Webdunia - Bharat's app for daily news and videos

Install App

ಫಸ್ಟ್ ನೈಟ್ ದಿನದಿಂದಲೇ ಗಂಡು ಮಗುವಿಗಾಗಿ ಅತ್ತೆ-ಮಾವನಿಂದ ಕಿರುಕುಳ ಶುರು

Krishnaveni K
ಬುಧವಾರ, 6 ಮಾರ್ಚ್ 2024 (13:19 IST)
ಕೊಲ್ಲಂ: ಮದುವೆಯಾದ ರಾತ್ರಿಯಿಂದಲೇ ಗಂಡು ಮಗುವಿಗಾಗಿ ಅತ್ತೆ ಮಾವನಿಂದ ಕಿರುಕುಳ ಶುರುವಾಗಿತ್ತು ಎಂದು ಕೇರಳದ ಯುವತಿಯೊಬ್ಬಳು ದೂರು ನೀಡಿದ್ದಾಳೆ.

ಕೇರಳದ ಕೊಲ್ಲಂನಲ್ಲಿ ಈ ಘಟನೆ ನಡೆದಿದ್ದು ಈ ಸಂಬಂಧ ಹೈಕೋರ್ಟ್ ಗೆ ದೂರು ಸಲ್ಲಿಸಿದ್ದಾಳೆ. ವೈವಾಹಿಕ ಅಂಕಣದ ಮೂಲಕ ಪರಿಚಯವಾದ ಹುಡುಗನನ್ನು ಯುವತಿ 2012 ರಲ್ಲಿ ಮದುವೆಯಾಗಿದ್ದಳು. ಮದುವೆಯಾದ ದಿನ ರಾತ್ರಿಯೇ ಗಂಡು ಮಗು ಪಡೆಯಲು ಏನು ಮಾಡಬೇಕು ಎಂದು ಅತ್ತೆ ಉಪದೇಶ ಶುರು ಮಾಡಿದ್ದಳಂತೆ!

ಅಷ್ಟೇ ಅಲ್ಲ, ಗಂಡ-ಹೆಂಡತಿ ಸಂಬಂಧದ ಕುರಿತಾದ ಪುಸ್ತಕವೊಂದನ್ನೂ ನೀಡಿದ್ದಳಂತೆ. 2014 ರಲ್ಲಿ ಈಕೆಗೆ ಮೊದಲ ಮಗುವಾಗಿತ್ತು. ಆದರೆ ಮಗು ಹೆಣ್ಣಾಗಿದ್ದರಿಂದ ಗಂಡನ ಮನೆಯವರು ಅಸಮಾಧಾನಗೊಂಡಿದ್ದರು. ಒಮ್ಮೆ ಮಾತ್ರ ಮಗುವನ್ನು ನೋಡಲು ಬಂದಿದ್ದರು. ಅದಾದ ಬಳಿಕ ಗಂಡ, ಅತ್ತೆ-ಮಾವ ನಿರ್ಲ್ಯಕ್ಷಿಸಲು ಶುರು ಮಾಡಿದರು.

ಇದಾದ ಬಳಿಕ ಗಂಡನ ಮನೆಯವರು ನನ್ನನ್ನು ಮತ್ತು ಮಗಳನ್ನು ಕುಟುಂಬದಿಂದಲೇ ದೂರವಿಟ್ಟಿದ್ದಾರೆ. ಈಗ ನನ್ನ ಮಗಳು ತವರಿನವರ ಆಶ್ರಯದಲ್ಲಿ ಬೆಳೆಯುತ್ತಿದ್ದಾಳೆ. ಈ ಮೂಲಕ ಗಂಡನ ಮನೆಯವರು ಮಾನಸಿಕ ಕಿರುಕುಳ ನೀಡಿದ್ದಾರೆ. ನ್ಯಾಯ ಕೊಡಿಸಿ ಎಂದು ಮಹಿಳೆ ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದಾಳೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಹುಲ್, ಸೋನಿಯಾ ಜತೆಗಿನ ಭೇಟಿ ಕುಟುಂಬದ ಜತೆ ಸಮಯ ಕಳೆದ ಹಾಗೇ: ಎಂಕೆ ಸ್ಟಾಲಿನ್‌

ಬಿಟ್ರೇ ಮೈಸೂರು ಸ್ಯಾಂಡಲ್ ಸೋಪ್‌ಗೆ ನಾನೇ ಫ್ರೀಯಾಗಿ ರಾಯಭಾರಿಯಾಗ್ತೀನಿ: ವಾಟಾಳ್ ನಾಗರಾಜ್‌

ಕರಾಳ ನೆನಪು ಮಾಸುವ ಮುನ್ನವೇ ಮತ್ತೆ ಕೋವಿಡ್ ಭೀತಿ: ಸಿಲಿಕಾನ್ ಸಿಟಿಯಲ್ಲಿ ಮಗುವಿಗೆ ಸೋಂಕು ದೃಢ

Gang Rape: ಸಾಂಗ್ಲಿಯಲ್ಲಿ MBBS ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್‌

ರಾಮನಗರಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವ ಅಧಿಕಾರ ಸರ್ಕಾರಕ್ಕಿದೆ: ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments