ತನ್ನ ಜತೆ ಅಸಭ್ಯವಾಗಿ ವರ್ತಿಸಿದ ಪೊಲೀಸ್ ಸಬ್ ಇನ್ಸಪೆಕ್ಟರ್‌ನನ್ನು ಮಹಿಳೆಯೋರ್ವರು ಮನಬದಂತೆ ಥಳಿಸಿದ ಪ್ರಸಂಗ ಗುಜರಾತಿನ ಅಹಮದಾಬಾದಿನಲ್ಲಿ ನಡೆದಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿದೆ.
ಒಧಾವ್ ವೊಲೀಸ್ ಠಾಣೆಯಲ್ಲಿ ಸಹಾಯಕ ಇನ್ಸಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಅಮೃತ್ ಜೀ ಕುಡಿದ ಮತ್ತಿನಲ್ಲಿ ತರಕಾರಿ ಮಾರುವವಳ ಜತೆ ಅಸಭ್ಯವಾಗಿ ವರ್ತಿಸಿದ್ದ. ಇದರಿಂದ ಸಿಟ್ಟಿಗೆದ್ದ ಆಕೆ ಸಾರ್ವಜನಿಕರೆದುರಲ್ಲೇ ಮನಬಂದಂತೆ ಥಳಿಸಿದ್ದಾಳೆ. ಅಲ್ಲಿದ್ದ ಜನರು ಮಹಿಳೆಯನ್ನೇ ಬೆಂಬಲಿಸಿದ್ದಾರೆ.
ಪ್ರತ್ಯಕ್ಷದರ್ಶಿಯೊಬ್ಬರು ಈ ದೃಶ್ಯಾವಳಿಗಳಿಗಳನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ.
ವಿಡಿಯೋ ನೋಡಿ ಎಚ್ಚೆತ್ತುಕೊಂಡ ನಗರ ಪೊಲೀಸರು ಅಮೃತ್ ಜೀನನ್ನು ಅಮಾನತು ಮಾಡಿದ್ದಾರೆ.