Select Your Language

Notifications

webdunia
webdunia
webdunia
webdunia

ಕಾರಿನಲ್ಲಿಯೇ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಕಾರು ಚಾಲಕ

ಕಾರಿನಲ್ಲಿಯೇ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಕಾರು ಚಾಲಕ
ನವದೆಹಲಿ , ಶುಕ್ರವಾರ, 10 ಏಪ್ರಿಲ್ 2015 (18:02 IST)
32 ವರ್ಷ ವಯಸ್ಸಿನ ಮಹಿಳೆಯ ಮೇಲೆ ಕ್ಯಾಬ್ ಚಾಲಕ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರವೆಸಗಿದ ಘಟನೆ ವರದಿಯಾಗಿದೆ    ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆರೋಪಿ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ನಿನ್ನೆ ರಾತ್ರಿ 10.30ರ ಸುಮಾರಿಗೆ ದ್ವಾರಕಾ ಮೆಟ್ರೋ ರೈಲು ನಿಲ್ದಾಣದಿಂದ ಮಧು ವಿಹಾರ್ ಪ್ರದೇಶಕ್ಕೆ ತೆರಳಲು ಮಹಿಳೆ ಕ್ಯಾಬ್ ಬಾಡಿಗೆಗೆ ಪಡೆದಿದ್ದಳು. ಆರೋಪಿ ಕಾರು ಚಾಲಕ ಸಿಎನ್‌ಜಿ ಭರಿಸುವ ನೆಪದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕಾರಿನಲ್ಲಿಯೇ ಅತ್ಯಾಚಾರವೆಸಗಿದ್ದಾನೆ.  

ಆರೋಪಿಯನ್ನು ನ್ಯಾಯಾಂಗದ ವಶಕ್ಕೆ ಒಪ್ಪಿಸಲಾಗಿದ್ದು ವಿಚಾರಣೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Share this Story:

Follow Webdunia kannada