Webdunia - Bharat's app for daily news and videos

Install App

ಸತ್ತ ಪತಿಯ ವೀರ್ಯಕ್ಕಾಗಿ ವೈದ್ಯರಲ್ಲಿ ಮನವಿ

Webdunia
ಸೋಮವಾರ, 11 ಜುಲೈ 2016 (12:23 IST)
ದೆಹಲಿ ನಿವಾಸಿಯೊಬ್ಬಳು ತಮ್ಮ ಬಳಿ ಇಟ್ಟ ಬೇಡಿಕೆಯನ್ನು ಕೇಳಿ ಪ್ರಖ್ಯಾತ ಏಮ್ಸ್ ಆಸ್ಪತ್ರೆ ವೈದ್ಯರೇ ಒಂದು ಕ್ಷಣ ದಂಗಾಗಿ ಹೋದರು. ಅಷ್ಟಕ್ಕೂ ಆಕೆ ವೈದ್ಯರ ಬಳಿ ಮನವಿ ಮಾಡಿಕೊಂಡಿದ್ದೇನು? ತಿಳಿಯಲು ಮುಂದೆ ಓದಿ.
 
ರಾಷ್ಟ್ರ ರಾಜಧಾನಿಯ ನಿವಾಸಿಗಳಾದ ಆ ದಂಪತಿಗೆ ಮಕ್ಕಳಿರಲಿಲ್ಲ. ಇತ್ತೀಚಿಗೆ ಪತಿ ತೀರಿಕೊಂಡರು. ತನ್ನ ಪತಿ ಏನೋ ತೀರಿಕೊಂಡರು. ಆದರೆ ಅವರಿಂದಲೆ ನಾನು ಮಗುವನ್ನು ಪಡೆಯಬೇಕು ಎಂದು ಚಿಂತಿಸಿದ ಮಹಿಳೆಗೆ ಆಕೆಯ ಪತಿಯ ಮನೆಯವರು ಕೂಡ ಸಾಥ್ ನೀಡಿದರು. ಆಕೆ ಏಮ್ಸ್ ವೈದ್ಯರಲ್ಲಿ ತನ್ನ ಪತಿಯ ವೀರ್ಯವನ್ನು ನೀಡಬೇಕಾಗಿ ಕೇಳಿಕೊಂಡಿದ್ದಾಳೆ. ಆದರೆ ವೈದ್ಯರದಕ್ಕೆ ನಿರಾಕರಿಸಿದ್ದಾರೆ. ಏಕೆಂದರೆ ನಮ್ಮದೇಶದಲ್ಲಿ ಇನ್ನು ಕೂಡ ಮರಣೋತ್ತರ ವೀರ್ಯ ಮರುಗಳಿಕೆ ( PMSR )ಗೆ ಯಾವುದೇ ಸ್ಪಷ್ಟ ಮಾರ್ಗಸೂಚಿಗಳಿಲ್ಲ.
 
ಏಮ್ಸ್ ಹಿರಿಯ ವೈದ್ಯ ಡಾಕ್ಟರ್ ಸುಧೀರ್ ಗುಪ್ತಾ  ಅವರು ಹೇಳುವ ಪ್ರಕಾರ, ವ್ಯಕ್ತಿ ಸತ್ತ  ಸರಿಸುಮಾರು ಒಂದು ದಿನಗಳವರೆಗೂ ವೃಷಣ ಕುಹರದ ಒಳಗೆ ವೀರ್ಯ ಉಳಿದುಕೊಂಡಿರುತ್ತದೆ. ಅದನ್ನು ಮರುಗಳಿಸ ಬಹುದು. ವೀರ್ಯ ಪಡೆಯುವುದು ಕೇವಲ ಐದು ನಿಮಿಷದ ಪ್ರಕ್ರಿಯೆ. ಆದರೆ  ನೈತಿಕ ಮತ್ತು ಕಾನೂನು ಸಮಸ್ಯೆಗಳು ಇದಕ್ಕೆ ತಡೆಯಾಗಿವೆ ಎಂದು ಹೇಳಿದ್ದಾರೆ.
 
ಇಸ್ರೆಲ್‌ನಲ್ಲಿ ಪತ್ನಿಯ ಮನವಿಯ ಮೇರೆಗೆ ಸತ್ತ ಮನುಷ್ಯನ ದೇಹದಿಂದ ವೀರ್ಯವನ್ನು ಪಡೆದು ಒಂದು ವರ್ಷದ ಒಳಗೆ ಪತ್ನಿಯ ದೇಹದಲ್ಲಿ ವರ್ಗಾಯಿಸಬಹುದು. ಅದಕ್ಕೆ ಪತಿಯ ಅನುಮತಿ ಬೇಕಿಲ್ಲ. ಆದರೆ ಪತ್ನಿಯೂ ಸತ್ತರೆ ಶವದಿಂದ ಪಡೆಯಲಾದ ವೀರ್ಯವನ್ನು ಮತ್ಯಾರೂ ಬಳಸಲಾಗದು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments