Select Your Language

Notifications

webdunia
webdunia
webdunia
webdunia

ಐಐಎಸ್ ಅಧಿಕಾರಿಯಿಂದ ಲೈಂಗಿಕ ಕಿರುಕುಳ: ಮಹಿಳೆ ಆರೋಪ

ಐಐಎಸ್ ಅಧಿಕಾರಿಯಿಂದ ಲೈಂಗಿಕ ಕಿರುಕುಳ: ಮಹಿಳೆ ಆರೋಪ
ಕಟಕ್ , ಸೋಮವಾರ, 19 ಅಕ್ಟೋಬರ್ 2015 (18:58 IST)
ಆಲ್‌ಇಂಡಿಯಾ ರೇಡಿಯೋದಲ್ಲಿ ಭಾರತೀಯ ಮಾಹಿತಿ ಸೇವೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮೊಬೈಲ್ ಫೋನ್‌ನಲ್ಲಿ ಅಶ್ಲೀಲ ಸಂದೇಶಗಳನ್ನು ರವಾನಿಸುತ್ತಿದ್ದಾರೆ ಎಂದು ಮಹಿಳೆ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಅಧಿಕಾರಿ ಬಂಧನ ಭೀತಿ ಎದುರಿಸುತ್ತಿದ್ದಾರೆ.
  
ಕಳೆದ 10 ವರ್ಷಗಳಿಂದ ನೆರೆಮನೆಯಲ್ಲಿ ವಾಸಿಸುತ್ತಿರುವ ಆರೋಪಿ ಪ್ರಕಾಶ್ ದಾಸ್, ಎರಡು ವರ್ಷಗಳಿಂದ ಅಶ್ಲೀಲ ಎಸ್‌ಎಂಎಸ್ ಮತ್ತು ಎಂಎಂಎಸ್‌ಗಳನ್ನು ಕಳುಹಿಸುತ್ತಿದ್ದಾನೆ ಎಂದು ನೊಂದ ಮಹಿಳೆ ಭುವನೇಶ್ವರದ ಏರ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.  
 
ಆರಂಭದಲ್ಲಿ ಸರ್ವಗುಣ ಸಂಪನ್ನನಂತೆ ವರ್ತಿಸುತ್ತಿದ್ದ ಆರೋಪಿ, ಕಳೆದ ನಾಲ್ಕೈದು ವರ್ಷಗಳಿಂದ ತನ್ನೊಂದಿಗೆ ಸಂಬಂಧವಿಟ್ಟುಕೊಳ್ಳುವಂತೆ  ಒತ್ತಾಯಿಸತೊಡಗಿದ್ದ. ಇಲ್ಲವಾದಲ್ಲಿ ನನ್ನ ಕುಟುಂಬದ ಮಾಹಿತಿಯನ್ನು ಬಹಿರಂಗಗೊಳಿಸುವುದಾಗಿ ಬೆದರಿಕೆ ಹಾಕಿದ್ದ. ಕೆಲ ದಿನಗಳ ಹಿಂದೆ ಮೊಬೈಲ್ ಫೋನ್ ಕರೆ ಮಾಡಿದ್ದಲ್ಲದೇ ನಾನು ಪ್ರತಿಕ್ರಿಯೆ ನೀಡದಿದ್ದಾಗ ನನ್ನ ಪತಿಯ ಗೈರುಹಾಜರಿಯಲ್ಲಿ ಮನೆಗೆ ಬಂದು ಜೀವ ಬೆದರಿಕೆ ಹಾಕಿದ್ದ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.  
 
ಭುವನೇಶ್ವರ್ ಡಿಸಿಪಿ ಸತ್ಯಬ್ರತಾ ಭೋಯಿ ಮಾತನಾಡಿ, ಆರೋಪಿ ಕಳುಹಿಸಿದ ವಿಡಿಯೋ ಕ್ಲಿಪ್ ಮತ್ತು ಎಸ್‌ಎಂಎಸ್‌ಗಳನ್ನು ದೂರುದಾರ ಮಹಿಳೆ ತೋರಿಸಬೇಕಾಗಿದೆ ಎಂದು ಹೇಳಿದ್ದಾರೆ.
 
ಆರೋಪಿ ಅಧಿಕಾರಿಯಾದ ಪ್ರಕಾಶ್ ದಾಸ್‌ಗೆ ಹಲವಾರು ಬಾರಿ ಫೋನ್ ಕರೆ ಮಾಡಿದರೂ ಪ್ರತಿಕ್ರಿಯೆಗೆ ಸಿಗುತ್ತಿಲ್ಲ. ಅವರ ಫೋನ್ ಸ್ವಿಚ್‌ ಆಫ್ ಆಗಿದೆ ಎಂದು ಮೂಲಗಳು ತಿಳಿಸಿವೆ. 

Share this Story:

Follow Webdunia kannada