Select Your Language

Notifications

webdunia
webdunia
webdunia
webdunia

ನಾಲ್ವರು ಯುವಕರಿಂದ ಚಲಿಸುತ್ತಿರುವ ಕಾರಿನಲ್ಲಿಯೇ ಯುವತಿಯ ಮೇಲೆ ಗ್ಯಾಂಗ್‌ರೇಪ್

ನಾಲ್ವರು ಯುವಕರಿಂದ ಚಲಿಸುತ್ತಿರುವ ಕಾರಿನಲ್ಲಿಯೇ ಯುವತಿಯ ಮೇಲೆ ಗ್ಯಾಂಗ್‌ರೇಪ್
ನವದೆಹಲಿ , ಭಾನುವಾರ, 28 ಫೆಬ್ರವರಿ 2016 (16:08 IST)
ರಾಜಧಾನಿ ನವದೆಹಲಿಯಲ್ಲಿ ನಿರ್ಭಯಾಳಂತಹ ಘಟನೆಗಳಿಗೆ ಅಂತ್ಯ ಎನ್ನುವುದೇ ಇಲ್ಲದಂತಾಗಿದೆ. ಮತ್ತೊಂದು ದುರದೃಷ್ಟಕರ ಘಟನೆಯಲ್ಲಿ ಚಲಿಸುತ್ತಿರುವ ಕಾರಿನಲ್ಲಿಯೇ ಯುವತಿಯ ಮೇಲೆ ಅತ್ಯಾಚಾರವೆಸಗಿದ ಘಟನೆ ದೆಹಲಿಯ ಆನಂದ್ ವಿಹಾರ್ ಪ್ರದೇಶದಲ್ಲಿ ನಡೆದಿದೆ. 
 
ಮೂಲಗಳ ಪ್ರಕಾರ, ನಾಲ್ಕು ಮಂದಿ ಅಪರಿಚಿತ ವ್ಯಕ್ತಿಗಳು ಯುವತಿಯೊಬ್ಬಳನ್ನು ಆನಂದ್ ವಿಹಾರ್ ಪ್ರದೇಶದಿಂದ ಅಪಹರಿಸಿ, ಕಾರಿನಲ್ಲಿಯೇ ಭೀಕರವಾಗಿ ಅತ್ಯಾಚಾರವೆಸಗಿದ್ದಾರೆ ಎನ್ನಲಾಗಿದೆ. 
 
ಯುವತಿಯ ಮೇಲೆ ಅತ್ಯಾಚಾರವೆಸಗಿದ ನಂತರ ಆಕೆಯನ್ನು ಮಧು ವಿಹಾರ್ ಪ್ರದೇಶದಲ್ಲಿ ಕಾರಿನಿಂದಿಳಿಸಿ ಪರಾರಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
 ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದು, ಇತರ ಮೂವರು ಆರೋಪಿಗಳ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Share this Story:

Follow Webdunia kannada