Select Your Language

Notifications

webdunia
webdunia
webdunia
webdunia

ಪತಿಯ ಹತ್ಯೆ ಮಾಡಿ ಸ್ನಾನದ ಕೋಣೆಯಲ್ಲಿ ಹುಗಿದು ಹಾಕಿದ ಪತ್ನಿಗೆ ಜೀವಾವಧಿ ಶಿಕ್ಷೆ

ಪತಿಯ ಹತ್ಯೆ ಮಾಡಿ ಸ್ನಾನದ ಕೋಣೆಯಲ್ಲಿ ಹುಗಿದು ಹಾಕಿದ ಪತ್ನಿಗೆ ಜೀವಾವಧಿ ಶಿಕ್ಷೆ
ಮೀರತ್ , ಮಂಗಳವಾರ, 4 ಆಗಸ್ಟ್ 2015 (17:40 IST)
ಸೈನಿಕನಾಗಿದ್ದ ಪತಿಯನ್ನು ಹತ್ಯೆ ಮಾಡಿ ಸ್ನಾನದ ಕೋಣೆಯಲ್ಲಿ ಹುತಿಟ್ಟ ಮಹಿಳೆಗೆ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ವಿಧಿಸಿ ಆದೇಶ ಹೊರಡಿಸಿದೆ.  
 
ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ರಾಮಕೀಶನ್ ಗೌತಮ್, ಆರೋಪಿ ವರ್ಷಾ 2012ರ ಮಾರ್ಚ್ 24 ರಂದು ಹತ್ಯೆ ಮಾಡಿರುವುದು ಸಾಬೀತಾಗಿದ್ದರಿಂದ ಜೀವಾವಧಿ ಶಿಕ್ಷೆ ಮತ್ತು 25 ಸಾವಿರ ರೂಪಾಯಿ ದಂಡ ಪಾವತಿಸುವಂತೆ ಕೋರ್ಟ್ ತೀರ್ಪು ನೀಡಿದೆ. 
 
ಪೊಲೀಸರ ಪ್ರಕಾರ, ಆರೋಪಿ ಮಹಿಳೆ ವರ್ಷಾ ಪತಿ ರಾಜೇಂದ್ರ ಪಟೇಲ್‌ಗೆ ನಿದ್ರೆ ಬರುವ ಮಾತ್ರೆಗಳನ್ನು ನೀಡಿ ಆತನು ಮಲಗಿದ್ದಾಗ ಹರಿತವಾದ ಆಯುಧದಿಂದ ಹತ್ಯೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.  
 
ನಂತರ ಸ್ನಾನದ ಕೋಣೆಯಲ್ಲಿ ಆತನ ಮೃತದೇಹವನ್ನು ಹುಗಿದು ಹಾಕಿ ನಂತರ ಆ ಸ್ಥಳವನ್ನು ಸಿಮೆಂಟ್ ಹಾಕಿ ಪ್ಲಾಸ್ಟರ್ ಮಾಡಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ವರ್ಷ ತನ್ನ ಮನೆಯನ್ನು ಮಂಜು ಎನ್ನುವವರಿಗೆ ಮಾರಾಟ ಮಾಡಿದ್ದಳು. ಸ್ನಾನದ ಕೋಣೆಯಲ್ಲಿ ವಿಚಿತ್ರ ವಾಸನೆ ಬರುತ್ತಿರುವುದನ್ನು ನೋಡಿ ಅಗೆದಾಗ ಮೃತದೇಹ ಕಂಡುಬಂದಿದೆ. ಕೂಡಲೇ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸಿದಾಗ ವರ್ಷಾಳ ಕೃತ್ಯ ಬಹಿರಂಗವಾಗಿದೆ. ಅದೇ ದಿನ ಆರೋಪಿ ವರ್ಷಾಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. 
 

Share this Story:

Follow Webdunia kannada