Select Your Language

Notifications

webdunia
webdunia
webdunia
webdunia

ಅತ್ಯಾಚಾರ ಆರೋಪಿ ಪತಿಯ ಬೆಂಬಲಕ್ಕೆ ನಿಂತ ಪತ್ನಿಯರು

ಅತ್ಯಾಚಾರ ಆರೋಪಿ ಪತಿಯ ಬೆಂಬಲಕ್ಕೆ ನಿಂತ ಪತ್ನಿಯರು
ಬೆ೦ಗಳೂರು , ಗುರುವಾರ, 11 ಫೆಬ್ರವರಿ 2016 (09:43 IST)
ತಮ್ಮ ಸ್ವಂತ ಸಹೋದರಿಯ ಮಗಳ ಮೇಲೆ ಅತ್ಯಾಚಾರ ಮಾಡಿರುವ ಆರೋಪದ ಮೇಲೆ ಬಂಧಿತರಾಗಿರುವ ಖಾಸಗಿ ವಿವಿ ಕುಲಸಚಿವ ಮಧುಕರ್ ಬಿ. ಅ೦ಗುರ್ ಅವರ ಪತ್ನಿಯರು ಪತಿಯ ಬೆಂಬಲಕ್ಕೆ ನಿಂತಿದ್ದಾರೆ. ತಮ್ಮ ಪತಿ ಯಾವುದೇ ತಪ್ಪು ಮಾಡಿಲ್ಲ, ಇದು ಆಸ್ತಿ ವಿವಾದದ ಹಿನ್ನೆಲೆಯಲ್ಲಿ ನಡೆಸಲಾಗಿರುವ ಷಡ್ಯಂತ್ರ ಎಂದು ಅವರ ಪತ್ನಿಯರು ಆರೋಪಿಸಿದ್ದಾರೆ.
 
ಮಡಿವಾಳ ಪೊಲೀಸರು ಅವರ ಇಬ್ಬರು ಪತ್ನಿಯರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
 
ಮಧುಕರ್ ನಾಲ್ಕು ಮದುವೆಯಾಗಿದ್ದು ಕೊನೆಯ ಪತ್ನಿ ವಯಸ್ಸು 22 ಎಂದು ಹೇಳಲಾಗುತ್ತಿದೆ.
 
ಫೆಬ್ರವರಿ 6ರ೦ದು ಮಧುಕರ್ ಅವರನ್ನು ಬ೦ಧಿಸಲಾಗಿದ್ದು, ಅತ್ಯಾಚಾರ ಸ೦ತ್ರಸ್ತೆಗೆ ಬೆದರಿಕೆ ಹಾಕಿದ್ದ ಆರೋಪದಲ್ಲಿ ಮಧುಕರ್‍ ಸಹಚರ ಯೋಗೇಶ್‍ನನ್ನು ಮ೦ಗಳವಾರ ಸಹ ಫೆಬ್ರವರಿ 9 ರಂದು ಪೊಲೀಸರು ಬಂಧಿಸಿದ್ದಾರೆ.
 
ಮಧುಕರ್ ತಮ್ಮ ಸ್ವಂತ ಅಕ್ಕನ ಮಗಳ ಮೇಲೆ ತಮ್ಮ ಸ್ವಗ್ರಹದಲ್ಲಿಯೇ ಅತ್ಯಾಚಾರವೆಸಗಿದ್ದಾರೆ ಎಂಬ ಆರೋಪವಿದೆ. ಅವರದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ತಮ್ಮ ಮಗಳನ್ನು ಕೆಲಸದಿಂದ ಕಿತ್ತು ಹಾಕುವ ಬೆದರಿಕೆ ಒಡ್ಡಿ ದೈಹಿಕವಾಗಿ ಬಳಸಿಕೊಂಡಿದ್ದಾರೆ ಎಂದು ವೃತ್ತಿಯಲ್ಲಿ ಸರ್ಕಾರಿ ವೈದ್ಯರಾಗಿರುವ ಅವರ ಸಹೋದರಿ ದೂರು ದಾಖಲಿಸಿದ್ದಾರೆ.
 

Share this Story:

Follow Webdunia kannada