Select Your Language

Notifications

webdunia
webdunia
webdunia
webdunia

ನರೇಂದ್ರ ಮೋದಿ ಜತೆ ಕೈ ಜೋಡಿಸುತ್ತಾರಾ ಸೂಪರ್ ಸ್ಟಾರ್ ರಜನಿಕಾಂತ್ ?

ನರೇಂದ್ರ ಮೋದಿ ಜತೆ ಕೈ ಜೋಡಿಸುತ್ತಾರಾ ಸೂಪರ್ ಸ್ಟಾರ್ ರಜನಿಕಾಂತ್ ?
ಚೆನ್ನೈ , ಗುರುವಾರ, 21 ಆಗಸ್ಟ್ 2014 (15:43 IST)
ಸಿನಿಮಾ ನಟ, ನಟಿಯರು ರಾಜಕಾರಣಿಗಳಾಗಿ ಪರಿವರ್ತಿತರಾಗುವುದು ನಮ್ಮ ದೇಶದ ಮಟ್ಟಿಗೆ ಹೊಸ ವಿದ್ಯಮಾನವಲ್ಲ.  ಹೇಮಾ ಮಾಲಿನಿ, ಜಯಾ ಬಚ್ಚನ್, ಗುಲ್ ಪನಾಗ್, ಗೋವಿಂದ, ಕಿರಣ್ ಖೇರ್ - ಹೀಗೆ ಸಕ್ರಿಯ ರಾಜಕಾರಣದಲ್ಲಿ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡ ಪ್ರಖ್ಯಾತ ಸಿನಿಮಾ ತಾರೆಯರ ಪಟ್ಟಿಯೇ ನಮ್ಮ ಮುಂದಿದೆ. 

ದೇಶದ ಜನರ ಮನೆಮಾತಾಗಿರುವ ಸೂಪರ್ ಸ್ಟಾರ್ ರಜನಿಕಾಂತ್ ಅವರ ರಾಜಕೀಯರಂಗಕ್ಕೆ ಪ್ರವೇಶಿಸುತ್ತಾರೆ ಎಂದು ಹಲವಾರು ಬಾರಿ ಸುದ್ದಿಗಳು ಹರಿದು ಬಂದಿದ್ದು, ಈ ಬಾರಿ ಇದು ವಾಸ್ತವತೆಗೆ ತಿರುಗಲಿದೆ ಎಂದು ಹೇಳಲಾಗುತ್ತಿದೆ. 
 
ಸದ್ಯ ಲಿಂಗಾ ಸಿನಿಮಾ ಚಿತ್ರೀಕರಣದಲ್ಲಿ ವ್ಯಸ್ತವಾಗಿರುವ  ರಜನಿ  ರಾಜಕೀಯ ರಂಗದಲ್ಲಿ ತಮಗೆ ಆಸಕ್ತಿ ಇಲ್ಲ ಎಂದು ಪುನಃ ಪುನಃ ಹೇಳಿಕೊಂಡರೂ ಅವರು ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಎಂಬ ಊಹಾಪೋಹದ ಚರ್ಚೆ ಮತ್ತೆ ಗರಿ ಬಿಚ್ಚಿದೆ. 
 
ಇತ್ತೀಚಿನ , ತಾಜಾ ವರದಿಗಳ ಪ್ರಕಾರ ರಾಷ್ಟ್ರೀಯ ಅಧ್ಯಕ್ಷ ಮತ್ತು ,ಪ್ರಧಾನಿ ಮೋದಿ ಅತ್ಯಾಪ್ತ ಅಮಿತ್ ಶಾರವರು ಸಿದ್ಧಪಡಿಸಿರುವ ಬಿಜೆಪಿಗೆ ಸೇರಲಿರುವವರ ಸಂಭವನೀಯರ ಪಟ್ಟಿಯಲ್ಲಿ  ಈ ಪ್ರಸಿದ್ಧ ನಟನ ಹೆಸರು ಕೂಡ ಇದೆ. 
 
ಈ ಹಿಂದೆ ಕೊಚ್ಚಾಡಿಯನ್ ಸಿನಿಮಾದ ಮೂಲಕ ಅಭಿಮಾನಿಗಳಿಗೆ ಕಾಣಿಸಿಕೊಂಡಿದ್ದ ರಜನಿ, ಸದ್ಯ ಸೋನಾಕ್ಷಿ ಸಿನ್ಹಾ ಜೋಡಿಯಾಗಿರುವ ಲಿಂಗಾ ಸಿನಿಮಾದ ಮೂಲಕ ಅಭಿಮಾನಿಗಳ ಮನತಣಿಸಲು ತಯಾರಾಗುತ್ತಿದ್ದಾರೆ. 
 
ಒಂದು ವೇಳೆ ಅವರು ರಾಜಕೀಯ ಪ್ರವೇಶಿಸಿಸಲು ನಿರ್ಧರಿಸಿದ್ದೇ ಆದರೆ, ಅಲ್ಲೂ ತಮ್ಮದೇ ಆದ ವಿಭಿನ್ನ ಶೈಲಿಯೊಂದಿಗೆ ಎಂಟ್ರಿ ಕೊಡುತ್ತಾರೆ ಎಂಬುದರಲ್ಲಿ ಸಂದೇಹವಿಲ್ಲ. 

Share this Story:

Follow Webdunia kannada