Select Your Language

Notifications

webdunia
webdunia
webdunia
webdunia

ಪುತ್ರಜೀವಕ ಔಷಧಿ: ಹೆಸರು ಬದಲಾವಣೆ ಸಂಕೇತ ನೀಡಿದ ಬಾಬಾ ರಾಮದೇವ್

ಪುತ್ರಜೀವಕ ಔಷಧಿ: ಹೆಸರು ಬದಲಾವಣೆ ಸಂಕೇತ ನೀಡಿದ ಬಾಬಾ ರಾಮದೇವ್
ಹರಿದ್ವಾರ , ಶನಿವಾರ, 2 ಮೇ 2015 (16:43 IST)
ತಮ್ಮ ಕಂಪನಿ ಮಾರುಕಟ್ಟೆಗೆ ತಂದಿರುವ ಪುತ್ರಜೀವಕ ಔಷಧಕ್ಕೆ ಸಂಬಂಧಿಸಿದಂತೆ ಪ್ರಾರಂಭವಾಗಿರುವ ವಿವಾದ ದಿನೇ ದಿನೇ ಹೆಚ್ಚುತ್ತಿರುವುದರಿಂದ ಅದರ ಹೆಸರನ್ನು ಬದಲಾವಣೆ ಮಾಡುವುದರತ್ತ ಬಾಬಾ ಸಂಕೇತ ನೀಡಿದ್ದಾರೆ. 
 
ಪುತ್ರಜೀವಿಕ ಬೀಜ'ದ ಹೆಸರಿನ ವಿಚಾರದಲ್ಲಿ ಸ್ಪಷ್ಟನೆ ನೀಡಿದ್ದ ಬಾಬಾ, "ಈ ಔಷಧದ ಸಸ್ಯಶಾಸ್ತ್ರೀಯ ಹೆಸರು 'ಪುತ್ರಂಜೀವ ರಾಕ್ಸ್‌ಬರ್ಗಿ'. ಅಲ್ಲದೆ ಇದಕ್ಕೆ ಹಿಂದಿ, ಗುಜರಾತಿ ಮತ್ತು ಕನ್ನಡದಲ್ಲಿ 'ಪುತ್ರಜೀವಿಕ'' ಎಂದು ಕರೆಯಲಾಗುತ್ತದೆ. ಇಲ್ಲಿ ಪುತ್ರ ಎಂಬುದರ ಅರ್ಥ ಸಂತಾನವೆಂದು ಅಷ್ಟೇ. ಮಗ ಎಂಬುದಲ್ಲ. ಅನವಶ್ಯಕವಾಗಿ ಈ ವಿವಾದವನ್ನು ಸೃಷ್ಟಿಸಿದ್ದಾರೆ", ಎಂದು ರಾಮದೇವ್ ಹೇಳಿದ್ದಾರೆ. 
 
"ಸನ್ಯಾಸಿಯೊಬ್ಬನ ಹೆಸರು ಕೆಡಿಸುವ ಪ್ರಯತ್ನವಿದು. ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸಿಗೆ ಹಾನಿ ಉಂಟುಮಾಡುವ ಪ್ರಯತ್ನವಾಗಿ ನನ್ನನ್ನು ಗುರಿ ಮಾಡಲಾಗಿದೆ. ಇದು ಬಂಜೆತನಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ನಿವಾರಿಸುವ ಮದ್ದು ಹೊರತು, ಇದನ್ನು ಸೇವಿಸುವುದರಿಂದ ಗಂಡು ಮಗು ಹುಟ್ಟುತ್ತದೆ ಎಂದು ತಾವು ಎಂದೂ ಹೇಳಿಲ್ಲ. ನನ್ನ ಪ್ರಕಾರ ಮಗ ಮತ್ತು ಮಗಳು ಇಬ್ಬರು ಸಮಾನರು. ಹಾಗಿರುವಾಗ ಸನ್ಯಾಸಿಯಾದ ನಾನು ಯಾಕೆ ಈ ಭೇದವನ್ನು ಸೃಷ್ಟಿಸಲಿ", ಎಂದಿದ್ದರು ರಾಮದೇವ್. 
 
ರಾಜ್ಯಸಭೆಯಲ್ಲಿ ಗುರುವಾರ ಬಾಬಾ ರಾಮದೇವ್ ತಯಾರಿಸುವ ಆಯುರ್ವೇದ ಉತ್ಪನ್ನ ಪುತ್ರಜೀವಕ ಬೀಜ್ ಬಗ್ಗೆ ಕೋಲಾಹಲ ಉಂಟಾಗಿ ಪ್ರತಿಪಕ್ಷದ ಸದಸ್ಯರು ಈ ಔಷಧಿಯನ್ನು ನಿಷೇಧಿಸಿ ಉತ್ಪಾದಕರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದರು.  
 
ಔಷಧಿಯ ಪ್ಯಾಕೇಟ್ ಸಮೇತ ಸದನಕ್ಕೆ ಬಂದಿದ್ದ ತ್ಯಾಗಿ, ಬಾಬಾ ಪುತ್ರನನ್ನು ದಯಪಾಲಿಸುವ ಔಷಧಿ ಎಂದು ಉಲ್ಲೇಖಿಸಿ 'ದಿವ್ಯಪುತ್ರಜೀವಕ ಬೀಜ', ಎಂಬ ಹೆಸರಿನ ಔಷಧಿಯನ್ನು ಮಾರಿ ಜನರಿಗೆ ವಂಚನೆ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ತ್ಯಾಗಿ ಅವರ ವಾದವನ್ನು ಜಯಾ ಬಚ್ಚನ್, ಗುಲಾಂ ನಬಿ ಆಜಾದ್, ಜಾವೆದ್ ಅಕ್ತರ್ ಸಮರ್ಥಿಸಿಕೊಂಡಿದ್ದರು
 
ತ್ಯಾಗಿ ಅವರ ಆರೋಪಕ್ಕೆ ಪ್ರತಿಯಾಗಿ ಸದನದಲ್ಲಿ ಕೋಲಾಹಲವೇ ಸೃಷ್ಟಿಯಾಗಿತ್ತು.

Share this Story:

Follow Webdunia kannada