Webdunia - Bharat's app for daily news and videos

Install App

ಘೋರ: ಗಂಡು ಬೇಕೆಂಬ ವ್ಯಾಮೋಹ ಇದನ್ನೆಲ್ಲ ಮಾಡಿಸತ್ತಾ?

Webdunia
ಬುಧವಾರ, 28 ಸೆಪ್ಟಂಬರ್ 2016 (11:44 IST)
ಕಾಲ ಎಷ್ಟು ಮುಂದುವರೆದರೂ ನಮ್ಮ ದೇಶದಲ್ಲಿ ಲಿಂಗ ತಾರತಮ್ಯ, ಗಂಡು ಮಕ್ಕಳ ಮೇಲಿನ ವ್ಯಾಮೋಹ ಇನ್ನೂ ಹಾಗೆಯೆ ಇದೆ ಎಂಬುದಕ್ಕೆ ಸ್ಪಷ್ಟ ನಿದರ್ಶನ ಈ ಹೇಯ ಘಟನೆ. ಮೊಮ್ಮಗನ ನಿರೀಕ್ಷೆಯಲ್ಲಿದ್ದ ಪೈಶಾಚಿಕ ಮನಸ್ಥಿತಿಯ ಅಜ್ಜಿಯೋರ್ವಳು ಹುಟ್ಟಿದ್ದು ಹೆಣ್ಣೆಂಬ ನಿರಾಶೆಯಲ್ಲಿ ಎರಡು ತಿಂಗಳ ಶಿಶುವನ್ನು ಹತ್ಯೆಗೈದ ಅಮಾನುಷ ಘಟನೆ ಹರಿಯಾಣಾದ ಬಹದುರ್ಗಾ ನಗರದಲ್ಲಿ ನಡೆದಿದೆ. 
ಮಗುವಿನ ಉಸಿರುಗಟ್ಟಿಸಿ ಹತ್ಯೆಗೈದು ನೆಲದ ಮೇಲೆ ಎಸೆದು ಕೊಂದಿದ್ದಾಳೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. 
 
ಪಾಪಿ ಅಜ್ಜಿ ಸುದೇಶ್ ಹೆಣ್ಣು ಮಗುವನ್ನು ಹೆತ್ತ ಕಾರಣಕ್ಕೆ ಸದಾ ಸೊಸೆಗೆ ಕಿರುಕುಳ ನೀಡುತ್ತಿದ್ದಳು. ನೀನು ನಮ್ಮ ಮನೆಗೆ ಬರುವುದು ಬೇಡ. ತವರಿನಲ್ಲಿಯೇ ಇರು ಎಂದು ಖಡಕ್ ಆಗಿ ಆದೇಶಿಸಿದ್ದಳು ಎಂದು ತಿಳಿದು ಬಂದಿದೆ.
 
ಆದರೆ ಸೋಮವಾರ ಆಕೆ ಗಂಡನ ಮನೆಗೆ ಮರಳಿದ್ದಾಳೆ. ಮೊದಲೇ ಆ ಮಗುವಿನ ಮೇಲೆ ದ್ವೇಷ ಕಾರುತ್ತಿದ್ದ ಸುದೇಶ್ ಮಗುವನ್ನು ಕಿತ್ತುಕೊಂಡು ಉಸಿರುಗಟ್ಟಿಸಿದ್ದಾಳೆ. ಬಳಿಕ ನೆಲಕ್ಕೆ ಕುಟ್ಟಿ ಸಾಯಿಸಿದ್ದಾಳೆ. ತಕ್ಷಣ ಮಗುವನ್ನೆತ್ತಿಕೊಂಡ ತಾಯಿ ಆಸ್ಪತ್ರೆಗೆ ಓಡಿದಳಾದರೂ ಅದಾಗಲೇ ಮಗು ಸಾವನ್ನಪ್ಪಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. 
 
ಸೊಸೆ ಮನೆಗೆ ಮರಳುತ್ತಿದ್ದಂತೆ ಶವವನ್ನು ಕಿತ್ತುಕೊಂಡ ಅತ್ತೆ - ಮಾವ ಮತ್ತು ಮಗುವಿನ ತಂದೆ ಧಾವಂತದಲ್ಲಿ ಸಮಾಧಿ ಮಾಡಿದ್ದಾರೆ. 
 
ಮಗುವನ್ನು ಕಳೆದುಕೊಂಡ ತಾಯಿ ತಕ್ಷಣ ತನ್ನ ತಂದೆಗೆ ದೂರವಾಣಿ ಕರೆ ಮಾಡಿ ನಡೆದ ವಿಷಯವನ್ನು ತಿಳಿಸಿದ್ದಾಳೆ. 
 
ಮಾಹಿತಿ ಪಡೆದ ಪೊಲೀಸರು ದುಷ್ಟ ಸುದೇಶ್ ಕುಟುಂಬವ ವಿರುದ್ಧ ದೂರು ದಾಖಲಿಸಿದ್ದು ಮಗುವಿನ ಶವವನ್ನು ಮೇಲೆತ್ತಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಈಗೀನ ಮಕ್ಕಳಿಗೆ ಬುದ್ದಿ ಹೇಳುವುದು ಕಷ್ಟ, ಮೊಬೈಲ್ ಗೀಳು ಬಿಡು ಎಂದಿದ್ದಕ್ಕೆ ಯುವತಿ ಹೀಗೇ ಮಾಡೋದಾ

ಪಾಕ್‌ಗೆ ನುಗ್ಗಿ ಹೊಡೆಯಿರಿ: ಅಮಿತ್ ಶಾ ಬಳಿ ಇದನ್ನೇ ಹೇಳಿದ್ದೇನೆ ಎಂದ ಸಚಿವ ಸಂತೋಷ್‌ ಲಾಡ್‌

ಇಂದಿರಾಗೆ ಕಪ್ಪು ಬಾವುಟ ಪ್ರದರ್ಶಿಸಿದ್ದ ಸಿದ್ದರಾಮಯ್ಯರನ್ನು ಉಚ್ಛಾಟಿಸುವ ಧಮ್‌ ಇದ್ಯಾ: ಡಿಕೆಶಿಗೆ ಅಶೋಕ್‌ ಸವಾಲು

ಗಡಿಯಲ್ಲಿ ಮತ್ತೆ ಪಾಕ್‌ ಕಿರಿಕ್‌: ಅಪ್ರಚೋದಿತ ಗುಂಡಿನ ದಾಳಿಗೆ ತಕ್ಕ ಉತ್ತರ ನೀಡಿದ ಭಾರತೀಯ ಸೇನೆ

ಕೋಲ್ಕತ್ತಾದಲ್ಲಿ ಹೊತ್ತಿ ಉರಿದ ಹೋಟೆಲ್‌ ಕಟ್ಟಡ: 15 ಮಂದಿ ಸಜೀವ ದಹನ, ಹಲವರಿಗೆ ಗಾಯ

ಮುಂದಿನ ಸುದ್ದಿ