Select Your Language

Notifications

webdunia
webdunia
webdunia
webdunia

ರಾಷ್ಟ್ರಪತಿ ಮೆದುಳು ಯಾವ ಸಾಫ್ಟ್‌ವೇರ್‌ನಿಂದ ನಿರ್ಮಿಸಲಾಗಿದೆ: ಮೋದಿ ಪ್ರಶ್ನೆ

ರಾಷ್ಟ್ರಪತಿ ಮೆದುಳು ಯಾವ ಸಾಫ್ಟ್‌ವೇರ್‌ನಿಂದ ನಿರ್ಮಿಸಲಾಗಿದೆ: ಮೋದಿ ಪ್ರಶ್ನೆ
ನವದೆಹಲಿ , ಬುಧವಾರ, 13 ಆಗಸ್ಟ್ 2014 (12:33 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಮೆದುಳು ಯಾವ ಸಾಫ್ಟ್‌ವೇರ್‌ನಿಂದ ನಿರ್ಮಿಸಲಾಗಿದೆ ಎಂದು ಕೇಳುವ ಮೂಲಕ ರಾಷ್ಟ್ರಪತಿಯ ಸ್ಮರಣೆ ಶಕ್ತಿಯನ್ನು ಕುರಿತು ಸಂಸತ್ತಿನಲ್ಲಿ ಶ್ಲಾಘಿಸಿದರು. ರಾಷ್ಟ್ರಪತಿ ಐತಿಹಾಸಿಕ ಘಟನೆಗಳ ದಿನಾಂಕಗಳು ಮತ್ತು ಕಾಲವನ್ನು ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಅವರ ಜೊತೆ ಅರ್ಧ ಗಂಟೆ ಮಾತು ಉತ್ತಮ ಪುಸ್ತಕವನ್ನು ಓದಿದ ಹಾಗಾಗುತ್ತದೆ  ಎಂದು ಮೋದಿ ಹೇಳಿದಾಗ ಪ್ರಣಬ್ ಮುಖರ್ಜಿ ಮುಖದಲ್ಲಿ ಮಂದಹಾಸ ಸುಳಿಯಿತು.

ಅರುಣ್ ಜೇಟ್ಲಿ, ಕರಣ್ ಸಿಂಗ್ ಮತ್ತು ಶರದ್ ಯಾದವ್ ಅವರಿಗೆ ಮಹೋನ್ನತ ಸಂಸದೀಯ ಪಟು ಪ್ರಶಸ್ತಿ ವಿತರಿಸುವ ಸಮಾರಂಭದಲ್ಲಿ ಮೋದಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಸಂಸತ್ತಿನ ಕಲಾಪಗಳಲ್ಲಿ ಹಾಸ್ಯ ಮತ್ತು ನಗು ಕ್ರಮೇಣ ಮಾಸಿಹೋಗುತ್ತಿರುವುದನ್ನು ಮೋದಿ ಉಲ್ಲೇಖಿಸಿದರು. ಒಂದು ಗಾದೆಮಾತಿಗೆ ಕೂಡ 24x7(ಮಾಧ್ಯಮ) ಯಾವ ಬಣ್ಣ ನೀಡುತ್ತದೆಂಬ ಬಗ್ಗೆ ಸದಸ್ಯರು ಚಿಂತಿತರಾಗಿರಬಹುದು.
 
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಎರಡು ದಶಕಗಳ ಹಿಂದೆ ಎನ್‌ಸಿಪಿ ಮುಖಂಡ ಶರದ್ ಪವಾರ್ ಅವರನ್ನು ಲಲಿತಾ ಪವಾರ್ ಅವರಿಗೆ ಹೋಲಿಸಿ ಕಾಮೆಂಟ್ ಮಾಡಿದ ಘಟನೆಯನ್ನು ಸದಸ್ಯರೊಂದಿಗೆ ಹಂಚಿಕೊಂಡರು. ಲಲಿತಾ ಪವಾರ್ ಹಿರಿಯ ನಟರಾಗಿದ್ದು, ನೆಗಟೀವ್ ಪಾತ್ರಗಳನ್ನು ನಿರ್ವಹಿಸುತ್ತಿದ್ದರು. 
 
ಪವಾರ್  ಸುಷ್ಮಾ ಪ್ರತಿಕ್ರಿಯೆಯನ್ನು  ಆನಂದಿಸಿದರು.  ಆದರೆ ಸುಷ್ಮಾ ಅವರ ಲಘು ಹಾಸ್ಯ ಮಾಧ್ಯಮದಲ್ಲಿ ಸರಿಯಾಗಿ ಬಿಂಬಿತವಾಗಲಿಲ್ಲ ಎಂದು ಮೋದಿ ಹೇಳಿದರು. 
ಆದರೆ ಕೇವಲ ಭಾಷಣಗಳ ಮೂಲಕವೇ ಸಂಸತ್ತು ಕಾರ್ಯನಿರ್ವಹಿಸುವುದಿಲ್ಲ. ಭಾಷಣ, ಕ್ರಮ, ನಾಯಕತ್ವದ ಸಂಗಮವಿದ್ದರೆ ಸಂಸತ್ತಿನಲ್ಲಿ ಪ್ರಭಾವ ಬೀರಬಹುದು, ರಾಷ್ಟ್ರದ ಮೇಲೆ ಪ್ರಭಾವ ಬೀರಬಹುದು ಎಂದು ಮೋದಿ ಹೇಳಿದರು.

ಸಂಸತ್ತಿನ ಕಾರ್ಯನಿರ್ವಹಣೆ ಬಗ್ಗೆ ಸಾರ್ವಜನಿಕರಿಂದ ಪ್ರತಿಕ್ರಿಯೆ ಪಡೆಯಲು ಸಮೀಕ್ಷೆ ನಡೆಸಬೇಕೆಂದು ಪ್ರಧಾನಿ ಕರೆನೀಡಿದರು. ಇದರಿಂದ ಸಂಸದರಿಗೆ ಸದನದಲ್ಲಿ ಹೇಗೆ ವರ್ತಿಸಬೇಕೆಂಬ ಕಲ್ಪನೆ ಉಂಟಾಗುತ್ತದೆ ಎಂದು ನುಡಿದರು. ಲೋಕಸಭೆ ರಾಜ್ಯ ಅಸೆಂಬ್ಲಿ ಸ್ಪೀಕರ್‌ಗಳ ಸಭೆ ಕರೆದು ರಾಜ್ಯದ ಶಾಸಕರಿಗೆ ಇಂತಹ ಪ್ರಶಸ್ತಿಗಳನ್ನು ನೀಡುವ ಸಾಧ್ಯತೆ ಕುರಿತು ಪರಿಶೀಲಿಸಬೇಕು ಎಂದು ಮೋದಿ ಸಲಹೆ ನೀಡಿದರು. 

Share this Story:

Follow Webdunia kannada