Select Your Language

Notifications

webdunia
webdunia
webdunia
webdunia

ಕಾರು ಪಾರ್ಕಿಂಗ್ ಪ್ರದೇಶದಲ್ಲಿ ಯುವತಿಯ ಮೇಲೆ ಅತ್ಯಾಚಾರ

ಕಾರು ಪಾರ್ಕಿಂಗ್ ಪ್ರದೇಶದಲ್ಲಿ ಯುವತಿಯ ಮೇಲೆ ಅತ್ಯಾಚಾರ
ನವದೆಹಲಿ , ಸೋಮವಾರ, 3 ಆಗಸ್ಟ್ 2015 (16:16 IST)
ಸಾಕೇತ್ ಪ್ರದೇಶದಲ್ಲಿರುವ ಪಿವಿಆರ್ ಥಿಯೇಟರ್ ಬಳಿ ರಾತ್ರಿ 8 ಗಂಟೆಗೆ 24 ವರ್ಷ ವಯಸ್ಸಿನ ಮಹಿಳೆಯ ಮೇಲೆ ಆರೋಪಿಯೊಬ್ಬ ಅತ್ಯಾಚಾರವೆಸಗಿದ ಘಟನೆ ವರದಿಯಾಗಿದೆ. 
 
ಆರೋಪಿ ಸಾಜಿದ್ ಅತ್ಯಾಚಾರಕ್ಕೊಳಗಾದ ಮಹಿಳೆಯನ್ನು ಉದ್ಯೋಗ ಕೊಡಿಸುವ ನೆಪದಲ್ಲಿ ಕಾರಿನಲ್ಲಿ ಕರೆದುಕೊಂಡು ಕೆಲ ಪ್ರದೇಶಗಳನ್ನು ಸುತ್ತಿಸಿದ ನಂತರ ಪಿವಿಆರ್ ಸಿನೆಮಾ ಥಿಯೇಟರ್‌ನ ಪಾರ್ಕಿಂಗ್ ಪ್ರದೇಶಕ್ಕೆ ಕರೆದುಕೊಂಡು ಬಂದು ಅತ್ಯಾಚಾರವೆಸಗಿದ್ದಾನೆ ಎಂದು ರೇಪ್‌ಗೊಳಗಾದ ಯುವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.  
 
ಯುವತಿಗೆ ತಂಪು ಪಾನೀಯದಲ್ಲಿ ಆರೋಪಿ ಮತ್ತು ಬರುವ ಔಷಧಿ ಬೆರೆಸಿ ನೀಡಿದ್ದಾನೆ. ಆಕೆ ಅರೆಪ್ರಜ್ಞಾವಸ್ಥೆಯಲ್ಲಿದ್ದಾಗ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಯುವತಿ ಸಂಪೂರ್ಣವಾಗಿ ಪ್ರಜ್ಞೆ ಕಳೆದಕೊಳ್ಳದ ಹಿನ್ನೆಲೆಯಲ್ಲಿ ಜೋರಾಗಿ ಕೂಗಿ ನೆರವು ಕೋರಿದ್ದಾಳೆ. ಪಾರ್ಕಿಂಗ್‌ನಲ್ಲಿದ್ದ ಗಾರ್ಡ್‌ಗಳು ಮನಬಂದಂತೆ ಥಳಿಸಿ ಆರೋಪಿ ಸಾಜಿದ್‌ನನ್ನು ಪೊಲೀಸ್ ವಶಕ್ಕೆ ಒಪ್ಪಿಸಿದ್ದಾರೆ.
 

Share this Story:

Follow Webdunia kannada