Webdunia - Bharat's app for daily news and videos

Install App

ಲೈಂಗಿಕ ಕಿರುಕುಳ: ಟ್ವಿಟರ್‌ನಲ್ಲಿ ಪೊಲೀಸರಿಗೆ ದೂರು ನೀಡಿದ ಮಹಿಳೆ

Webdunia
ಗುರುವಾರ, 15 ಸೆಪ್ಟಂಬರ್ 2016 (17:18 IST)
ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯೊಬ್ಬಳಿಗೆ ಬೈಕ್ ಸವಾರನೊಬ್ಬ ಲೈಂಗಿಕ ಕಿರುಕುಳ ನೀಡಿದ್ದು ತಕ್ಷಣ ಆಕೆ ಟ್ವಿಟರ್ ಮೂಲಕ ಮುಂಬೈ ಪೊಲೀಸರಿಗೆ ದೂರು ನೀಡಿದ್ದಾಳೆ. 

ಗೋರೆಗಾಂವ್ ಪಶ್ಚಿಮದ ಪ್ರಗತಿ ನಗರದ ಎಮ್.ಜಿ, ರಸ್ತೆಯಲ್ಲಿ ಘಟನೆ ನಡೆದಿದ್ದು, ಅಪರಿಚಿತ ಬೈಕ್ ಸವಾರ ಕಪ್ಪು ಮೋಟಾರ್ ಬೈಕ್‌ ಚಾಲನೆ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಮಹಿಳೆಯ ಬಳಿ ಬರುತ್ತಿದ್ದಂತೆ ನಿಧಾನವಾಗಿ ಬೈಕ್ ಚಲಾಯಿಸಿದ ಆತ ಆಕೆಗೆ ಚಿವುಟಿದ್ದಾನೆ.
 
ಆತನಿಗೆ ನನ್ನ ಬ್ಯಾಗ್‌ನಿಂದ ಹೊಡೆಯಲು ಯತ್ನಿಸಿದೆ. ಆದರೆ ಆತ ಪರಾರಿಯಾದ. ಆತನ ಬೈಕ್ ನಂಬರ್ 2572 ಎಂದಾಕೆ ಮುಂಬೈ ಪೊಲೀಸ್‌ಗೆ ಟ್ವೀಟ್ ಮಾಡಿದ್ದಾಳೆ. 
 
ಸ್ಥಳೀಯರು ಸಹಾಯಕ್ಕೆ ಬರುವಷ್ಟರಲ್ಲಿ ಆತ ವೇಗವಾಗಿ ಬೈಕ್ ಚಲಾಯಿಸಿಕೊಂಡು ಪರಾರಿಯಾದ. ಆತ ನೀಲಿ ಶರ್ಟ್ ಧರಿಸಿದ್ದ. ಬಳಿಕ ಆಕೆ ಮುಂಬೈ ಪೊಲೀಸ್ ಠಾಣೆ ಸಹಾಯವಾಣಿ 100ಕ್ಕೆ ಕರೆ ಮಾಡಿದ್ದಾಳೆ. 
 
ನಾನು 100 ಕರೆ ಮಾಡಿದಾಗ ಮಹಿಳೆಯೋರ್ವರು ಕರೆ ಸ್ವೀಕರಿಸಿ ಕಟ್ ಮಾಡಿದರು ಎಂದಾಕೆ ಟ್ವಿಟರ್‌ನಲ್ಲಿ ಪೊಲೀಸರ ಅಸಹಕಾರದ ಬಗ್ಗೆ ಕೂಡ ದೂರಿದ್ದಾಳೆ. 
 
ಮಧ್ಯಾಹ್ನದ ಹೊತ್ತಲ್ಲಿ ನಡೆದು ಹೋಗುತ್ತಿದ್ದಾಗ ನನ್ನ ಜತೆ ಇಂತಹ ದುರ್ವರ್ತನೆ ತೋರಲಾಗಿದೆ. ನಾನೇನು ಪ್ರಚೋದನಾಕಾರಿ ಬಟ್ಟೆಗಳನ್ನು ತೊಟ್ಟಿದ್ದೆನಾ? ಮುಂಬೈ ಸುರಕ್ಷಿತ ಎಂದು ಭಾವಿಸಿದ್ದೆ, ಆದರೆ ಅದು ಸುಳ್ಳೆಂದು ಸಾಬೀತಾಯಿತು ಎಂದಾಕೆ ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹಾರಲು ಪರ್ಮಿಷನ್ ಬೇಕಾಗಿಲ್ಲ ಎಂದ ಶಶಿ ತರೂರ್: ಮುಂದಿನ ಸಲ ಬಿಜೆಪಿ ಪಕ್ಕಾ ಎಂದ ನೆಟ್ಟಿಗರು

ವಾಲ್ಮೀಕಿ ಹಗರಣ ಎಷ್ಟು ಕೋಟಿ, ವಂಚನೆಯಾಗಿದ್ದು ಹೇಗೆ ಎಂದ ಬಿಜೆಪಿ ನಾಯಕ ಬಂಗಾರು ಹನುಮಂತು

ವನ್ಯಜೀವಿ, ಮಾನವ ಸಂಘರ್ಷವನ್ನು ಪರಿಗಣಿಸದಿರುವುದೇ ಹುಲಿಗಳ ಸಾವಿಗೆ ಕಾರಣ: ಸುನೀಲ್ ಕುಮಾರ್‌ ವಿಷಾದ

ಅಮರನಾಥ ಯಾತ್ರೆಗೆ ಯಾತ್ರಿಕರ ಸಂಖ್ಯೆಯಲ್ಲಿ ಇಳಿಕೆ, ಇದೇ ಕಾರಣ ಎಂದ ಗವರ್ನರ್‌

ಬೇಸತ್ತು ಹೋದೆ: ಕ್ಯಾನ್ಸರ್‌ ರೋಗಿ ಅಜ್ಜಿಯನ್ನು ಬೀದಿಯಲ್ಲಿ ಬಿಡಲು ಕಾರಣ ಕೊಟ್ಟ ಮೊಮ್ಮಗ

ಮುಂದಿನ ಸುದ್ದಿ