ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದ ಮಹಿಳೆ ಶವ ಸೂಟ್‌ಕೇಸ್‌ನಲ್ಲಿ ಪತ್ತೆ: ಸಂಗಾತಿ ಬಂಧನ

Sampriya
ಬುಧವಾರ, 26 ನವೆಂಬರ್ 2025 (14:38 IST)
Photo Credit X
ಮುಂಬೈ: ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದ ಮಹಿಳೆಯ ಶವವು ಪುಣೆಯ ದೇಸಾಯಿ ಗ್ರಾಮದ ಬಳಿ ಸೇತುವೆ ಕೆಳಗೆ ಸಿಕ್ಕ ಸೂಟ್‌ಕೇಸ್‌ನಲ್ಲಿ ಪತ್ತೆಯಾಗಿದೆ. ಈ ಸಂಬಂಧ ಆಕೆಯ ಸಂಗಾತಿ ಪೊಲೀಸರ ಅತಿಥಿಯಾಗಿದ್ದಾನೆ. 

22 ವರ್ಷದ ಪ್ರಿಯಾಂಕಾ ವಿಶ್ವಕರ್ಮ22 ಕೊಲೆಯಾದ ಮಹಿಳೆ. ಆಕೆಯ ಶವ ಸೋಮವಾರ ಸೇತುವೆ ಕೆಳಗೆ ಪತ್ತೆಯಾಗಿತ್ತು. ಮೃತಳ ಮಣಿಕಟ್ಟಿನ ಮೇಲೆ ಪಿ. ವಿ. ಎಸ್‌ ಎಂದು ಹೆಚ್ಚೆ ಹಾಕಲಾಗಿದೆ. 

ಪ್ರಿಯಾಂಕ ಅವರನ್ನು ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಸ್ಥಳೀಯ ಸಿಸಿಟಿವಿ ನೆರವಿನಿಂದ ಆರೋಪಿ ವಿನೋದ್ ಶ್ರೀನಿವಾಸ್ ವಿಶ್ವಕರ್ಮನನ್ನು ಬಂಧಿಸಿರುವ ಪೊಲೀಸರು, ವಿಚಾರಣೆಗೆ ಒಳಪಡಿಸಿದ್ದಾರೆ. 

ಕಳೆದ ಐದು ವರ್ಷಗಳಿಂದ ವಿನೋದ್ ಶ್ರೀನಿವಾಸ್‌ ಜೊತೆ ಪ್ರಿಯಾಂಕಾ ಸಹ ಜೀವನ ನಡೆಸುತ್ತಿದ್ದರು. ನವೆಂಬರ್ 21ರ ನಡುವೆ ಇಬ್ಬರ ನಡುವೆ ಜಗಳವಾಗಿದ್ದು, ಅದು ಕೊಲೆಯಲ್ಲಿ ಅಂತ್ಯವಾಗಿದೆ.

ಕೊಲೆಯಾದ ದಿನ ಶವವನ್ನು ಮನೆಯಲ್ಲಿ ಇಟ್ಟುಕೊಂಡಿದ್ದ ಆರೋಪಿ, ಅದು ಕೊಳೆಯಲು ಪ್ರಾರಂಭಿಸಿ ದುರ್ವಾಸನೆ ಹರಡುತ್ತಿದ್ದಂತೆ, ಶವವನ್ನು ಸೂಟ್‌ಕೇಸ್‌ಗೆ ತುಂಬಿ ಸೇತುವೆಯ ಕೆಳಗೆ ಎಸೆದಿದ್ದಾನೆ. <>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾಂಗ್ರೆಸ್‌ನಲ್ಲಿ ಕುರ್ಚಿ ಕಿತ್ತಾಟದ ಬೆನ್ನಲ್ಲೇ ಮಾಜಿ ಸಿಎಂ ಸದಾನಂದ ಗೌಡ ಸ್ಫೋಟಕ ಹೇಳಿಕೆ

ದೆಹಲಿ ಬಾಂಬ್ ಸ್ಫೋಟ, ತನಿಖೆಯಲ್ಲಿ ಮಹತ್ವದ ಬೆಳವಣಿಗೆ

ಈ ನಾಯಕ ಸಿಎಂ ಆದ್ರೆ ಒಳ್ಳೆಯದು ಎಂದಾ ಕೈ ಶಾಸಕ ಹೆಚ್‌ವಿ ವೆಂಕಟೇಶ್‌

ಸಿಎಂ ಕುರ್ಚಿಗಾಗಿ ಗುದ್ದಾಟ, ಡಿಕೆ ಶಿವಕುಮಾರ್ ಮನೆಗೆ ಪ್ರವೇಶಿಸಿದ ಅಜ್ಜಯ್ಯ

ಪೋಕ್ಸೋ ಪ್ರಕರಣದಲ್ಲಿ ಮುರುಘಾಶ್ರೀಗೆ ಢವಢವ, ಆರೋಪ ಸಾಬೀತಾದಲ್ಲಿ ಎಷ್ಟು ವರ್ಷ ಜೈಲು ಗೊತ್ತಾ

ಮುಂದಿನ ಸುದ್ದಿ
Show comments