Select Your Language

Notifications

webdunia
webdunia
webdunia
webdunia

ಬಿಜೆಪಿ ಬಗ್ಗೆ ಮೃದು ಧೋರಣೆ ಹೊಂದಿದ್ರೆ ಆಪ್ ಸಿಎಂ ಆಗುವಂತೆ ಯಾಕೆ ಆಹ್ವಾನ ನೀಡಿದ್ದು?: ಬೇಡಿ ಲೇವಡಿ

ಬಿಜೆಪಿ ಬಗ್ಗೆ ಮೃದು ಧೋರಣೆ ಹೊಂದಿದ್ರೆ ಆಪ್ ಸಿಎಂ ಆಗುವಂತೆ ಯಾಕೆ ಆಹ್ವಾನ ನೀಡಿದ್ದು?: ಬೇಡಿ ಲೇವಡಿ
ನವದೆಹಲಿ , ಬುಧವಾರ, 28 ಜನವರಿ 2015 (16:39 IST)
ಲೋಕಪಾಲ ಚಳವಳಿಯ ಸಂದರ್ಭದಲ್ಲಿ  ಬಿಜೆಪಿ ಪರ ಮೃದು ಧೋರಣೆ ಹೊಂದಿದ್ದರು ಎಂಬ ಆಮ್ ಆದ್ಮಿ ಪಕ್ಷದ ಹೇಳಿಕೆಗೆ ತಿರುಗೇಟು ನೀಡಿದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್ ಬೇಡಿ, ಹಾಗಿದ್ದಲ್ಲಿ ಆಪ್ ಪಕ್ಷದ ಸಿಎಂ ಅಭ್ಯರ್ಥಿಯಾಗುವಂತೆ ಕೇಜ್ರಿವಾಲ್ ಯಾಕೆ ನನಗೆ ಕೋರಿದ್ದರು ಎಂದು ಗುಡುಗಿದ್ದಾರೆ. 
 
ನಾನು ಆ ಸಮಯದಲ್ಲಿ ಬಿಜೆಪಿ ಪರ ಒಲವು ಹೊಂದಿದ್ದರೆ 2013ರ ಚುನಾವಣೆಯಲ್ಲಿ ಆಪ್‌ಗೆ ಸೇರುವಂತೆ ಮತ್ತು ಮುಖ್ಯಮಂತ್ರಿ ಅಭ್ಯರ್ಥಿಯಾಗುವಂತೆ ಕೇಜ್ರಿವಾಲ್ ಯಾಕೆ ದುಂಬಾಲು ಬಿದ್ದಿದ್ದರು ಎಂದು ಸಾಮಾಜಿಕ ಹೋರಾಟಗಾರ್ತಿ ಪರಿವರ್ತಿತ ರಾಜಕಾರಣಿ ಸವಾಲೆಸೆದಿದ್ದಾರೆ. 
 
ಬೇರೆಯವರು ಮಾಡಿದ ಟೀಕೆಗಳಿಗೆ ಪ್ರತಿ ಉತ್ತರವನ್ನು ನೀಡುತ್ತ ಕುಳಿತುಕೊಂಡರೆ ಬೇರೆ ಕೆಲಸಗಳಿಗೆ ಸಮಯ ನೀಡುವುದು ಕಷ್ಟವಾಗುತ್ತದೆ ಎಂದ ಅವರು ಬೇರೆ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. 
 
ಲೋಕಪಾಲ ಚಳುವಳಿಯ ಸಂದರ್ಭದಲ್ಲಿ ಕಿರಣ್ ಬೇಡಿ ಬಿಜೆಪಿಯ ಬಗ್ಗೆ ಮೃದು ಧೋರಣೆ ಹೊಂದಿದ್ದರಿಂದ ಬೇಡಿ ಮತ್ತು ಕೇಜ್ರಿವಾಲ್ ದಾರಿಗಳು ಬೇರೆಯಾದವು ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಕುಮಾರ್ ವಿಶ್ವಾಸ್ ಹೇಳಿಕೆಗೆ ಬೇಡಿ ತಿರುಗೇಟು ನೀಡಿದ್ದಾರೆ.
 
 ಬಿಜೆಪಿ ಸರಕಾರವಿರುವ ರಾಜ್ಯಗಳಲ್ಲಿ ಲೋಕಪಾಲ್ ಜಾರಿಗೊಳಿಸುವ ಬಗ್ಗೆ ಹೆಚ್ಚಿನ ಪ್ರಚಾರ ನೀಡಬಾರದು ಎನ್ನುವ ಉದ್ದೇಶದಿಂದ ಕೇಜ್ರಿವಾಲ್ ಸೇರಿದಂತೆ ಆಮ್ ಆದ್ಮಿ ಪಕ್ಷದ ಮುಖಂಡರ ಮೇಲೆ ಕಿರಣ್ ಬೇಡಿ ಪ್ರಭಾವ ಬೀರಲು ಪ್ರಯತ್ನಿಸಿದ್ದರು ಎಂದು ಆಮ್ ಆದ್ಮಿ ಪಕ್ಷದ ಮುಖಂಡ ವಿಶ್ವಾಸ್ ಆರೋಪಿಸಿದ್ದಾರೆ.  

Share this Story:

Follow Webdunia kannada