Select Your Language

Notifications

webdunia
webdunia
webdunia
webdunia

ಮಹಾರಾಷ್ಟ್ರದಲ್ಲಿ ಪಾರದರ್ಶಕ ಸರ್ಕಾರವನ್ನು ಒದಗಿಸುತ್ತೇವೆ: ದೇವೇಂದ್ರ ಫಡ್ನವೀಸ್

ಮಹಾರಾಷ್ಟ್ರದಲ್ಲಿ ಪಾರದರ್ಶಕ ಸರ್ಕಾರವನ್ನು ಒದಗಿಸುತ್ತೇವೆ: ದೇವೇಂದ್ರ ಫಡ್ನವೀಸ್
ಮುಂಬೈ , ಭಾನುವಾರ, 19 ಅಕ್ಟೋಬರ್ 2014 (15:12 IST)
ಮಹಾರಾಷ್ಟ್ರದಲ್ಲಿ ಭಾರತೀಯ ಜನತಾ ಪಕ್ಷ  ಪಾರದರ್ಶಕ ಆಡಳಿತ ನೀಡಲಿದೆ ಎಂದು  ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. 

ಬಿಜೆಪಿ ಮಹಾರಾಷ್ಟ್ರದಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು , ತಮ್ಮ ಪಕ್ಷ ಸರಕಾರವನ್ನು ರಚಿಸಲಿದೆ ಎಂದು ಅವರು ತಿಳಿಸಿದ್ದಾರೆ.
 
ನಿಶ್ಚಿತವಾಗಿಯೂ ನಾವು ಸರಕಾರವನ್ನು ರಚಿಸುತ್ತೇವೆ. ಬಿಜೆಪಿ ಅಭ್ಯರ್ಥಿಯೇ ಮುಖ್ಯಮಂತ್ರಿಯಾಗಲಿದ್ದಾರೆ ಎಂದ ಅವರು ಮುಖ್ಯಮಂತ್ರಿ ಆಯ್ಕೆ ಹಾಗೂ ಅಗತ್ಯವಿದ್ದರೆ ಚುನಾವಣಾ-ನಂತರದ ಮೈತ್ರಿಗಳ ಕುರಿತು ಸಂಸದೀಯ ಮಂಡಳಿ ನಿರ್ಧರಿಸಲಿದೆ ಎಂದು ಹೇಳಿದರು. 
 
ಜನರು ಬಿಜೆಪಿಗೆ ಜನಾದೇಶವನ್ನು ನೀಡಿದ್ದಾರೆ. ನಾವು ರಾಜ್ಯದ ಎಲ್ಲಾ ಭಾಗಗಳಲ್ಲಿ ಗೆಲ್ಲಲಿದ್ದೇವೆ ಮತ್ತು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತಿದ್ದೇವೆ, " ಎಂದು ಫಢ್ನವೀಸ್ ಸಂತೋಷ ವ್ಯಕ್ತಪಡಿಸಿದರು. 
 
ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಲು ಬಿಜೆಪಿಯಲ್ಲಿ ಏರ್ಪಟ್ಟಿರುವ ರೇಸ್‌ನಲ್ಲಿ ಫಢ್ನವೀಸ್ ಕೂಡಾ ಒಬ್ಬರಾಗಿದ್ದಾರೆ. 
 
ಇಂದು ಬೆಳಿಗ್ಗೆ ಮತಗಣನೆ ಪ್ರಾರಂಭವಾಗುತ್ತಿದ್ದಂತೆ  ಫಢ್ನವೀಸ್ ತಮ್ಮ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದರು. 
 
ಇಂದು ಸಂಜೆ ಸಭೆ ಸೇರಲಿರುವ ಪಕ್ಷದ ಸಂಸದೀಯ ಮಂಡಳಿ ಚುನಾವಣಾ ಫಲಿತಾಂಶಗಳು ಮತ್ತು ಇತರ ವಿಷಯಗಳ ಕುರಿತು ವಿಶ್ಲೇಷಿಸಲಿದೆ ಎಂದು ಅವರು ಹೇಳಿದರು. 

Share this Story:

Follow Webdunia kannada