Select Your Language

Notifications

webdunia
webdunia
webdunia
webdunia

ಮಹಿಳೆಯ ಸಂಶಯಾತ್ಮಕ ಸಾವು:ಕಾಣೆಯಾದ ಪತಿಗಾಗಿ ಪೊಲೀಸರ ಹುಡುಕಾಟ

ಮಹಿಳೆಯ ಸಂಶಯಾತ್ಮಕ ಸಾವು:ಕಾಣೆಯಾದ ಪತಿಗಾಗಿ ಪೊಲೀಸರ ಹುಡುಕಾಟ
ಬೆಂಗಳೂರು , ಶುಕ್ರವಾರ, 31 ಜುಲೈ 2015 (19:50 IST)
30 ವರ್ಷ ವಯಸ್ಸಿನ ಮಹಿಳೆಯೊಬ್ಬಳು ತನ್ನ ಮನೆಯಲ್ಲಿ ಸಂಶಯಾತ್ಮಕವಾಗಿ ಸಾವನ್ನಪ್ಪಿದ್ದು ಆಕೆಯ ಪತಿ ಕಾಣೆಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ರಾಜಾಗೋಪಾಲ್ ನಗರದಲ್ಲಿರುವ ಇಂದಿರಾ ಪ್ರಿಯದರ್ಶಿನಿ ನಗರದಲ್ಲಿರುವ ಮನೆಯಲ್ಲಿ ಮಹಿಳೆ ಸಂಶಯ ರೀತಿಯಲ್ಲಿ ಸಾವನ್ನಪ್ಪಿದ್ದಾಳೆ. 
 
ಕುಣಿಗಲ್ ಮೂಲದ ಯೋಶೋಧಾ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿದ್ದು, 12 ವರ್ಷಗಳ ಹಿಂದೆ ಅಟೋಚಾಲಕನಾಗಿದ್ದ ರಮೇಶ್ ಎಂಬಾತನನ್ನು ವಿವಾಹವಾಗಿದ್ದಳು. ಆಕೆಗೆ 8 ವರ್ಷದ ಬಾಲಕನಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
 
ಯಶೋಧಾಳ ಸಹೋದರ ನಾಗರಾಜ ಆಕೆ ವಾಸಿಸುತ್ತಿದ್ದ ಮನೆಯ ಎದುರಿನ ಮನೆಯಲ್ಲಿ ವಾಸಿಸುತ್ತಿದ್ದು ಸಹೋದರಿ ತನ್ನ ಪತಿಯೊಂದಿಗೆ ಯಾವುದೋ ವಿಷಯ ಕುರಿತಂತೆ ಜಗಳವಾಡುತ್ತಿರುವುದು ಕಂಡುಬಂದಿದೆ. ನಾಗರಾಜ ಮಧ್ಯಪ್ರವೇಶಿಸಿ ಪತಿ ಪತ್ನಿಯನ್ನು ಸಮಾಧಾನಗೊಳಿಸಿ ತನ್ನ ಮಗುವಿನೊಂದಿಗೆ ಉರಿಗೆ ತೆರಳಿದ್ದಾನೆ.
 
ಮಾರನೇ ದಿನ ಉರಿನಿಂದ ಮರಳಿದ ನಾಗರಾಜ ತನ್ನ ಸಹೋದರಿ ಯಶೋಧಾ ಮನೆಯ ಬಾಗಿಲಿಗೆ ಬೀಗಹಾಕಿರುವುದು ಕಂಡುಬಂದಿದೆ. ಆಕೆಯ ಮೊಬೈಲ್ ಫೋನ್‌ಗೆ ಕರೆ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೊನೆಗೆ ಯಶೋಧಾಳ ಮನೆಯ ಕಿಟಕಿಯಲ್ಲಿ ನೋಡಿದಾಗ ಆಕೆಯ ಮೃತದೇಹ ನೆಲದ ಮೇಲೆ ಬಿದ್ದಿರುವುದು ಕಂಡುಬಂದಿದೆ.
 
ಕೂಡಲೇ ಪೊಲೀಸರಿಗೆ ದೂರವಾಣಿ ಕರೆ ಮಾಡಿದ ನಾಗರಾಜು ಪೊಲೀಸರ ಸಹಾಯದೊಂದಿಗೆ ಯಶೋಧಾಳ ಮನೆಯ ಬೀಗ ಮುರಿದು ಒಳಗೆ ಪ್ರವೇಶಿಸಿದ್ದಾರೆ. ಆಕೆಯ ಕುತ್ತಿಗೆಯ ಮೇಲಂ ಗಂಬೀರವಾದ ಗಾಯಗಳಾಗಿರುವುದು ಪತ್ತೆಯಾಗಿದೆ.
 
ಮೃತಳಾದ ಮಹಿಳೆ ಯಶೋಧಾಳ ಪತಿ ರಮೇಸ್ ಕಾಣೆಯಾಗಿದ್ದು ಆತನ ಪತ್ತೆಗಾಗಿ ಜಾಲ ಬೀಸಲಾಗಿದೆ. ರಾಜಗೋಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 
 

Share this Story:

Follow Webdunia kannada