Webdunia - Bharat's app for daily news and videos

Install App

ಚಲಿಸುವ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ

Webdunia
ಶುಕ್ರವಾರ, 17 ಜೂನ್ 2016 (09:19 IST)
ರಾಷ್ಟ್ರ ರಾಜಧಾನಿ ಮತ್ತೆ ಬೆಚ್ಚಿಬಿದ್ದಿದೆ. 25 ವರ್ಷದ ಮಹಿಳೆಯೋರ್ವಳನ್ನು ಅಪಹರಿಸಿ ಚಲಿಸುತ್ತಿರುವ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಬೆಳಕಿಗೆ ಬಂದಿದೆ. 

ದಕ್ಷಿಣ ದೆಹಲಿಯ ವಸಂತ ವಿಹಾರದಲ್ಲಿ ಗುರುವಾರ ಮುಂಜಾನೆ 3.15 ರ ಸುಮಾರಿಗೆ ಈ ಘಟನೆ ನಡೆದಿದೆ. ಮಲ್ಟಿಪ್ಲೆಕ್ಸ್ ಹೊರಗೆ ತನ್ನ ಗೆಳತಿಯ ಜತೆಗೆ ನಿಂತಿದ್ದ ಯುವತಿಯನ್ನು ಎಳೆದು ಕಾರಿನಲ್ಲಿ ಹಾಕಿಕೊಂಡು ಹೋದ ಮೂವರು ಯುವಕರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
 
ಯುವತಿಯ ಸ್ನೇಹಿತೆ ಆಕೆಯನ್ನು ರಕ್ಷಿಸುವ ಎಲ್ಲ ಪ್ರಯತ್ನಗಳನ್ನು ಮಾಡಿದಳಾದರೂ ಪ್ರಯೋಜನವಾಗಲಿಲ್ಲ. ಅಪಹೃತಳ ಗೆಳತಿಯನ್ನು ದೂಡಿದ ದುರುಳರು ಕಾರಿನಲ್ಲಿ ಪರಾರಿಯಾದರು. ಕಾರ್ ನಂಬರ್ ಗುರುತಿಸಿಕೊಂಡ ಆಕೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. 
 
ಪೂರ್ವ ದೆಹಲಿಯ ಗೀತಾ ಕಾಲೋನಿ ಬಳಿ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಆದರೆ ಆ ಸಂದರ್ಭದಲ್ಲಿ ಕಾರಿನಲ್ಲಿ ಯುವತಿ ಇರಲಿಲ್ಲ. ಅದೇ ಸಂದರ್ಭದಲ್ಲಿ ತನ್ನ ಗೆಳತಿಗೆ ಫೋನ್ ಕರೆ ಮಾಡಿದ ಪೀಡಿತೆ ತನ್ನನ್ನು ವಸಂತ ವಿಹಾರದ ಪೂರ್ವಿ ಮಾರ್ಗದಲ್ಲಿ ತಳ್ಳಿ ಹೋಗಿರುವುದಾಗಿ ಹೇಳಿದ್ದಾಳೆ. 
 
ಪೀಡಿತೆಯನ್ನು ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಚಿಕಿತ್ಸೆ ನೀಡಲಾಗಿದ್ದು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಖಚಿತವಾಗಿದೆ. 
 
ಆರೋಪಿಗಳ ವಿರುದ್ಧ ಅಪಹರಣ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣಗಳನ್ನು ದಾಖಲಿಸಲಾಗಿದೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸುಂದರವಾಗಿದ್ದಳೆಂದು ತಲೆ ಬೋಳಿಸಿ, ವರದಕ್ಷಿಣೆ ಕಿರುಕುಳ: ಯುಎಇಯಲ್ಲಿ ಮಗುವಿನೊಂದಿಗೆ ಕೇರಳ ಮಹಿಳೆ ಆತ್ಮಹತ್ಯೆ

ಶುಭಾಂಶು ಶುಕ್ಲ ಬದಲು ದಲಿತರನ್ನು ಬಾಹ್ಯಾಕಾಶಕ್ಕೆ ಕಳುಹಿಸಬೇಕಿತ್ತು: ಕಾಂಗ್ರೆಸ್ ನಾಯಕ ಉದಿತ್ ರಾಜ್

ಬೆಂಗಳೂರು, ನೋಟ್ಸ್ ನೀಡು ನೆಪದಲ್ಲಿ ವಿದ್ಯಾರ್ಥಿನಿ ಮೇಲೆ ಶಿಕ್ಷಕರಿಬ್ಬರು, ಸ್ನೇಹಿತನಿಂದ ರೇಪ್‌

ಮಂತ್ರಾಲಯಕ್ಕೆ ಭೇಟಿ ನೀಡಿದ ಬಳಿಕ ಪೀಠಾಧಿಪತಿಯರನ್ನು ಭೇಟಿಯಾದ ಸಚಿವ ರಾಮಲಿಂಗಾರೆಡ್ಡಿ

₹1 ಕೋಟಿ ಸುಲಿಗೆಗೆ ಉದ್ಯಮಿಯ ಮಗನನ್ನೇ ಕಿಡ್ನ್ಯಾಪ್ ಮಾಡುವುದಾಗಿ ಬೆದರಿಕೆ: ಸಂಚು ವಿಫಲ

ಮುಂದಿನ ಸುದ್ದಿ