Webdunia - Bharat's app for daily news and videos

Install App

ಶಾಸಕನ ಜತೆ ಸೆಕ್ಸ್‌ಗೆ ಬಾಲಕಿಗೆ ಒತ್ತಾಯ: ಮಹಿಳೆಯ ಬಂಧನ

Webdunia
ಶುಕ್ರವಾರ, 26 ಫೆಬ್ರವರಿ 2016 (16:50 IST)
ಆರ್‌ಜೆಡಿ ಶಾಸಕನ ಜತೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಶಾಲಾ ಬಾಲಕಿಯನ್ನು ಒತ್ತಾಯಿಸಿದ ಆರೋಪದ ಮೇಲೆ ನಾಲಂದಾ ಪೊಲೀಸರು ಗುರುವಾರ ಮಹಿಳೆಯೊಬ್ಬರನ್ನು ಬಂಧಿಸಿದ್ದಾರೆ. ಫೆಬ್ರವರಿ 6 ರಂದು ಈ ಪ್ರಕರಣ ನಡೆದಿತ್ತು.
 
ಆರೋಪಿ ಸುಲೇಖಾ ದೇವಿಯಷ್ಟೇ ಅಲ್ಲದೆ ಆಕೆಯ ತಾಯಿ ರಾಧಾ ದೇವಿ ಮತ್ತು ಕಿರಿಯ ಸಹೋದರಿ ತುಳಸಿ ದೇವಿ, ಪುತ್ರಿ ಚೋಟಿ ಕುಮಾರಿ ಮತ್ತು ಅವರಿಗೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಮೋತಿ ರಾಮ್ ಎಂಬಾತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಹೊಸದಾಗಿ ನೇಮಕಗೊಂಡಿರುವ ನಳಂದಾ ಎಸ್‌ಪಿ ಕುಮಾರ್ ಆಶಿಷ್ ತಿಳಿಸಿದ್ದಾರೆ. 
 
ಆರೋಪಿಗಳನ್ನು ಹಿಲ್ಸಾ ಪೊಲೀಸ್ ಠಾಮಾ ವ್ಯಾಪ್ತಿಯಲ್ಲಿ ಬರುವ ಖಾಡ್ಡಿ ಗ್ರಾಮದಿಂದ ಬಂಧಿಸಲಾಯಿತು ಎಂದು ಅವರು ಹೇಳಿದ್ದಾರೆ.  
 
ಆರೋಪಿ ನವಾಡಾ ಶಾಸಕ ರಾಜವಲ್ಲಭ ಯಾದವ್ ಅವರನ್ನು ಸಹ ಆದಷ್ಟು ಬೇಗ ಬಂಧಿಸಲಾಗುವುದು ಎಂದು ಕುಮಾರ್ ಆರೋಪಿಸಿದ್ದಾರೆ. 
 
ಪ್ರಕರಣದ ಕುರಿತು ಫೆಬ್ರವರಿ 15 ರಂದು ಪ್ರತಿಕ್ರಿಯಿಸಿದ್ದ ಬಿಹಾರ್ ಸಿಎಂ ನಿತೀಶ್ ಕುಮಾರ್, ಆರೋಪಿ ಶಾಸಕ ಎಷ್ಟು ದಿನ ತಲೆ ಮರೆಸಿಕೊಂಡಿರಬಹುದು, ಅವರನ್ನು ಆದಷ್ಟು ಬೇಗ ಬಂಧಿಸಲಾಗುವುದು ಎಂದು ಹೇಳಿದ್ದರು. ಆರ್‌ಜೆಡಿ ಶಾಸಕನನ್ನು ಅಮಾನತುಗೊಳಿಸಿದೆ. ಸ್ಥಳೀಯ ಕೋರ್ಟ್ ಆತನ ನಿರೀಕ್ಷಣಾ ಜಾಮೀನು ಮನವಿಯನ್ನು ತಳ್ಳಿ ಹಾಕಿದೆ. 
 

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ