Select Your Language

Notifications

webdunia
webdunia
webdunia
webdunia

ಬಿಹಾರ್ ರಾಜ್ಯಕ್ಕೆ 50 ಸಾವಿಕ ಕೋಟಿ ರೂ.ವಿಶೇಷ ಪ್ಯಾಕೇಜ್: ಮೋದಿ

ಬಿಹಾರ್ ರಾಜ್ಯಕ್ಕೆ 50 ಸಾವಿಕ ಕೋಟಿ ರೂ.ವಿಶೇಷ ಪ್ಯಾಕೇಜ್: ಮೋದಿ
ಪಾಟ್ನಾ , ಶನಿವಾರ, 25 ಜುಲೈ 2015 (15:26 IST)
ಬಿಹಾರ್ ರಾಜ್ಯಕ್ಕೆ ವಿಧಾನಸಭೆ ಚುನಾವಣೆ ಪ್ರಚಾರಕ್ಕಾಗಿ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, 50 ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚಿನ ಪ್ಯಾಕೇಜ್ ನೀಡುವುದಾಗಿ ಘೋಷಿಸಿದ್ದಾರೆ
 
ಲೋಕಸಭೆ ಚುನಾವಣೆ ಪ್ರಚಾರಕ್ಕೆ ಬಂದಾಗ ಬಿಹಾರ್ ರಾಜ್ಯಕ್ಕೆ 50 ಸಾವಿರ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ನೀಡುವುದಾಗಿ ಘೋಷಿಸಿದ್ದೆ. ಬಿಹಾರ್ ರಾಜ್ಯದ ಅಭಿವೃದ್ಧಿಗಾಗಿ ಜನತೆಯ ಕನಸುಗಳನ್ನು ಈಡೇರಿಸಲು ಸಾವಿರಾರು ಕೋಟಿ ರೂಪಾಯಿಗಳ ಬಿಡುಗಡೆಗೆ ಸರಕಾರ ಸಿದ್ದವಿದೆ ಎಂದರು.  
 
ಬಿಹಾರ್ ರಾಜ್ಯಕ್ಕೆ ಸೂಕ್ತ ಸಮಯದಲ್ಲಿ ವಿಶೇಷ ಪ್ಯಾಕೇಜ್ ಘೋಷಿಸುತ್ತೇನೆ. ಆದರೆ ಸದ್ಯಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
 
ಕೇಂದ್ರ ಸರಕಾರದಿಂದ ಆಶಾಭಾವನೆಗಳಿವೆ ಎಂದು ಬಿಹಾರ್ ಸಿಎಂ ನಿತೀಶ್ ಕುಮಾರ್ ಹೇಳಿದ್ದಾರೆ. ರಾಜ್ಯಗಳ ಹಣಕಾಸು ಹಂಚಿಕೆಯನ್ನು ಹೆಚ್ಚಿಸುವ ಮೂಲಕ ಬಿಹಾರ್ ರಾಜ್ಯದ ಅಭಿವೃದ್ಧಿ ನಮ್ಮ ಗುರಿಯಾಗಿದೆ.ಈಶಾನ್ಯ ರಾಜ್ಯಗಳ ಅಭಿವೃದ್ಧಿ ನಮ್ಮ ಮಿಶನ್ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.  
 

Share this Story:

Follow Webdunia kannada