Select Your Language

Notifications

webdunia
webdunia
webdunia
webdunia

ಲಾಲು ಬಾಯಲ್ಲಿ ಮೋದಿ ಮಾತು; ಡಬ್‌ಸ್ಮ್ಯಾಶ್‌‌ನಲ್ಲಿ ಅಪ್ಲೋಡ್ ಆಗಿರುವ ವೀಡಿಯೋ

ಲಾಲು ಬಾಯಲ್ಲಿ ಮೋದಿ ಮಾತು; ಡಬ್‌ಸ್ಮ್ಯಾಶ್‌‌ನಲ್ಲಿ ಅಪ್ಲೋಡ್ ಆಗಿರುವ ವೀಡಿಯೋ
ಪಟ್ನಾ , ಶನಿವಾರ, 3 ಅಕ್ಟೋಬರ್ 2015 (13:11 IST)
ಸದಾ ಹಾಸ್ಯಭರಿತ ಹೇಳಿಕೆಗಳಿಂದಲೇ ಗಮನ ಸೆಳೆಯುವ ಆರ್‌ಜೆಡಿ ನಾಯಕ, ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಮೊನ್ನೆ ತಾನೇ ಪ್ರಧಾನಿ ಮೋದಿ ಮಾತನ್ನು ಅನುಕರಿಸಿ ಗಮನ ಸೆಳೆದಿದ್ದರು. ಈಗ ಮತ್ತೆ ಅವರು ಮೋದಿ ಮಾತಿನ ಮಿಮಿಕ್ರಿ ಮಾಡಿ ವೀಡಿಯೋವನ್ನು ಡಬ್‌ಸ್ಮ್ಯಾಶ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ. 

ಈ ವೀಡಿಯೋದಲ್ಲಿ ಲಾಲೂ ಮೋದಿಯ ಧ್ವನಿಯಲ್ಲಿ 'ಮೇರೆ ಪ್ಯಾರೇ ಭಾಯಿಯೋ, ಔರ್ ಬೆಹನೋ, ಅಚ್ಛೇ ದಿನ್ ಆಯೇಂಗೆ. ಹಿಂದೂಸ್ಥಾನ್ ಕೇ ಗರೀಬ್ ಆದ್ಮಿ ಕೋ ಮುಫ್ತ್  ಮೇ 15 - 20 ಲಾಖ್ ರುಪಿಯೇ ಯೂಂ ಹಿ ಮಿಲ್ ಜಾಯೇಂಗೆ'. (ನನ್ನ ಪ್ರೀತಿಯ ಸಹೋದರ ಮತ್ತು ಸಹೋದರಿಯರೇ,ಉತ್ತಮ ದಿನಗಳು ಬರುತ್ತದೆ. ಭಾರತದ ಪ್ರತಿ ಬಡವನಿಗೂ 15 - 20 ಲಕ್ಷ ರೂ. ದೊರೆಯಲಿದೆ.) ಎಂದು ಅನುಕರಿಸಿದ್ದಾರೆ.
 
ಬಿಜೆಪಿ ರಾಷ್ಟ್ರಿಯ ಅಧ್ಯಕ್ಷ ಅಮಿತ್ ಶಾ ಅವರ ಮಾತನ್ನು ಸಹ ಲಾಲು ಮಿಮಿಕ್ರಿ ಮಾಡಿದ್ದಾರೆ. ಶಾ ಅವರ ಧ್ವನಿಯನ್ನು ಅನುಕರಿಸಿರುವ ಲಾಲು '15 - 20 ಲಕ್ಷ ರೂ. ನೀಡುವ ಮಾತು ಸಾಧ್ಯವಿಲ್ಲದ್ದು ' ಎಂದು ಹೇಳುವ ಮೂಲಕ ಮೋದಿ ಸರ್ಕಾರದ ಭರವಸೆಯ ವ್ಯಂಗ್ಯವಾಡಿದ್ದಾರೆ.
 
ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿರುವವರು ಲಾಲು ಅವರ ಈ ಮಿಮಿಕ್ರಿ ಚಾತುರ್ಯಕ್ಕೆ ದಂಗು ಬಡಿದಿದ್ದಾರೆ. 

Share this Story:

Follow Webdunia kannada