Webdunia - Bharat's app for daily news and videos

Install App

ಇದು ಹತಾಶ ತಾಯಿಯ ಕರುಣಾಜನಕ ಕಥೆ

Webdunia
ಸೋಮವಾರ, 23 ಜನವರಿ 2017 (15:43 IST)
ಈ ತಾಯಿಯ ದುಃಖ ಯಾರಿಂದಲೂ ಅಳಿಸಲಾಗದ್ದು. ಹೋದ ವರ್ಷ ಪತಿಯನ್ನು ಕಳೆದುಕೊಂಡಿದ್ದ ಈಕೆ ಸರಿಯಾಗಿ ಒಂದು ವರ್ಷಕ್ಕೆ ಮೊನ್ನೆ ನಡೆದ ರೈಲು ಅಪಘಾತದಲ್ಲಿ ಇದ್ದಿಬ್ಬರು ಮಕ್ಕಳನ್ನು ಸಹ ಕಳೆದುಕೊಂಡು ದಿಕ್ಕೆಟ್ಟು ಹೋಗಿದ್ದಾಳೆ.

ಇದು 40 ವರ್ಷ ವಯಸ್ಸಿನ ಜಶೋಧಾಳ ಹೃದಯ ವಿದ್ರಾವಕ ಕಥೆ. ಶನಿವಾರ ರಾತ್ರಿ ಆಂಧ್ರದಲ್ಲಿ ನಡೆದ ಜಗದಲ್ಪುರ-ಭುವನೇಶ್ವರ ಎಕ್ಸಪ್ರೆಸ್ ರೈಲು ದುರಂತದಲ್ಲಾಕೆ ತನ್ನೆರಡು ಹದಿಹರೆಯದ ಮಕ್ಕಳನ್ನು ಕಳೆದುಕೊಂಡಿದ್ದಾಳೆ. ಸರಿಯಾಗಿ ತನ್ನ ಪತಿಯನ್ನು ಕಳೆದುಕೊಂಡ ಒಂದು ವರ್ಷಗಳ ನಂತರ ಆಕೆಗೆ ಮತ್ತೆಂದೂ ಮೇಳಲಾಗದಂತಹ ಆಘಾತ ಬರಸಿಡಿಲಿನಂತೆ ಬಡಿದಿದೆ. ರೈಲು ದುರಂತದಲ್ಲಿ ದುರ್ಮರಣವನ್ನಪ್ಪಿದ 39 ಜನರಲ್ಲಿ ಆಕೆಯ 16 ವರ್ಷದ ಮಗಳು ಮತ್ತು 18 ವರ್ಷದ ಮಗ ಕೂಡ ಸೇರಿದ್ದಾರೆ. 
 
ಘಟನೆ ವಿವರ: ಪೊಂಗಲ್ ಆಚರಣೆಗೆಂದು ಜಶೋಧಾ ತನ್ನೆರಡು ಮಕ್ಕಳ ಜತೆ ವಿಜಯನಗರದಿಂದ ಭವಾವಿಪಟ್ಣದಲ್ಲಿರುವ ತವರಿಗೆ ಹೋಗಿದ್ದಳು. ಅಲ್ಲಿಂದ ಮರಳುವಾಗ ರೈಲನ್ನೇರಿದ್ದಾಳೆ. ರೈಲು 9.30ಕ್ಕೆ ರಾಯಘಡ ತಲುಪುತ್ತಿದ್ದಂತೆ ತಾಯಿ ಮಕ್ಕಳು ಊಟ ಮಾಡಿ, ಕೆಲ ಹೊತ್ತು ಮಾತನಾಡಿ ವಿಜಯನಗರಮ್ ಹತ್ತಿರ ಬಂದಾಗ ಇಳಿಯಲು ಅನುಕೂಲವಾಗಲೆಂದು ಮೊಬೈಲ್‌ನಲ್ಲಿ ಆಲಾರಾಂ ಇಟ್ಟು ನಿದ್ದೆ ಹೋಗಿದ್ದಾರೆ. 
 
ರಾಯಘಡ ದಾಟಿದ 20 ನಿಮಿಷಗಳ ಬಳಿಕ ದೊಡ್ಡ ಶಬ್ಧ ಕೇಳಿ ಎಚ್ಚರವಾಯಿತು. ಯಾರೋ ರೈಲಿಗೆ ಕಲ್ಲು ಹೊಡೆಯುತ್ತಿದ್ದಾರೆನಿಸಿತು. ಮರುಕ್ಷಣಕ್ಕೆ ರೈಲು ಹಳಿ ತಪ್ಪಿರುವುದು ಅರಿವಾಯಿತು. ಸುತ್ತಲೆಲ್ಲ ಕೂಗಾಟ ಕೇಳಿ ಬಂತು. ನಾನು ಕಷ್ಟಪಟ್ಟು ಬೋಗಿಯಿಂದ ಹೊರಬಂದು ಮಕ್ಕಳಿಗಾಗಿ ಕಾದೆ. ಆದರೆ ಅವರು ಬರಲೇ ಇಲ್ಲ. ಅವರಿಬ್ಬರು ಬಾರದ ಲೋಕಕ್ಕೆ ಪಯಣಿಸಿಯಾಗಿತ್ತು ಎಂದು ಗದ್ಗದಿಸುತ್ತಾಳೆ ಆ ತಾಯಿ.
 
ವಿಜಯನಗರದ ನಿವಾಸಿಯಾದ ಜಶೋಧಾ ಪತಿ ಕಳೆದ ವರ್ಷ ಜನವರಿ 22 ರಂದು ಕಾಯಿಲೆಯಿಂದಾಗಿ ಕೊನೆಯುಸಿರೆಳೆದಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments