Select Your Language

Notifications

webdunia
webdunia
webdunia
webdunia

ವ್ಯಾಪಂ ಹಗರಣ: ನಿವೃತ್ತಿಯಾದ ಬಳಿಕ ಮಧ್ಯಪ್ರದೇಶ್ ರಾಜ್ಯಪಾಲರ ವಿರುದ್ಧ ಕ್ರಮ

ವ್ಯಾಪಂ ಹಗರಣ: ನಿವೃತ್ತಿಯಾದ ಬಳಿಕ ಮಧ್ಯಪ್ರದೇಶ್ ರಾಜ್ಯಪಾಲರ ವಿರುದ್ಧ ಕ್ರಮ
ಭೋಪಾಲ್ , ಶನಿವಾರ, 4 ಜುಲೈ 2015 (18:10 IST)
ವ್ಯಾಪಂ ಹಗರಣ ಮಧ್ಯಪ್ರದೇಶ ಆಡಳಿತದಲ್ಲಿ ಉಂಟುಮಾಡಿರುವ ಕೋಲಾಹಲವನ್ನು ಮುಂದುವರಿಸಿದೆ. ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಮುಖ್ಯಸ್ಥರು, ಗವರ್ನರ್ ರಾಮ್ ನರೇಶ್ ಯಾದವ್ ವಿರುದ್ಧ ಅವರು ನಿವೃತ್ತಿಯಾದ ಬಳಿಕ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಯಾದವ್ ವಿರುದ್ಧ ನಾವು ಪುರಾವೆ ಹೊಂದಿದ್ದೇವೆ. ಆದರೆ ಅವರು ರಾಜ್ಯದ ರಾಜ್ಯಪಾಲರಾಗಿರುವ ತನಕ ತನಿಖೆಯಿಂದ ವಿನಾಯಿತಿ ಅವಕಾಶವನ್ನು ಹೊಂದಿದ್ದಾರೆ. ಯಾದವ್ ಮತ್ತು ಅವರ ಮಗನ ವಿರುದ್ಧ ಎಸ್ಐಟಿ ಈಗಾಗಲೇ ಎಫ್ಐಆರ್ ದಾಖಲಿಸಿದೆ ಎಂದು ಅವರು ಹೇಳಿದ್ದಾರೆ. 
 
ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳು ಮತ್ತು ಸಾಕ್ಷಿಗಳಲ್ಲಿ ಸುಮಾರು 40 ಜನರು ಕಳೆದ 5 ವರ್ಷಗಳಲ್ಲಿ ಮೃತಪಟ್ಟಿದ್ದು, ಅವರಲ್ಲಿ 24 ಜನರು ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ. 
 
ರಾಜ್ಯಪಾಲರು ನಿವೃತ್ತಿಯಾದ ಬಳಿಕ ನೀವು ಅವರ ವಿಚಾರಣೆ ನಡೆಸಬಹುದು. ನಿವೃತ್ತಿಯಾಗುವವರೆಗೂ ಅವರನ್ನು ಬಂಧಿಸುವ ಹಾಗಿಲ್ಲ . ಆದರೆ ತನಿಖೆಗೆ ಯಾವುದೇ ರೀತಿಯ ತೊಡಕಾಗುವುದಿಲ್ಲ ಎಂದು ಹೈ ಕೋರ್ಟ್ ಈಗಾಗಲೇ ಸ್ಪಷ್ಟಪಡಿಸಿದೆ ಎಂದು ಎಸ್ಐಟಿ ಮುಖ್ಯಸ್ಥ ನ್ಯಾಯಮೂರ್ತಿ ಚಂದ್ರೇಶ್ ಭೂಷಣ್ ಹೇಳಿದ್ದಾರೆ. 
 
ರಾಮ್ ನರೇಶ್ ಯಾದವ್ ಜೂನ್ 2016ಕ್ಕೆ ಮಧ್ಯಪ್ರದೇಶದ ರಾಜ್ಯಪಾಲ ಸ್ಥಾನದಿಂದ ನಿವೃತ್ತರಾಗಲಿದ್ದಾರೆ.
 
ವ್ಯಾಪಂ ಹಗರಣದಲ್ಲಿ ಸಿಲುಕಿದ್ದ ಪ್ರಮುಖ ಆರೋಪಿಗಳು ಮತ್ತು ಸಾಕ್ಷಿಗಳು ಅನುಮಾನಾಸ್ಪದವಾಗಿ ಸಾವಿಗೀಡಾಗುತ್ತಿರುವುದರಿಂದ ರಾಜ್ಯದಲ್ಲಿ ರಾಜಕೀಯ ಕೋಲಾಹಲವೇರ್ಪಟ್ಟಿದೆ. 

Share this Story:

Follow Webdunia kannada