Webdunia - Bharat's app for daily news and videos

Install App

ಭಾರತದ ಅತಿ ಎತ್ತರದ ಮನುಷ್ಯ ಯಾವ ಪಕ್ಷ ಸೇರ್ಪಡೆ?

Webdunia
ಭಾನುವಾರ, 23 ಜನವರಿ 2022 (08:21 IST)
ನವದೆಹಲಿ : ಉತ್ತರ ಪ್ರದೇಶ ಚುನಾವಣೆ ಸಂದರ್ಭದಲ್ಲಿ, ಭಾರತದ ಅತಿ ಎತ್ತರದ ಮನುಷ್ಯ ಧರ್ಮೇಂದ್ರ ಪ್ರತಾಪ್ ಸಿಂಗ್ ಅವರು ಶನಿವಾರ ಸಮಾಜವಾದಿ ಪಕ್ಷವನ್ನು ಸೇರಿದ್ದಾರೆ.

ಉತ್ತರ ಪ್ರದೇಶದ ಪ್ರತಾಪಗಢದವರಾದ ಧರ್ಮೇಂದ್ರ ಸಿಂಗ್ ಅವರು 8.1 ಅಡಿ (2.4 ಮೀ.) ಎತ್ತರ ಇದ್ದಾರೆ. ಭಾರತದ ಅತಿ ಎತ್ತರದ ಮನುಷ್ಯರಾಗಿರುವ ಇವರು ವಿಶ್ವ ದಾಖಲೆಗೆ ಕೇವಲ 11 ಸೆ.ಮೀ.ನಿಂದ ವಂಚಿತರಾಗಿದ್ದರು. 

ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ನರೇಶ್ ಉತ್ತಮ್ ಪಟೇಲ್ ಈ ಕುರಿತು ಮಾತನಾಡಿ, ಸಿಂಗ್ ಅವರು ನಮ್ಮ ಪಕ್ಷಕ್ಕೆ ಸೇರಿದ್ದಾರೆ. ಅವರ ಆಗಮನದಿಂದ ಸದ್ಯದಲ್ಲೇ ನಡೆಯಲಿರುವ ಉತ್ತರ ಪ್ರದೇಶ ಚುನಾವಣೆಗೆ ಪಕ್ಷಕ್ಕೆ ಮತ್ತಷ್ಟು ಬಲ ಸಿಕ್ಕಂತಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಮಾಜವಾದಿ ಪಕ್ಷದ ನೀತಿಗಳು ಮತ್ತು ಅಖಿಲೇಶ್ ಯಾದವ್ ಅವರ ನಾಯಕತ್ವದಲ್ಲಿ ನಂಬಿಕೆಯಿಟ್ಟು ಪ್ರತಾಪಗಢದ ಧರ್ಮೇಂದ್ರ ಪ್ರತಾಪ್ ಸಿಂಗ್ ಪಕ್ಷವನ್ನು ಸೇರಿದ್ದಾರೆ. ಪಕ್ಷವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಶ್ರಮವಹಿಸುವುದಾಗಿಯೂ ಅವರು ತಿಳಿಸಿದ್ದಾರೆ. ಸಿಂಗ್ ಅವರಿಗೆ ಅಭಿನಂದನೆಗಳು ಎಂದು ಪಕ್ಷದ ವಕ್ತಾರ ರಾಜೇಂದ್ರ ಚೌಧರಿ ಹೇಳಿದ್ದಾರೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Air India ‌Flight Crash: ಮೃತ ಪ್ರತಿ ಪ್ರಯಾಣಿಕನ ಕುಟುಂಬಕ್ಕೆ ತಲಾ ₹1 ಕೋಟಿ ಘೋಷಿಸಿದ ಟಾಟಾ ಗ್ರೂಪ್

Air India Plane crash: ವಿಮಾನ ಅಪಘಾತಕ್ಕೆ ಇದೇ ಕಾರಣ: ಮಲ್ಲಿಕಾರ್ಜುನ ಖರ್ಗೆ ಸ್ಪೋಟಕ ಹೇಳಿಕೆ

Air India Plane crash: ಸುತ್ತಲೂ ಹೆಣಗಳ ರಾಶಿಯಿತ್ತು, ಬದುಕುಳಿದ ಏಕೈಕ ವ್ಯಕ್ತಿ ಬಿಚ್ಚಿಟ್ಟ ಭಯಾನಕ ಸತ್ಯ

Air India Flight Crash: ಗಂಡನ ಭೇಟಿಗಾಗಿ ಲಂಡನ್‌ಗೆ ಹೊರಟ್ಟಿದ್ದ ಮಹಿಳೆ ಸೇರಿದ್ದು ಮಸಣಕ್ಕೆ, ಕಣ್ಣೀರ ಕತೆ

Air India Crash: 10 ನಿಮಿಷ ಲೇಟ್‌, ಟ್ರಾಫಿಕ್‌ನಲ್ಲಿ ಸಿಲುಕಿ ಮಹಿಳೆ ಜಸ್ಟ್ ಬಚಾವ್‌

ಮುಂದಿನ ಸುದ್ದಿ
Show comments