Select Your Language

Notifications

webdunia
webdunia
webdunia
webdunia

ರಜನಿ ತಮಿಳುನಾಡಿನ ರಾಜಕೀಯಕ್ಕೆ ಬಿಜೆಪಿ ಮೂಲಕ ಎಂಟ್ರಿ ಕೊಡ್ತಾರೆಯೇ?

ರಜನಿ ತಮಿಳುನಾಡಿನ ರಾಜಕೀಯಕ್ಕೆ ಬಿಜೆಪಿ ಮೂಲಕ ಎಂಟ್ರಿ ಕೊಡ್ತಾರೆಯೇ?
ಚೆನ್ನೈ , ಬುಧವಾರ, 1 ಅಕ್ಟೋಬರ್ 2014 (15:22 IST)
ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅಕ್ರಮ ಆಸ್ತಿ ಪ್ರಕರಣದಲ್ಲಿ ಆಪಾದಿತೆಯಾಗಿ ಜೈಲು ಸೇರಿದ ಬಳಿಕ ಅವರ ಸದಸ್ಯತ್ವ ರದ್ದಾಗಿದ್ದು, ಮುಖ್ಯಮಂತ್ರಿ ಸ್ಥಾನವನ್ನು ಕೂಡ ಕಳೆದುಕೊಂಡಿದ್ದಾರೆ. ಇನ್ನು ಚುನಾವಣೆಗೆ ನಿಲ್ಲಲು ಅವರು ಅನೇಕ ಎಡರುತೊಡರುಗಳನ್ನು ಹಾದುಬರಬೇಕಿದೆ. ಈ ಸಂದರ್ಭದಲ್ಲಿ ರಜನಿಕಾಂತ್ ತಮಿಳುನಾಡಿನ ಚುನಾವಣೆಯಲ್ಲಿ ಎಂಟ್ರಿ ಕೊಡುತ್ತಾರೆಂದು ಕೆಲವು ಮೂಲಗಳು ತಿಳಿಸಿವೆ. ರಜನಿಕಾಂತ್ ಅವರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಯಾವುದೇ ಮಾತುಕತೆಯಾಡಿಲ್ಲ ಎಂದು ಬಿಜೆಪಿ ಹೇಳುತ್ತಿದೆ.
 
 1996ರಿಂದ ರಜನಿಯನ್ನು ರಾಜಕೀಯಕ್ಕೆ ಧುಮುಕಿಸುವ ಪ್ರಯತ್ನ ಮಾಡಲಾಗುತ್ತಿದೆ. ರಜನಿ ಅವರ ಪ್ರಖ್ಯಾತ ಕಾಮೆಂಟ್, "ಎಐಎಡಿಎಂಕೆ ಅಧಿಕಾರಕ್ಕೆ ಹಿಂತಿರುಗಿದರೆ ದೇವರು ಕೂಡ ತಮಿಳುನಾಡನ್ನು ಉಳಿಸಲು ಸಾಧ್ಯವಿಲ್ಲ " ಎಂಬ ಹೇಳಿಕೆಯಿಂದ ಡಿಎಂಕೆ ಪರವಾಗಿ ಮತಗಳು ಬಿದ್ದಿದ್ದವು. 
 
ರಜನಿ ರಾಜಕೀಯಕ್ಕೆ ಪ್ರವೇಶಿಸುವುದಾದರೆ ಅವರಿಗೆ ಬಿಜೆಪಿ ಸಹಜ ಆಯ್ಕೆಯಾಗಲಿದೆ. ರಜನಿ ಬಿಜೆಪಿಗೆ ಬೆಂಬಲ ಘೋಷಿಸಿದ್ದರಲ್ಲದೇ, ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನದಿ ಜೋಡಣೆ ಯೋಜನೆಗೆ ಒಂದು ಕೋಟಿ ರೂ. ನೀಡುವ ಪ್ರಸ್ತಾಪ ಮಾಡಿದ್ದರು. ತಮಿಳುನಾಡಿನಲ್ಲಿ ಜಯಲಲಿತಾ ರಾಜಕೀಯಕ್ಕೆ ತೆರೆಬಿದ್ದಿರುವುದರಿಂದ ಸಮರ್ಥ ನಾಯಕರ ಕೊರತೆ ಎದುರಿಸುತ್ತಿದ್ದು, ಬಿಜೆಪಿ ಕೂಡ ರಾಜಕೀಯ ಶಕ್ತಿಯಾಗಿ ತಮಿಳುನಾಡಿನಲ್ಲಿ ಲಗ್ಗೆ ಹಾಕಲು ಯತ್ನಿಸುತ್ತಿದೆ. ಡಿಎಂಕೆ ವರ್ಚಸ್ಸು ಕುಂದುತ್ತಿರುವುದು ಕೂಡ ಬಿಜೆಪಿಗೆ ಅನುಕೂಲ ಕಲ್ಪಿಸಿದೆ.
 
 ಬಿಜೆಪಿ ತಮಿಳುನಾಡಿನಲ್ಲಿ ರಾಜಕೀಯ ಶಕ್ತಿಯಾಗಿ ಬೆಳೆಯಲು ರಜನಿಕಾಂತ್ ಅವರಂತಹ ವರ್ಚಸ್ವಿ ನಾಯಕರ ಅಗತ್ಯವಿದೆ ಎಂದು ರಾಜಕೀಯ ವಿಶ್ಲೇಷಕ ಸುಮಂತ್ ಸಿ.ರಾಮನ್ ಹೇಳಿದ್ದಾರೆ. ರಜನಿಕಾಂತ್  ಅವರಿಗೆ ರಾಜಕೀಯ ಪ್ರವೇಶಕ್ಕೆ ಇದು ಸೂಕ್ತಕಾಲ ಎಂದು ಅಭಿಮಾನಿಗಳು ಭಾವಿಸಿದ್ದಾರೆ. ತಮಿಳುನಾಡಿನ ರಾಜಕೀಯದತ್ತ ನೋಟ ಹರಿಸಿದಾಗ,  ಸಿನಿಮಾ ನಾಯಕರು ರಾಜಕೀಯದಲ್ಲಿ ಹೆಸರನ್ನು ಮಾಡಿದ್ದಾರೆ. ರಜನಿಕಾಂತ್  ಮಹಾನ್ ನಾಯಕರಾಗಿದ್ದು, ಅನೇಕ ಧರ್ಮಕಾರ್ಯಗಳನ್ನು ಮಾಡಿದ್ದಾರೆ. ತಮಿಳುನಾಡಿಗೆ ಹೊಸ ನಾಯಕನ ಆಗಮನಕ್ಕೆ ಇದು ಸೂಕ್ತ ಕಾಲ ಎಂದು ಹೇಳಲಾಗುತ್ತಿದೆ.

Share this Story:

Follow Webdunia kannada