Webdunia - Bharat's app for daily news and videos

Install App

ಕನ್ಯಾಕುಮಾರಿಯಲ್ಲಿ ಮೋದಿ ಧ್ಯಾನ: ಕಳೆದ ಎರಡು ಚುನಾವಣೆ ಬಳಿಕ ಮೋದಿ ಹೋದ ಸ್ಥಳಗಳು ಯಾವುವು

Krishnaveni K
ಬುಧವಾರ, 29 ಮೇ 2024 (11:40 IST)
Photo Credit: X
ನವದೆಹಲಿ: ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ಪ್ರಧಾನಿ ಮೋದಿ ಎರಡು ದಿನಗಳ ಕಾಲ ಪದ್ಧತಿಯಂತೆ ಏಕಾಂತವಾಗಿ ಧ್ಯಾನ ಮಾಡಲಿದ್ದಾರೆ. ನಾಳೆ ಸಂಜೆಯಿಂದ ಜೂನ್ 1 ರ ಸಂಜೆಯವರೆಗೂ ಮೋದಿ ಕನ್ಯಾಕುಮಾರಿಯಲ್ಲಿ ಸ್ವಾಮಿ ವಿವೇಕಾನಂದರು ತಪಸ್ಸು ಮಾಡಿದ ಸ್ಥಳದಲ್ಲಿ ಧ್ಯಾನ ಮಾಡಲಿದ್ದಾರೆ.

ಈ ಧ್ಯಾನ ಮಂಟಪದಲ್ಲಿ ಹಿಂದೆ ವಿವೇಕಾನಂದರು ಧ್ಯಾನ ಮಾಡಿ ಅಭಿವೃದ್ಧಿ ಹೊಂದಿದ ಭಾರತದ ಬಗ್ಗೆ ಕನಸು ಕಂಡಿದ್ದರು.  ದೇಶದಾದ್ಯಂತ ಸಂಚರಿಸಿದ ನಂತರ ವಿವೇಕಾನಂದರು ಮೂರು ದಿನ ಇಲ್ಲಿ ತಪಸ್ಸು ಮಾಡಿದರು. ಈಗ ಮೋದಿ ಅದೇ ಸ್ಥಳದಲ್ಲಿ ಧ್ಯಾನಕ್ಕೆ ಕೂರಲಿದ್ದಾರೆ.

ಅಂದ ಹಾಗೆ, ಮೋದಿ ಈ ರೀತಿ ಚುನಾವಣೆ ಮುಗಿದ ಬಳಿಕ ಧ್ಯಾನಸ್ಥರಾಗುವುದು ಇದೇ ಮೊದಲಲ್ಲ. ಈ ಮೊದಲು 2014 ಮತ್ತು 2019 ರ ಚುನಾವಣೆ ಪ್ರಕ್ರಿಯೆಗಳು ಮುಗಿದ ಬಳಿಕ, ಫಲಿತಾಂಶಕ್ಕೆ ಮುನ್ನವೂ ಈ ರೀತಿ ಧ್ಯಾನ ಮಾಡಿದ್ದರು.

2014 ರಲ್ಲಿ ಚುನಾವಣೆ ಮುಗಿದ ಬಳಿಕ ಮೋದಿ ಶಿವಾಜಿಯ ಪ್ರತಾಪಘಡಕ್ಕೆ ತೆರಳಿ ಎರಡು ದಿನ ಧ್ಯಾನ ಮಾಡಿದ್ದರು. 2019 ರಲ್ಲಿ ಚುನಾವಣೆ ಮುಗಿದ ಬಳಿಕ ಕೇದರನಾಥ ಗುಹೆಯಲ್ಲಿ ಧ್ಯಾನಸ್ಥರಾಗಿ ಕೂತಿದ್ದರು. ಇದೀಗ ಈ ಬಾರಿ ಕನ್ಯಾಕುಮಾರಿಯಲ್ಲಿ ಧ್ಯಾನ ಮಾಡಲಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments