Select Your Language

Notifications

webdunia
webdunia
webdunia
webdunia

ನಿಜಾಮುದ್ದೀನ್ ರೇಲ್ವೇ ನಿಲ್ದಾಣದ ಬಳಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ

ನಿಜಾಮುದ್ದೀನ್ ರೇಲ್ವೇ ನಿಲ್ದಾಣದ ಬಳಿ  ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ
ನವದೆಹಲಿ , ಗುರುವಾರ, 31 ಜುಲೈ 2014 (18:20 IST)
26 ವರ್ಷದ ವಿವಾಹಿತ ಮಹಿಳೆಯ ಮೇಲೆ ನಾಲ್ಕು ಜನ ದುರುಳರು ಸಾಮೂಹಿಕ ಅತ್ಯಾಚಾರ ನಡೆಸಿದ ದಾರುಣ ಘಟನೆ  ಹಜರತ್ ನಿಜಾಮುದ್ದೀನ್ ರೇಲ್ವೇ ನಿಲ್ದಾಣದ ಬಳಿ ನಡೆದಿದೆ ಎಂದು ವರದಿಯಾಗಿದೆ. 

ಆರೋಪಿಗಳಲ್ಲಿ ಇಬ್ಬರು ಪೀಡಿತಳ ಪರಿಚಯಸ್ಥರಾಗಿದ್ದು,ಅವರು ಆಕೆಯನ್ನು ರೈಲು ನಿಲ್ದಾಣದ ಬಳಿ ಕೊಂಡೊಯ್ದರು ಮತ್ತು  ಮತ್ತಿಬ್ಬರು ಅವರನ್ನು ಕೂಡಿಕೊಂಡರು. ಅಲ್ಲಿ ಆಕೆಗೆ ಮತ್ತು ಬೆರೆಸುವ ಪದಾರ್ಥವನ್ನು ಬೆರೆಸಿದ ಪಾನೀಯವನ್ನು ನೀಡಲಾಯಿತು. ತಕ್ಷಣ ಪ್ರಜ್ಞೆ ಕಳೆದುಕೊಂಡ ಅವಳ ಮೇಲೆ ಸಾಮೂಹಿಕ ಅತ್ಯಾಚಾರವನ್ನು ಮಾಡಲಾಯಿತು ಎಂದು ಪೋಲಿಸರು ತಿಳಿಸಿದ್ದಾರೆ. 
 
ಮರಳಿ ಪ್ರಜ್ಞೆ ಬಂದಾಗ ತಾನು ಪ್ರಿಪೇಯ್ಡ್ ಆಟೋ ಬೂತಿನ ಬಳಿ ಬಿದ್ದಿರುವುದು ಆಕೆಗೆ ಮನವರಿಕೆಯಾಗಿದೆ ಪೋಲಿಸರನ್ನು ಸಂಪರ್ಕಿಸಿದ ಆಕೆ ತನ್ನ ಮೇಲೆ ಅತ್ಯಾಚಾರ ನಡೆದ ಬಗ್ಗೆ ದೂರು ನೀಡಿದ್ದಾಳೆ. 
 
ಘಟನೆ ನಡೆದ ಸ್ಥಳದ ಹತ್ತಿರದಲ್ಲಿದ್ದ ಸಿಸಿಟಿವಿಯಲ್ಲಿ ಘಟನೆಯ ಕುರಿತು ಸಾಕ್ಷಾಧಾರಗಳು ಸಿಗಬಹುದೇ ಎಂದು ಪರಿಶೀಲಿಸಲಾಗುತ್ತಿದ್ದು ಪೀಡಿತೆಯನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಲಾಗಿದೆ. ಘಟನೆಯ ಕುರಿತ ತನಿಖೆಯನ್ನು ಮುಂದುವರೆಸಿದ್ದೇವೆ ಎಂದು ಪೋಲಿಸರು ತಿಳಿಸಿದ್ದಾರೆ. 

Share this Story:

Follow Webdunia kannada