Select Your Language

Notifications

webdunia
webdunia
webdunia
webdunia

ಪೇಯಿಂಗ್ ಗೆಸ್ಟ್ ಹೌಸ್ ಮಾಲೀಕನಿಂದ ಯುವತಿಯ ಮೇಲೆ ಅತ್ಯಾಚಾರ

ಪೇಯಿಂಗ್ ಗೆಸ್ಟ್ ಹೌಸ್ ಮಾಲೀಕನಿಂದ ಯುವತಿಯ ಮೇಲೆ ಅತ್ಯಾಚಾರ
ಗುರ್ಗಾಂವ್ , ಶನಿವಾರ, 28 ನವೆಂಬರ್ 2015 (13:53 IST)
ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ 21 ವರ್ಷ ವಯಸ್ಸಿನ ಯುವತಿಯನ್ನು ಪೇಯಿಂಗ್ ಗೆಸ್ಟ್ ಹೌಸ್ ಮಾಲೀಕನೊಬ್ಬ ಆಕೆಯ ಮೇಲೆ ಅತ್ಯಾಚಾರವೆಸಗಿದ ಹೇಯ ಘಟನೆ ವರದಿಯಾಗಿದೆ.
 
ಗುರುವಾರದಂದು ರಾತ್ರಿ ಕೋಣೆಗೆ ಒತ್ತಾಯಪೂರ್ವಕವಾಗಿ ನುಗ್ಗಿದ ಪೇಯಿಂಗ್ ಗೆಸ್ಟ್ ಹೌಸ್ ಮಾಲೀಕ ಧರ್ಮವೀರ್ ಠಾಕ್ರನ್, ನನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಯುವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
 
ಅತ್ಯಾಚಾರದ ಘಟನೆ ರಾತ್ರಿ ನಡೆದಿದ್ದರೂ ಮಾರನೇ ದಿನ ಬೆಳಿಗ್ಗೆ ಯುವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.  
 
ಒಂದು ವೇಳೆ, ಪೊಲೀಸರಿಗೆ ಮಾಹಿತಿ ನೀಡಿದಲ್ಲಿ ಗಂಬೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮಾಲೀಕ ಧರ್ಮವೀರ್, ಯುವತಿಗೆ ಬೆದರಿಸಿದ್ದನು ಎನ್ನಲಾಗಿದೆ. 
 
ಪೊಲೀಸರು ಆರೋಪಿಯ ವಿರುದ್ಧ ಅತ್ಯಾಚಾರದ ಪ್ರಕರಣ ದಾಖಲಿಸಿಕೊಂಡಿದ್ದು ಪ್ರಕರಣದ ತನಿಖೆ ಮುಂದುವರಿಸಿದ್ದಾರೆ. ಆರೋಪಿ ಪರಾರಿಯಾಗಿದ್ದು ಶೀಘ್ರದಲ್ಲಿಯೇ ಬಂಧಿಸುವ ವಿಶ್ವಾಸವಿದೆ ಎಂದು ಡಿಸಿಪಿ ದೀಪಕ್ ಸಹರನ್ ತಿಳಿಸಿದ್ದಾರೆ. 
 
ಅತ್ಯಾಚಾರಕ್ಕೊಳಗಾದ ಯುವತಿ ಪಂಜಾಬ್‌ನ ಲೂಧಿಯಾನಾ ನಗರಕ್ಕೆ ಸೇರಿದವಳಾಗಿದ್ದು,ಕಳೆದ ಕೆಲ ತಿಂಗಳುಗಳಿಂದ ಪಿಜಿಯಲ್ಲಿ ವಾಸವಾಗಿದ್ದಳು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

Share this Story:

Follow Webdunia kannada