Webdunia - Bharat's app for daily news and videos

Install App

ಕಾಮುಕ ತಂದೆಯಿಂದ ವಿವಾಹಿತ ಪುತ್ರಿಯ ಮೇಲೆ ನಿರಂತರ ಎರಡು ವರ್ಷಗಳಿಂದ ಅತ್ಯಾಚಾರ

Webdunia
ಬುಧವಾರ, 10 ಫೆಬ್ರವರಿ 2016 (16:19 IST)
ಆಘಾತಕಾರಿ ಘಟನೆಯೊಂದರಲ್ಲಿ 28 ವರ್ಷದ ವಿವಾಹಿತ ಮಹಿಳೆಯ ಮೇಲೆ ಆಕೆಯ ತಂದೆಯೇ ಎರಡು ವರ್ಷಗಳ ಕಾಲ ನಿರಂತರವಾಗಿ ಅತ್ಯಾಚಾರವೆಸಗಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.
 
ವರದಿಗಳ ಪ್ರಕಾರ, ಮಹಿಳೆಯ ತಂದೆ ಸರಪಂಚನಾಗಿದ್ದು,ಆಕೆಯ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ್ದಲ್ಲದೇ ಆಕೆಯ ಅತ್ತೆ-ಮಾವನ ಕುಟುಂಬದ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸುವಂತೆ ಒತ್ತಡ ಹೇರಿದ್ದನು ಎನ್ನಲಾಗಿದೆ.
 
ಮಹಿಳೆಯ ಮೇಲೆ ತಂದೆಯ ಸಹೋದರರ ಪುತ್ರರು ಕೂಡಾ ಅತ್ಯಾಚಾರವೆಸಗಿದ್ದು, ಅತ್ಯಾಚಾರವೆಸಗಿದ ಘಟನೆಯನ್ನು ಬಹಿರಂಗಪಡಿಸಿದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಜೀವ ಬೆದರಿಕೆ ಹಾಕಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
 
ಆದಾಗ್ಯೂ, ಮಹಿಳೆ ಬೈಜು ಪೊಲೀಸ್ ಠಾಣೆಗೆ ತೆರಳಿ ತಂದೆಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರದ ದೂರು ದಾಖಲಿಸಿದ್ದಾಳೆ.
 
ಕಳೆದ 2004ರಲ್ಲಿ ಮಹಿಳೆಯನ್ನು ಗೋಡು ಗ್ರಾಮದ ಯುವಕನೊಂದಿಗೆ ವಿವಾಹವಾಗಿತ್ತು. 2008ರಲ್ಲಿ ಅತ್ತೆ ಮಾವನ ವಿರುದ್ಧ ವರದಕ್ಷಿಣೆ ಕಿರುಕುಳ ದಾಖಲಿಸುವಂತೆ ಪುತ್ರಿಯನ್ನು ತಂದೆ ಒತ್ತಾಯಿಸಿದ್ದ.ಆದರೆ ತದನಂತರ ಹಿರಿಯರ ಮಧ್ಯ ಪ್ರವೇಶದಿಂದ ಸಮಸ್ಯೆ ಇತ್ಯರ್ಥವಾಗಿತ್ತು.
 
2014ರಲ್ಲಿ ಮತ್ತೆ ಪುತ್ರಿಯ ಮೇಲೆ ಒತ್ತಡ ಹೇರಿದ ತಂದೆ, ಅತ್ತೆ ಮಾವನ ವಿರುದ್ಧ ಮತ್ತೊಂದು ನಕಲಿ ಪ್ರಕರಣ ದಾಖಲಿಸುವಂತೆ ಬೆದರಿಸುತ್ತಿದ್ದ. ಆದರೆ ಪುತ್ರಿ ಅತ್ತೆ ಮಾವನ ವಿರುದ್ಧ ಪ್ರಕರಣ ದಾಖಲಿಸಲು ನಿರಾಕರಿಸಿದಾಗ ಆಕೆಯನ್ನು ಮನೆಯಲ್ಲಿ ಕೂಡಿಹಾಕಿ ಎರಡು ವರ್ಷಗಳ ಕಾಲ ಆಕೆಯ ತಂದೆ ಅತ್ಯಾಚಾರವೆಸಗಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments