರಂಭಿಸಿದ್ದಾನೆ. 
 
ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಆಕೆ ಈ ಬಗ್ಗೆ ಪತಿಯ ಬಳಿ ದೂರಿದ್ದಾಳೆ. ಅದಕ್ಕಾತ ಆಕೆಯ ಪರ ವಹಿಸದೇ ತಂದೆಗೆ ಸಹಕರಿಸು, ಇಲ್ಲದಿದ್ದರೆ ಮನೆಯಿಂದ ಹೊರಗೆ ಹಾಕುತ್ತೇನೆ ಎಂದು ಆಕೆಗೆ ಬೆದರಿಕೆ ಹಾಕಿದ್ದಾನೆ. 
 
ಜೂನ್ 19 ರಂದು ಆಕೆಯ ಕೋಣೆಗೆ ನುಗ್ಗಿದ ಮಾವ ಅತ್ಯಾಚಾರ ಎಸಗಲು ಪ್ರಯತ್ನಿಸಿದ್ದಾನೆ.  ಕಿರುಚಾಟ ಕೇಳಿ ಓಡಿ ಬಂದ ಆಕೆಯ ಭಾವ ಮತ್ತು ನಾದಿನಿ ಆಕೆಯನ್ನು ರಕ್ಷಿಸಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 
 
ಆದರೆ ಪೊಲೀಸರು ಸಹ ಆಕೆಯ ದೂರನ್ನು ದಾಖಲಿಸಿಕೊಳ್ಳಲು ನಿರಾಕರಿಸಿದಾಗ ಅವರು ಪೊಲೀಸ್ ಅಧೀಕ್ಷಕರನ್ನು ಭೇಟಿಯಾಗಿ ದೂರನ್ನು ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ. 

Share this Story:

Follow Webdunia kannada