ನೇಣುಗಂಬಕ್ಕೇರುವ ಮೊದಲು ಮುಂಬೈ ದಾಳಿ ಆರೋಪಿ ಕಸಬ್ ಹೇಳಿದ್ದ ಆ ಮಾತು ಏನು ಗೊತ್ತಾ?!

Webdunia
ಮಂಗಳವಾರ, 13 ನವೆಂಬರ್ 2018 (09:09 IST)
ಮುಂಬೈ: 26/11 ರ ಮುಂಬೈ ದಾಳಿಯನ್ನು ಯಾರು ಮರೆಯಲು ಸಾಧ್ಯ ಹೇಳಿ? ಆ ದಾಳಿಯ ಸಂದರ್ಭದಲ್ಲಿ ಸೆರೆ ಸಿಕ್ಕ ಏಕೈಕ ಉಗ್ರ ಅಜ್ಮಲ್ ಕಸಬ್ ನನ್ನು ನೇಣಿಗೇರಿಸಿಯಾಗಿದೆ.

ಆದರೆ ನೇಣುಗಂಬಕ್ಕೇರುವ ಮೊದಲು ಕಸಬ್ ಏನೆಂದು ಹೇಳಿದ್ದ ಗೊತ್ತೇ? ಈ ಸಂದರ್ಭದಲ್ಲಿ ಕಸಬ್ ನನ್ನು ತನಿಖೆ ಮಾಡಿದ್ದ ಅಧಿಕಾರಿಗಳ ತಂಡದ ಮುಖ್ಯಸ್ಥರಾಗಿದ್ದು, ಈಗ ನಿವೃತ್ತಿಯಾಗಿರುವ ರಮೇಶ್ ಮಹಾಳೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಕಸಬ್ ಗೆ ಕೋರ್ಟ್ ನಿಂದ ಮರಣದಂಡನೆ ವಾರಂಟ್ ನೀಡುವಾಗಲೂ ಆತ ವಿಶ್ವಾಸದಿಂದಲೇ ಇದ್ದ. 2008 ಪಾರ್ಲಿಮೆಂಟ್ ದಾಳಿಕೋರ ಅಫ್ಜಲ್ ಗುರುವಿಗೆ ಮರಣದಂಡನೆ ವಿಧಿಸಿದರೂ 8 ವರ್ಷ ಆತನಿಗೆ ಮರಣದಂಡನೆ ವಿಧಿಸಲೇ ಇಲ್ಲ. ಹಾಗೇ ತನಗೂ ಆಗಬಹುದು ಎಂಬ ನಂಬಿಕೆಯಿಂದಿದ್ದ.

ನವಂಬರ್ 11 ರಂದು ಕಸಬ್ ಗೆ ಮರಣದಂಡನೆ ವಿಧಿಸಲಾಗಿತ್ತು. ನವಂಬರ್ 21 ರಂದು ಶಿಕ್ಷೆ ಜಾರಿಯಾಗಬೇಕಿತ್ತು. ಶಿಕ್ಷೆ ಜಾರಿಯಾಗುವ ದಿನದ ಹಿಂದಿನ ದಿನ ರಾತ್ರಿ ಕಸಬ್ ಸೆಲ್ ಗೆ ತೆರಳಿದ ರಮೇಶ್ ಮಹಾಳೆ ನೆನಪಿದೆಯಾ ನೀನು ಹೇಳಿದ್ದೆ ಎಂದು? ನಾಲ್ಕು ವರ್ಷ ಕೂಡಾ ಪೂರ್ತಿಯಾಗಿಲ್ಲ? ಅದಕ್ಕಿಂತ ಮೊದಲೇ ನಿನಗೆ ಶಿಕ್ಷೆ ಜಾರಿಯಾಗುತ್ತಿದೆ’ ಎಂದಿದ್ದರಂತೆ. ಅದಕ್ಕೆ ಕಸಬ್ ‘ಹೌದು. ನೀವು ಗೆದ್ದಿರಿ, ನಾನು ಸೋತೆ’ ಎಂದು ಸೋಲೊಪ್ಪಿಕೊಂಡಿದ್ದನಂತೆ. ಕೆಟ್ಟದ್ದಕ್ಕೆ ಕೊನೆಗೂ ಸಾವಾಯಿತು ಎಂದು ಜೀವನದಲ್ಲೇ ಅತ್ಯಂತ ಹೆಚ್ಚು ಸಂತಸದಿಂದಿದ್ದೆ ಎಂದು ರಮೇಶ್ ಸ್ಮರಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂ ಬದಲಾವಣೆ ಸಾಧ್ಯನೇ ಇಲ್ಲ: ಬಸನಗೌಡ ಪಾಟೀಲ್

ಬಿಗ್ ಶಾಕ್‌, ಬಾವಿಗೆ ಹಾರಿ ಒಂದೇ ಕುಟುಂಬದ ನಾಲ್ವರು ಸಾವು

ದರೋಡೆಕೋರರ ಬೆಂಗಳೂರೇ, ಹಳ್ಳದ ಬೆಂಗಳೂರೇ, ಕಸದ ಬೆಂಗಳೂರೇ: ಆರ್.ಅಶೋಕ್

ಬಾಂಗ್ಲಾದೇಶದಲ್ಲಿ ಸಂಭವಿಸಿದ ಭೂಕಂಪಕ್ಕೆ ಕೋಲ್ಕತ್ತಾದಲ್ಲೂ ಶೇಕ್‌

ಮುನ್ಸೂಚನೆಯಂತೆ ಸಿಲಿಕಾನ್ ಸಿಟಿಗೆ ತಂಪೆರೆದ ವರುಣ

ಮುಂದಿನ ಸುದ್ದಿ
Show comments