Webdunia - Bharat's app for daily news and videos

Install App

ವಿಮಾನದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ!

Webdunia
ಶುಕ್ರವಾರ, 11 ಫೆಬ್ರವರಿ 2022 (12:55 IST)
ನವದೆಹಲಿ : ಅಮೆರಿಕದ ನ್ಯೂಜೆರ್ಸಿಯಿಂದ ಲಂಡನ್‌ಗೆ  ತೆರಳುತ್ತಿದ್ದ ವಿಮಾನದ ಬಿಸಿನೆಸ್ ಕ್ಲಾಸ್‌ನಲ್ಲಿ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಅತ್ಯಾಚಾರ ಎಸಗಲಾಗಿದೆ.

ಪ್ರಕರಣದ ಆರೋಪಿಯನ್ನು ಬ್ರಿಟನ್‌ನಲ್ಲಿ ಬಂಧಿಸಲಾಗಿದ್ದು, ನಂತರ ಅವರಿಗೆ ಜಾಮೀನು ಮಂಜೂರು ಮಾಡಲಾಗಿದೆ.

ದಿ ಸನ್ ವರದಿಯ ಪ್ರಕಾರ, ಘಟನೆಯ ಸಮಯದಲ್ಲಿ ಇತರ ಪ್ರಯಾಣಿಕರು ಮಲಗಿದ್ದರು ಎಂದು ಹೇಳಲಾಗಿದೆ. ಈ ಘಟನೆ ಯುನೈಟೆಡ್ ಏರ್‌ಲೈನ್ಸ್ ವಿಮಾನದಲ್ಲಿ ಕಳೆದ ಸೋಮವಾರ ನಡೆದಿದೆ ಎಂದು ಹೇಳಲಾಗಿದೆ.

ಘಟನೆಯ ನಂತರ ಸಂತ್ರಸ್ತ ಮಹಿಳೆ ಏರ್‌ಲೈನ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ನಂತರ ವಿಮಾನಯಾನ ಸಿಬ್ಬಂದಿ ಇಂಗ್ಲೆಂಡ್ ನ  ಪೊಲೀಸರಿಗೆ ಮಾಹಿತಿ ನೀಡಿದರು. ನ್ಯೂಜೆರ್ಸಿಯಿಂದ ಲಂಡನ್‌ಗೆ ನೇರ ವಿಮಾನಯಾನ ಅಂದಾಜು 7 ಗಂಟೆಯದ್ದಾಗಿದೆ.

ವಿಮಾನವು ಇಂಗ್ಲೆಂಡ್ ನ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಇಳಿದ ನಂತರ, ಆಗಮಿಸಿದ ಪೊಲೀಸ್ ಅಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದಾರೆ. ಬಳಿಕ ಸಂತ್ರಸ್ಥೆಯನ್ನು ರೇಪ್ ಕೌನ್ಸೆಲಿಂಗ್ ವಿಭಾಗಕ್ಕೆ ಕರೆದೊಯ್ಯಲಾಗಿದೆ.

ಅಧಿಕಾರಿಗಳು ವಿಮಾನದ ವಿಧಿವಿಜ್ಞಾನ  ಪರೀಕ್ಷೆಯನ್ನೂ ನಡೆಸಿದ್ದು, ಸಂತ್ರಸ್ಥ ಮಹಿಳೆ ಹಾಗೂ ಅರೋಪಿ ಇಬ್ಬರ ವಯಸ್ಸೂ 40 ಎಂದು ಹೇಳಲಾಗಿದೆ.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಜೆಪಿಯ ಸ್ಥಾಪಕ ಅಭಿಜೀತ್ ದಿಪ್ಕೆಗೆ ಇದೇನಾಯಿತು, ಮನೆಗೆ ಬಂದ ವೈದ್ಯರ ತಂಡ

ಅನೈತಿಕ ಸಂಬಂಧ ಶಂಕೆಗೆ ಪತ್ನಿಯನ್ನು ಕೊಂದು ವಿಡಿಯೋ ಕಾಲ್‌ ಮಾಡಿ ನೇಣಿಗೆ ಶರಣಾದ ಪತಿ, ಮಕ್ಕಳಿಬ್ಬರ ಬದುಕು ಅತಂತ್ರ

ದರ ಏರಿಕೆಯಿಂದ ಶಾಕ್ ಆಗಿದ್ದ ಮೀನು ಪ್ರಿಯರಿಗೆ ಇದೀಗ ಗುಡ್‌ನ್ಯೂಸ್‌

Video,ಇಡೀ ರಾಜ್ಯ ಪ್ರಧಾನಿ ನರೇಂದ್ರ ಮೋದಿ ಜತೆ ಇದೆ: ಡಿಕೆ ಶಿವಕುಮಾರ್‌

ಯುವ ಸಮುದಾಯದಿಂದ ಟೀಕೆಗೆ ಗುರಿಯಾಗಿದ್ದರೂ, ಮೈಸೂರಲ್ಲಿ ಯುವಜನರ ಸಾಧನೆಗೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ

ಮುಂದಿನ ಸುದ್ದಿ
Show comments