ಆಮ್ ಆದ್ಮಿ ಪಕ್ಷ ವಜಾ ಮಾಡಿದ್ದ ಸಂದೀಪ್ ಕುಮಾರ್ ಇನ್ನಷ್ಟು ತೊಂದರೆಗೆ ಸಿಕ್ಕಿ ಬೀಳುವ ಸಾಧ್ಯತೆಯಿದೆ. ಸೆಕ್ಸ್ ಸಿಡಿಯಲ್ಲಿದ್ದ ಮಹಿಳೆ ಮಾಜಿ ಶಾಸಕನ ವಿರುದ್ಧ ದೆಹಲಿ ಠಾಣೆಯಲ್ಲಿ ದೂರು ನೀಡಿದ್ದಾಳೆ. ಸಂದೀಪ್ ಕುಮಾರ್ ತನಗೆ ಪಾನೀಯಕ್ಕೆ ಮದ್ದನ್ನು ಬೆರೆಸಿ ಕುಡಿಯಲು ಕೊಟ್ಟಿದ್ದರು.ಅದನ್ನು ಕುಡಿದ ಬಳಿಕ ಪ್ರಜ್ಞೆ ತಪ್ಪಿತು ಎಂದು ದೂರಿದ್ದಾಳೆ. ತಾನು ಕುಮಾರ್ ಬಳಿ ಪಡಿತರ ಚೀಟಿಗಾಗಿ ನೆರವು ಪಡೆಯಲು ತೆರಳಿದ್ದಾಗ ಈ ಘಟನೆ ನಡೆದಿದೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ.
ಆದಾಗ್ಯೂ, ಎಎಪಿ ವಕ್ತಾರ ಅಶುತೋಷ್ ಅವರು ಕುಮಾರ್ ಸಮ್ಮತಿಯ ಕೃತ್ಯ ತಪ್ಪಲ್ಲ. ಕ್ಯಾಬಿನೆಟ್‌ನಿಂದ ವಜಾ ಮಾಡಿದ್ದು ಪರಿಕಲ್ಪನೆ ವ್ಯವಸ್ಥಾಪನೆ ಗುರಿಯಿಂದ ಕೂಡಿದೆ ಎಂದಿದ್ದರು.
ಜವಾಹರಲಾಲ್ ನೆಹರು, ಮಹಾತ್ಮ ಗಾಂಧಿ ಮುಂತಾದ ಮುಖಂಡರು ಕೂಡ ಸಾಮಾಜಿಕ ಗಡಿಗಳಾಚೆ ಕಾಮನೆಗಳೊಂದಿಗೆ ಬದುಕಿದರು ಎಂದು ಅಶುತೋಷ್ ಹೇಳಿದರು. ಆದರೆ ಈಗ ಮಹಿಳೆ ದೂರು ನೀಡಿರುವುದರಿಂದ ಕುಮಾರ್ ಬಣ್ಣ ಬಯಲಾಗಿದೆ. ಸಂದೀಪ್ ಕುಮಾರ್ ಸೆಕ್ಸ್ ಸಿಡಿಯಲ್ಲಿರುವುದು ದೃಢಪಟ್ಟ ಬಳಿಕ ಕೇಜ್ರಿವಾಲ್ ಅವರನ್ನು ಸಚಿವ ಸ್ತಾನದಿಂದ ವಜಾ ಮಾಡಿದ್ದರು.