Select Your Language

Notifications

webdunia
webdunia
webdunia
webdunia

ಪೀಡಿಸಿದವನಿಗೆ ಚಪ್ಪಲಿಯೇಟು ಕೊಟ್ಟು ಪೊಲೀಸ್ ಠಾಣೆಗೆ ಎಳೆದು ತಂದ ಮಹಿಳೆ

ಪೀಡಿಸಿದವನಿಗೆ ಚಪ್ಪಲಿಯೇಟು ಕೊಟ್ಟು ಪೊಲೀಸ್ ಠಾಣೆಗೆ ಎಳೆದು ತಂದ ಮಹಿಳೆ
ಪಟಿಯಾಲಾ , ಶನಿವಾರ, 6 ಫೆಬ್ರವರಿ 2016 (14:08 IST)
ಎಲ್ಲದ್ದಕ್ಕೂ ಒಂದು ಅಂತ್ಯವಿರುತ್ತದೆ ಎಂದು ಹೇಳುತ್ತಾರೆ. ತಮ್ಮ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿರುವ ರೋಸಿ ಹೋಗಿರುವ ಮಹಿಳೆಯರು ಈಗ ಪ್ರತಿಭಟಿಸಲು ಆರಂಭಿಸಿದಂತಿದೆ. ಅದಕ್ಕೆ ಉದಾಹರಣೆ ಎಂಬಂತೆ ತನ್ನನ್ನು ಪೀಡಿಸಿದ ದುರುಳನಿಗೆ ಪ್ರತಿಯಾಗಿ ಚಪ್ಪಲಿ ಏಟು ನೀಡಿದ ಮಹಿಳೆಯೋರ್ವಳು ಆತನನ್ನು ಪೊಲೀಸ್ ಠಾಣೆಗೆ ಸಹ ಎಳೆದು ತಂದ ಅಪರೂದ ಪ್ರಸಂಗ ಪಟಿಯಾಲಾದಲ್ಲಿ ನಡೆದಿದೆ.  

 
ಆರೋಪಿಗೆ ಚಪ್ಪಲಿ ಏಟು ಕೊಡುತ್ತಿರುವ ದೃಶ್ಯಾವಳಿಗಳು ಕ್ಯಾಮರಾದಲ್ಲಿ ಕೂಡ ಸೆರೆಯಾಗಿದ್ದು ಆಕೆಯ ಬಗ್ಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. 
 
ಎಲ್‌ಪಿಜಿ ಸಿಲಿಂಡರ್ ಬುಕ್ ಮಾಡಲೆಂದು ತಾನು ಏಜೆನ್ಸಿಗೆ ಕರೆ ಮಾಡಿದ್ದೆ, ನನ್ನ ಕರೆಯನ್ನು ಸ್ವೀಕರಿಸಿದ್ದ ವ್ಯಕ್ತಿ  ನನ್ನ ನಂಬರ್‌ಗೆ ಪದೇ ಪದೇ ಕರೆ ಮಾಡಿ ಅಸಭ್ಯವಾಗಿ ಮಾತನಾಡಿದ್ದಾನೆ ಎಂದು ಪೀಡಿತೆ ದೂರಿದ್ದಾಳೆ. 

Share this Story:

Follow Webdunia kannada