Webdunia - Bharat's app for daily news and videos

Install App

ಗೋಮಾಂಸ ಭಕ್ಷ್ಯ ನೀಡದಿದ್ದರಿಂದ ವಿವಾಹ ರದ್ದುಗೊಳಿಸಿದ ವರ

Webdunia
ಭಾನುವಾರ, 18 ಜೂನ್ 2017 (15:33 IST)
ವಧುವಿನ ಕುಟುಂಬದವರ ವಿವಾಹದ ಭಕ್ಷ್ಯಗಳಲ್ಲಿ ಗೋಮಾಂಸವಿರದನ್ನು ಕಂಡು ವರನ ಕುಟುಂಬದವರು ವಿವಾಹವನ್ನೇ ರದ್ದುಗೊಳಿಸಿದ ಆಘಾತಕಾರಿ ಘಟನೆ ಉತ್ತರಪ್ರದೇಶದ ರಾಮ್‌ಪುರ್ ಜಿಲ್ಲೆಯಲ್ಲಿ ನಡೆದಿದೆ.
  
ವರದಿಯ ಪ್ರಕಾರ, ವರನ ಪೋಷಕರು ವಧುವಿನ ಕುಟುಂಬಕ್ಕೆ ವಿವಾಹ ಸಮಾರಂಭದಲ್ಲಿ ಗೋಮಾಂಸವನ್ನು ಸರಬರಾಜು ಮಾಡಬೇಕು ಎನ್ನುವ ಷರತ್ತು ಒಡ್ಡಿದ್ದರು ಎನ್ನಲಾಗಿದೆ. ಭೋಟ್ ಪೊಲೀಸ್ ಠಾಣೆ ವ್ಯಾಪ್ತಿಯ ದರಿಯಾಘರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.
 
ವಿವಾಹಕ್ಕಿಂತ ಕೆಲ ದಿಮಗಳ ಮುಂಚೆ ಅತಿಥಿಗಳಿಗೆ ಗೋಮಾಂಸ ಬಡಿಸಲು ಸಿದ್ದರಾಗಿ. ಇಲ್ಲವಾದಲ್ಲಿ ವಿವಾಹ ರದ್ದುಗೊಳ್ಳುವುದಕ್ಕೆ ಸಿದ್ದರಾಗಿ ಎಂದು ವರನ ಕಡೆಯವರು ವಧುವಿನ ಪೋಷಕರಿಗೆ ಷರತ್ತು ಒಡ್ಡಿದ್ದರು ಎನ್ನಲಾಗಿದೆ. 
 
ಗೋಮಾಂಸ ಭಕ್ಷ್ಯ ದೊರೆಯದಿರುವುದರಿಂದ ಆಕ್ರೋಶಗೊಂಡು ಯಾವುದೇ ಸಂಧಾನಕ್ಕೆ ಒಪ್ಪದ ವರನ ಕಡೆಯವರು, ಕೊನೆಗೆ ವಿವಾಹದ ವರದಕ್ಷಿಣೆಯಾಗಿ ಕಾರು ಉಡುಗೊರೆಯಾಗಿ ನೀಡುವಂತೆ ಒತ್ತಡ ಹೇರಿದ್ದಾರೆ.  
 
ವರನ ಕುಟುಂಬದವರು ಗೋಮಾಂಸ ಮತ್ತು ವರದಕ್ಷಿಣೆಯಾಗಿ ಕಾರು ನೀಡುವಂತೆ ಒತ್ತಾಯಿಸತೊಡಗಿದರು. ಕೇಂದ್ರ ಸರಕಾರ ಗೋಮಾಂಸ ನಿಷೇಧಿಸಿರುವುದರಿಂದ ಅದನ್ನು ನಾವು ಹೇಗೆ ಪೂರೈಸಬಲ್ಲೆವು? ಎಂದು ವಧುವಿನ ತಾಯಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  
 
ವಧುವಿನ ಪೋಷಕರು ಪೊಲೀಸ್ ಠಾಣೆಯಲ್ಲಿ ವರ ಮತ್ತು ಆತನ ಬಂಧುಗಳ ವಿರುದ್ಧ ದೂರು ದಾಖಲಿಸಿದ್ದು ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/ 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments