Select Your Language

Notifications

webdunia
webdunia
webdunia
webdunia

ಮಗಳ ಮೇಲೆ ಅತ್ಯಾಚಾರ ಮಾಡಲೆತ್ನಿಸಿದ ಪತಿಯನ್ನು ಕೊಂದ ಪತ್ನಿ

ಮಗಳ ಮೇಲೆ ಅತ್ಯಾಚಾರ ಮಾಡಲೆತ್ನಿಸಿದ ಪತಿಯನ್ನು ಕೊಂದ ಪತ್ನಿ
ಇಂದೋರ್ , ಶುಕ್ರವಾರ, 3 ಏಪ್ರಿಲ್ 2015 (12:16 IST)
ಸ್ವಂತ ಮಗಳ ಮೇಲೆ ಅತ್ಯಾಚಾರ ಮಾಡಲೆತ್ನಿಸಿದ ಪತಿಯನ್ನು ಪತ್ನಿಯೇ ಕೊಲೆಗೈದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. 

ಮೃತ ಪಟ್ಟ ಆರೋಪಿಯನ್ನು  ರವಿ ಅಲಿಯಾಸ್ ಚಂಪಿಯಾ ಎಂದು ಗುರುತಿಸಲಾಗಿದ್ದು, ಅಪರಾಧ ಹಿನ್ನೆಲೆಯುಳ್ಳವನಾಗಿರುವ ಆತನ ಮೇಲೆ 18 ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. 
 
ಗಂಡನ ಮನೆಯಲ್ಲಿ ಅತ್ತೆ ಮಾವಂದಿರ ಜತೆ  ಜಗಳವಾಡಿಕೊಂಡು 20 ವರ್ಷದ ಮಗಳು ತಾಯಿಯ ಮನೆಗೆ ಬಂದಿದ್ದಳು. ಘಟನೆ ನಡೆದ ದಿನ ಮನೆಗೆ ಬಂದಿದ್ದ ಯುವತಿಯ ಮಲತಂದೆ ರವಿ ಆಕೆಯ ಮೇಲೆ ಅತ್ಯಾಚಾರ ಮಾಡಲೆತ್ನಿಸಿದ್ದಾನೆ. ಅವನನ್ನು ತಡೆಯಲು ವಿಫಲಳಾದಾಗ ತಾಯಿ ಫೆಮಿದಾ (38) ಬೇರೆ ದಾರಿ ಕಾಣದೇ ಆತನ ಕಣ್ಣಿಗೆ ಮೆಣಸಿನ ಹುಡಿ ಹಾಕಿ ನಂತರ ಚಾಕು ಚುಚ್ಚಿ ಸಾಯಿಸಿದ್ದಾಳೆ.
 
ನಂತರ ಫೆಮಿದಾ ಚಂದನ್ ನಗರ್ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾಳೆ.
 
ಫೆಮಿದಾ 2006ರಲ್ಲಿ ತನ್ನ ಪ್ರಥಮ ಗಂಡನಿಂದ ವಿಚ್ಛೇದನ ಪಡೆದು ರವಿಯನ್ನು ವಿವಾಹವಾಗಿದ್ದಳು. 2010ರಲ್ಲಿ ಅವರಿಬ್ಬರು ಪ್ರತ್ಯೇಕವಾಗಿದ್ದರು. ಆದರೆ ಇತ್ತೀಚಿಗೆ ರವಿ ಪುನಃ ಫೆಮಿದಾ ಮನೆಗೆ ಬರುತ್ತಲಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. 

Share this Story:

Follow Webdunia kannada