Select Your Language

Notifications

webdunia
webdunia
webdunia
webdunia

ಬಾಡಿಗೆಗಿದ್ದವರು ಭಯೋತ್ಪಾದಕರೆಂಬ ಶಾಕ್‌ನಿಂದ ಸಾವಿಗೀಡಾದ ವೃದ್ಧೆ

ಬಾಡಿಗೆಗಿದ್ದವರು ಭಯೋತ್ಪಾದಕರೆಂಬ ಶಾಕ್‌ನಿಂದ ಸಾವಿಗೀಡಾದ ವೃದ್ಧೆ
ಬಿಜನೋರ್‌ , ಗುರುವಾರ, 2 ಅಕ್ಟೋಬರ್ 2014 (17:29 IST)
ಬಿಜನೋರ್‌ನ ಜತನಾ ಎಂಬ ಪ್ರದೇಶದ ನಿವಾಸಿ ಲೀಲಾವತಿ ಸಿಂಗ್  ಅಲಿಯಾಸ್ ಲಿಲೋ ದೇವಿ( 78) ಎಂಬ ವೃದ್ಧೆಯ ಮನೆಯಲ್ಲಿ  ಕಳೆದ ಸೆಪ್ಟಂಬರ್ 12 ರಂದು ಸುಧಾರಿತ ಸ್ಫೋಟಕ ಸಾಧನವೊಂದು  (IED) ಸ್ಫೋಟಿಸಿತ್ತು. ಮುಗ್ಧ ಹುಡುಗರೆಂದು ಭಾವಿಸಿ 3 ಜನ ಯುವಕರಿಗೆ ತನ್ನ ಮನೆಯನ್ನು ಬಾಡಿಗೆ ನೀಡಿದ್ದ ಲೀಲಾವತಿ ಸಿಂಗ್ ಘಟನೆಯಿಂದ ನೊಂದು ಆಘಾತದ( ಶಾಕ್) ಸ್ಥಿತಿಗೆ ಜಾರಿದ್ದರು. ಆ ಯುವಕರು ಭಯೋತ್ಪಾದಕರು ಎಂಬ ಸತ್ಯ ವೃದ್ಧ ಮಹಿಳೆಯನ್ನು ಶಾಕ್‌ಗೆ ದೂಡಿತ್ತು. ಅದೇ ಆಘಾತದಿಂದ ಹೊರಬರಲಾಗದ ಅವರು ಚಿರನಿದ್ರೆಗೆ ಜಾರಿದ್ದಾರೆ. 

ಆಕೆಯ ಮನೆಯಲ್ಲಿ ಬಾಡಿಗೆಗಿದ್ದ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ (ಸಿಮಿ) ಯುವಕರ ಗುಂಪು ಬಿಜನೋರ್‌ ವಿಧಾನಸಭಾ ಉಪಚುನಾವಣೆಯ ಮೊದಲ ದಿನ ಸುಧಾರಿತ ಸ್ಫೋಟಕ ಸಾಧನವನ್ನು ಜೋಡಿಸುತ್ತಿದ್ದ ವೇಳೆ ಸ್ಪೋಟ ಸಂಭವಿಸಿತ್ತು. ಭಟಾನಾ ಪ್ರದೇಶದಲ್ಲಿನ ಮನೆಯೊಂದರಲ್ಲಿ ವಾಸವಾಗಿದ್ದ  ಮೂವರು ಸಹಚರರ ಜತೆ ಸ್ಥಳದಿಂದ ಪರಾರಿಯಾಗುವುದರಲ್ಲಿ ಅವರು ಯಶಸ್ವಿಯಾಗಿದ್ದರು. ಈಗಲೂ ಅವರು ಪತ್ತೆಯಾಗಿಲ್ಲ. 
 
ತನ್ನ ಮೊಮ್ಮಕ್ಕಳ ಜತೆ  ಗೀತಾ ನಗರ್ ಕಾಲೋನಿಯಲ್ಲಿ ವಾಸವಾಗಿದ್ದ ವಿಧವೆ ಲೀಲಾವತಿ ತನ್ನ ಮನೆಯನ್ನು ತಾನು ಭಯೋತ್ಪಾದಕರಿಗೆ ಬಾಡಿಗೆ ನೀಡಿದ್ದೆ ಎಂಬ ಅರಿವಾದಾಗ ಆಘಾತಕ್ಕೆ ಒಳಗಾಗಿದ್ದರು. ಘಟನೆ ನಡೆದ ತರುವಾಯ ಪೋಲಿಸ್ ಮತ್ತು ಭಯೋತ್ಪಾದನಾ ವಿರೋಧಿ ಪಡೆ  24 ಗಂಟೆಗಳ ಕಾಲ ಆಕೆಯನ್ನು ತೀವೃವಾಗಿ ವಿಚಾರಣೆಗೊಳಪಡಿಸಿತ್ತು. ಭಟಾನಾದಲ್ಲಿ ಇತರ ಮೂವರು ಭಯೋತ್ಪಾದಕರಿಗೆ ಬಾಡಿಗೆ ನೀಡಿದ್ದ  ಮೊಹಮ್ಮದ್ ರಾಯೀಸ್ ಅವರು ಬಂಧಿಸಲ್ಪಟ್ಟಾಗಿನಿಂದ  ಮುಸ್ಲಿಂ ಸಂಘಟನೆಗಳು ಲೀಲಾವತಿಯವರ ಬಂಧನಕ್ಕೂ ಆಗ್ರಹಿಸ ತೊಡಗಿದ್ದವು. 

Share this Story:

Follow Webdunia kannada