Webdunia - Bharat's app for daily news and videos

Install App

ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ರಾಜೀನಾಮೆ ನೀಡುತ್ತಾರಾ?

Webdunia
ಮಂಗಳವಾರ, 23 ಸೆಪ್ಟಂಬರ್ 2014 (13:05 IST)
ತಮಿಳುನಾಡು ಮುಖ್ಯಮಂತ್ರಿ, ಲಕ್ಷಾಂತರ ಜನರ ಪಾಲಿಗೆ ಅಮ್ಮನಾದ ಜಯಲಲಿತಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆಯೇ? ಜಯಲಲಿತಾ ರಾಜೀನಾಮೆ ನೀಡಬಹುದೆಂಬ ವದಂತಿ ಕೆಲವು ಪತ್ರಿಕೆಗಳಲ್ಲಿ ಹರಿದಾಡುತ್ತಿದೆ. ಬೆಂಗಳೂರಿನ ವಿಶೇಷ ಕೋರ್ಟ್‌ನಲ್ಲಿ ಜಯಲಲಿತಾ ವಿರುದ್ಧ ಆದಾಯ ಮೀರಿ ಆಸ್ತಿ ಕುರಿತ ಪ್ರಕರಣದ ತೀರ್ಪು ಶನಿವಾರ ಹೊರಬೀಳಲಿದ್ದು, ಕೋರ್ಟ್ ವಿಚಾರಣೆಗೆ ಹಾಜರಾಗುವುದಕ್ಕೆ ಮುನ್ನವೇ ಮುಖ್ಯಮಂತ್ರಿ ರಾಜೀನಾಮೆ ನೀಡಲಿದ್ದಾರೆಂಬ ವದಂತಿ ಹರಿದಾಡುತ್ತಿದೆ.

ಎಐಎಡಿಎಂಕೆಯ ಮುಂದಿನ ಯೋಜನೆಗಳನ್ನು ರೂಪಿಸಲು ಜಯಾ ನಿರ್ಣಾಯಕ ಕ್ಯಾಬಿನೆಟ್  ಸಭೆಯನ್ನು ಕರೆದು ಚರ್ಚಿಸಿದ್ದಾರೆ.  ಜಯಾ ರಾಜೀನಾಮೆಗೆ ಎಐಎಡಿಎಂಕೆ ಕೂಡ ಪರವಾಗಿದ್ದು, ಇದರಿಂದ ಜಯಾ ಸಾರ್ವಜನಿಕ ವರ್ಚಸ್ಸು ಹೆಚ್ಚಲಿದೆ ಎಂದು ನಂಬಿದೆ. ಈ ರಾಜೀನಾಮೆ ಮಂಗಳವಾರ ಹೊರಬೀಳುವ ನಿರೀಕ್ಷೆಯಿದ್ದು, ತಮಿಳು ಕ್ಯಾಲೆಂಡರ್ ಪ್ರಕಾರ ಆ ದಿನ ಪವಿತ್ರವಾಗಿದೆ. ಜಯಲಲಿತಾ ವಿರುದ್ಧ 1991 ಮತ್ತು 1996ರ ನಡುವಿನ ಅವಧಿಯಲ್ಲಿ  ಗೊತ್ತಿರುವ ಆದಾಯಕ್ಕಿಂತ 66 ಕೋಟಿ ಹೆಚ್ಚು ಆದಾಯವನ್ನು ಸಂಪಾದಿಸಿದ ಆರೋಪವನ್ನು ಹೊರಿಸಲಾಗಿದೆ.

ಅವರ ಸಾಕುಮಗ ಸುಧಾಕರನ್ ಮತ್ತು ಗೆಳತಿ ಶಶಿಕಲಾ ನಟರಾಜನ್ ಅವರ ವಿರುದ್ಧ ಕೂಡ ಕೇಸ್ ದಾಖಲಿಸಲಾಗಿದೆ. ರಾಜ್ಯ ಜಾಗೃತ ಆಯೋಗ ಈ ಪ್ರಕರಣವನ್ನು ದಾಖಲಿಸಿದ್ದು, 1996ರಲ್ಲಿ ಎಫ್ಐಆರ್ ದಾಖಲು ಮಾಡಿದ ಬಳಿಕ ಜಯಾ ಅವರನ್ನು ಬಂಧಿಸಿ ಕೆಲವು ದಿನ ಜೈಲಿನಲ್ಲಿಡಲಾಗಿತ್ತು. ಜಯಾ ಅಧಿಕಾರಕ್ಕೆ ಬಂದ ಬಳಿಕ ನಿಷ್ಪಕ್ಷಪಾತ ವಿಚಾರಣೆಯನ್ನು ತಮಿಳುನಾಡಿನಲ್ಲಿ ನಡೆಸುವುದು ಸಾಧ್ಯವಿಲ್ಲವೆಂದು  ಡಿಎಂಕೆಯ ಅನ್ಬಳಗನ್  ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರಿಂದ ಬೆಂಗಳೂರಿನ ವಿಶೇಷ ಕೋರ್ಟ್‌ನಲ್ಲಿ ಜಯಾ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಆದೇಶ ನೀಡಿತ್ತು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments