ರಿಲಯನ್ಸ್ ಜಿಯೊ ಜಾಹಿರಾತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಣಿಸಿಕೊಂಡಿದ್ದಕ್ಕೆ ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಶನಿವಾರ ಅಣಕವಾಡಿದ್ದಾರೆ. ರಿಲಯನ್ಸ್‌ನ ಪೂರ್ಣ ಪುಟದ ಜಾಹಿರಾತು ಜಿಯೊ ಡಿಜಿಟಲ್ ಲೈಫ್‌ನಲ್ಲಿ ಪ್ರಧಾನ ಮಂತ್ರಿ ಭಾವಚಿತ್ರ ತಂಡ ಆಮ್ ಆದ್ಮಿ ಮತ್ತು ಕಾಂಗ್ರೆಸ್ ಮೋದಿ ವಿರುದ್ಧ ವಾಗ್ದಾಳಿ ಮಾಡಿದ್ದವು.
ಟ್ವಿಟರ್ ಮೂಲಕ ಬಿಹಾರ ರಾಜಕಾರಣಿ ಹಿಂದಿಯಲ್ಲಿ, ಬಡವರು ಏನು ತಿನ್ನುತ್ತಾರೆ, ಅಟ್ಟಾ(ಗೋಧಿ ಹಿಟ್ಟು) ಅಥವಾ ಡಾಟಾ? ಡಾಟಾ ಅಗ್ಗವಾಗಿದೆ. ಅಟ್ಟಾ ದುಬಾರಿಯಾಗಿದೆ. ದೇಶದಲ್ಲಿ ಪರಿವರ್ತನೆ ತರುವುದಕ್ಕೆ ಅವರು ವ್ಯಾಖ್ಯಾನಿಸಿದ ರೀತಿ ಇದಾಗಿದೆ. ನೀವು ಅದರಲ್ಲಿ ಇರುವಾಗ ಕರೆ ಕಡಿತದ ಸಮಸ್ಯೆ ಯಾರು ಪರಿಹರಿಸುತ್ತಾರೆಂಬುದನ್ನು ತಿಳಿಸಿ ಎಂದು ಲಾಲು ಕೇಳಿದರು.
ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಕೂಡ ಪ್ರಧಾನಿಯನ್ನು ಮಿ. ರಿಲಯನ್ಸ್ ಎಂದು ಕರೆದಿದ್ದರು. ಈ ಬ್ರಾಂಡ್‌ಗೆ ಅನುಮೋದನೆ ನೀಡಿದ ಮೋದಿಯನ್ನು ಟೀಕಿಸಿ ಕಂಪನಿಗೆ ಮಾಡಲಿಂಗ್ ಮಾಡುವಂತೆ ಕೂಡ ಸಲಹೆ ಮಾಡಿದರು.