Webdunia - Bharat's app for daily news and videos

Install App

ಭ್ರಷ್ಟಾಚಾರದ ಹೇಳಿಕೆ ನೀಡುವ ಪ್ರಧಾನಿಗೆ ಲಲಿತ್‌ಗೇಟ್, ವ್ಯಾಪಂ ಹಗರಣ ಕಾಣಿಸಲಿಲ್ಲವೇ: ನಿತೀಶ್ ಕುಮಾರ್

Webdunia
ಮಂಗಳವಾರ, 13 ಅಕ್ಟೋಬರ್ 2015 (21:32 IST)
ಚುನಾವಣೆಯಲ್ಲಿ ಸ್ಪರ್ಧಿಸಲು ಹಣ ಪಡೆಯುತ್ತಿರುವ ಜೆಡಿಯು ಮಾಜಿ ಸಚಿವನ ವಿಡಿಯೋ ಬಗ್ಗೆ ನಾಚಿಕೆಯಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಬಿಹಾರ್ ಸಿಎಂ ನಿತೀಶ್ ಕುಮಾರ್, ಮೋದಿ ಯಾವತ್ತೂ ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತಿದವರಲ್ಲ ಎಂದು ಲೇವಡಿ ಮಾಡಿದರು.
 
ಬಿಹಾರ್‌ನಲ್ಲಿ ಬಿಜೆಪಿ ಸೋಲುತ್ತಿರುವುದನ್ನು ಕಂಡ ಮೋದಿ ಕೊನೆಗೂ ಧೈರ್ಯ ತೋರಿಸಿ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. ಲಲಿತ್ ಗೇಟ್ ಮತ್ತು ವ್ಯಾಪಂ ಹಗರಣ ನಡೆದಾಗ ಯಾಕೆ ಮೌನವಾಗಿದ್ದರು ಎಂದು ಗುಡುಗಿದ್ದಾರೆ.
 
ಬಿಜೆಪಿ ನಾಯಕರು ಭಾಗಿಯಾಗಿರುವ ಲಲಿತ್‌ಗೇಟ್, ವ್ಯಾಪಂ ಹಗರಣ ಸೇರಿದಂತೆ ಅನೇಕ ಹಗರಣಗಳು ಬಹಿರಂಗವಾಗಿದ್ದರೂ ಮೌನಧಾರಣೆ ಅನುಸರಿಸಿದ ಮೋದಿಗೆ ಇದೀಗ ಭ್ರಷ್ಟಾಚಾರದ ನೆನಪಾಗಿದೆಯೇ ಎಂದು ತಿರುಗೇಟು ನೀಡಿದರು.
 
ಜೆಡಿಯು ಸಚಿವ ಅವದೇಶ್ ಖುಶ್ವಾ ಲಂಚ ಸ್ವೀಕರಿಸುತ್ತಿರುವ ವಿಡಿಯೋ ಸಾರ್ವಜನಿಕರಿಗೆ ತೋರಿಸಿದ ಪ್ರಧಾನಿ, ಜೆಡಿಯು ನಾಯಕರಿಗೆ ನಾಚಿಕೆಯಾಗುವುದಿಲ್ಲವೇ ಎಂದು ವಾಗ್ದಾಳಿ ನಡೆಸಿದ ಹಿನ್ನೆಲೆಯಲ್ಲಿ ನಿತೀಶ್ ಹೇಳಿಕೆ ಹೊರಬಿದ್ದಿದೆ.
 
ಲೋಕದ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯದ ವ್ಯಕ್ತಿಯಾದ ಪ್ರಧಾನಿ ಮೋದಿ ಇತರರಿಗೆ ಪಾಠ ಹೇಳುತ್ತಿದ್ದಾರೆ ಎಂದು ಆರ್‌ಜೆಡಿ ಮುಖಂಡ ಲಾಲು ಪ್ರಸಾದ್ ಯಾದವ್ ಕಿಡಿಕಾರಿದ್ದಾರೆ.  

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments